ETV Bharat / state

ಸರಣಿ ಅಪಘಾತಗಳಾದ್ರು ಬುದ್ಧಿ ಕಲಿಯದ ಹೈಕ್ಳು: ಫ್ಲೈ ಓವರ್ ಮೇಲೆ ಯುವಕ-ಯುವತಿಯರ ಡ್ಯಾನ್ಸ್​ - ಸರಣಿ ಅಪಘಾತ

ಇತ್ತೀಚೆಗೆ ಬೆಂಗಳೂರಿನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಿಲಿಕಾನ್ ಸಿಟಿ ಫ್ಲೈ ಓವರ್ ಮೇಲೆ ಇತ್ತೀಚೆಗಷ್ಟೇ ಭೀಕರ ಅಪಘಾತ ಸಂಭವಿಸಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಫ್ಲೈ ಓವರ್ ಮೇಲೆ ಯುವಕ-ಯುವತಿಯರು ಮೋಜು ಮಸ್ತಿ ಮಾಡಿದ ವಿಡಿಯೋ ವೈರಲ್​ ಆಗಿದೆ.

flyover
ಫ್ಲೈ ಓವರ್
author img

By

Published : Sep 18, 2021, 9:02 AM IST

ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಸರಣಿ ಅಪಘಾತ ಸಂಭವಿಸಿದರೂ ಕೂಡ ರಾಜಧಾನಿಯ ಫ್ಲೈ ಓವರ್ ಮೇಲೆ ಹದಿಹರೆಯದವರ ಹುಚ್ಚಾಟ ಮುಂದುವರೆದಿದೆ. ಇದಕ್ಕೆ ನಿದರ್ಶನವೆಂಬಂತೆ ನಗರದ ಫ್ಲೈಓವರ್​ ಮೇಲೆ ಕೆಲವರು ಮೋಜು-ಮಸ್ತಿಯಲ್ಲಿ ತೊಡಗಿದ್ದ ವಿಡಿಯೋವೊಂದು ವೈರಲ್​ ಆಗಿದೆ.

ಮೊನ್ನೆಯಷ್ಟೇ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲಾದ ಆ್ಯಕ್ಸಿಡೆಂಟ್​ನಲ್ಲಿ ಇಬ್ಬರು ಮೃತಪಟ್ಟಿದ್ರು. ಅಪಘಾತವಾದ್ರೂ ಕೂಡ ಎಚ್ಚೆತ್ತುಕೊಳ್ಳದ ಯುವಕ-ಯುವತಿಯರು ಅದೇ ಜಾಗದಲ್ಲಿ ಕಾರು ನಿಲ್ಲಿಸಿಕೊಂಡು ಡ್ಯಾನ್ಸ್ ಜೊತೆ ಮೋಜು ಮಸ್ತಿ ಮಾಡಿದ್ದಾರೆ. ರಸ್ತೆ ಮಧ್ಯದಲ್ಲಿ ಭರ್ಜರಿ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫ್ಲೈ ಓವರ್ ಮೇಲೆ ಡ್ಯಾನ್ಸ್ ಮಾಡಿದ ಯುವಕ-ಯುವತಿಯರು

ಜನರ ಆಕ್ರೋಶ :

ಇದೀಗ ಈ ನಾಲ್ಕು ಜನ ಯುವಕ-ಯುವತಿಯರು ತಡೆಗೋಡೆ ಬಳಿ‌ ಭರ್ಜರಿ ಡ್ಯಾನ್ಸ್ ಮಾಡಿರುವ ವಿಡಿಯೋ ನೋಡಿ ಜನಸಾಮಾನ್ಯರು ಕೆಂಡಮಂಡಲವಾಗಿದ್ದಾರೆ. ಇಂತಹ ಹುಚ್ಚಾಟಗಳಿಂದಲೇ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಕ್ರಮ:

ಕೆಎ 01ಎಂಜಿ 1929 ನಂಬರ್​ನ ಕಾರಿನಲ್ಲಿ ಬಂದು ಯುವಕರು ಡ್ಯಾನ್ಸ್ ಮಾಡಿದ್ದಾರೆ. ಕ್ಯಾಮರಾ ನೋಡಿದ್ರೂ ಕೂಡ ಪೋಸ್ ಕೊಟ್ಟು ಡ್ಯಾನ್ಸ್ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.