ETV Bharat / state

ದೆಹಲಿಯಿಂದ ದಿಢೀರ್​ ದೌಡಾಯಿಸಿ ಅಪಾರ್ಟ್​​ಮೆಂಟ್ ಬಾಕಿ ಪಾವತಿಸಿದ ಜಮೀರ್ - ದೆಹಲಿಯಿಂದ ದೌಡಾಯಿಸಿ ಅಪಾರ್ಟ್​​ಮೆಂಟ್ ಬಾಕಿ ಹಣ ಪಾವತಿಸಿದ ಜಮೀರ್

ಜನವರಿ 2012 ರಿಂದ 2021ರ ಆಗಸ್ಟ್ ವರೆಗಿನ ಎನ್​ಕ್ಲೇವ್ ಅಪಾರ್ಟ್​ಮೆಂಟ್​​​ನ 6,79,500 ರೂ. ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿ ನೋಡಿ ಜಮೀರ್ ತಕ್ಷಣ ಬೆಂಗಳೂರಿಗೆ ಆಗಮಿಸಿ ಬಾಕಿ ಪಾವತಿಸಿದ್ದಾರೆ.

zameer-ahmed-khan
ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್
author img

By

Published : Oct 12, 2021, 1:37 PM IST

ಬೆಂಗಳೂರು: ದೆಹಲಿಯಿಂದ ವಾಪಸಾದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ತಾವು ವಾಸವಿದ್ದ ರಂಕಾ ಎನ್​ಕ್ಲೇವ್ ಅಪಾರ್ಟ್​ಮೆಂಟ್​​​ನ ಬಾಕಿ ಹಣ ಪಾವತಿಸಿ (ನಿರ್ವಹಣಾ ವೆಚ್ಚ) ದೆಹಲಿಗೆ ಮರಳಿದ್ದಾರೆ.

ಮುಂದಿನ ವರ್ಷ ನಡೆಯುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ವತಿಯಿಂದ ಪ್ರಚಾರಕ್ಕೆ ತೆರಳಲು ಆಸಕ್ತಿ ಹೊಂದಿರುವ ಜಮೀರ್, ಈ ಸಂಬಂಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೂಲಕ ಎಐಸಿಸಿ ನಾಯಕಿ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯಾಗಿರುವ ಪ್ರಿಯಂಕಾ ಗಾಂಧಿ ಸಂಪರ್ಕ ಸಾಧಿಸಲು ಯತ್ನಿಸಿದ್ದು, ಕಳೆದ ನಾಲ್ಕು ದಿನದಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ.

ಜನವರಿ 2012 ರಿಂದ 2021ರ ಆಗಸ್ಟ್‌ವರೆಗಿನ ಎನ್​ಕ್ಲೇವ್ ಅಪಾರ್ಟ್​ಮೆಂಟ್​​​ನ 6,79,500 ರೂ. ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿ ನೋಡಿ ಜಮೀರ್ ತಕ್ಷಣ ಬೆಂಗಳೂರಿಗೆ ಆಗಮಿಸಿ ಬಾಕಿ ಮೊತ್ತ ಪಾವತಿಸಿದ್ದಾರೆ. ಅಪಾರ್ಟ್​ಮೆಂಟ್​ ಮಾಲೀಕರಿಗೆ ಹಣ ಪಾವತಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿ ಅಲ್ಲಿಂದ ತೆರಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.