ETV Bharat / state

ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದ ಮಗಳ‌ ಪ್ರಿಯಕರನ ಹತ್ಯೆ ಆರೋಪ: ಯುವತಿ ತಂದೆ ಬಂಧನ - ಈಟಿವಿ ಭಾರತ ಕನ್ನಡ

ತಮ್ಮ ಮಗಳೊಂದಿಗೆ ಮದುವೆ ಮಾಡಿಕೊಡುವಂತೆ ನಿವೇದಿಸಿಕೊಂಡ ಯುವಕನನ್ನು ಯುವತಿಯ ತಂದೆ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ.

ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದ ಮಗಳ‌ ಪ್ರಿಯಕರನ ಹತ್ಯೆ ಆರೋಪ

author img

By ETV Bharat Karnataka Team

Published : Nov 21, 2023, 9:43 PM IST

ಬೆಂಗಳೂರು: ತಮ್ಮ ಮಗಳನ್ನ ಮದುವೆ‌ ಮಾಡಿಕೊಡುವಂತೆ ದುಂಬಾಲು ಬಿದ್ದಿದ್ದ ಯುವಕನನ್ನ ಚಾಕುವಿನಿಂದ ತಿವಿದು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಆರೋಪದಡಿ ಯುವತಿಯ ತಂದೆಯನ್ನ ಆಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡೇವಿಡ್ (22) ಎಂಬ ಯುವಕನ ಕೊಲೆ ಮಾಡಿದ ಆರೋಪದಡಿ ವಿಲ್ಸನಗಾರ್ಡನ್ ವಿನಾಯಕ್ ನಗರದ ನಿವಾಸಿ ಮಂಜುನಾಥ್ ಎಂಬಾತನನ್ನ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಆಟೋ ಚಾಲಕನಾಗಿರುವ ಮಂಜುನಾಥ್, ಮಗಳನ್ನ ಮೃತ ಡೇವಿಡ್ ಪ್ರೀತಿಸುತ್ತಿದ್ದ. ಯುವತಿ ಸಹ ಡೇವಿಡ್​​ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಕೆಲ ತಿಂಗಳಿಂದ ಇಬ್ಬರು ಓಡಾಡಿಕೊಂಡಿದ್ದರು. ಈ ಮಧ್ಯೆ ತಮ್ಮ ಮಗಳನ್ನ ಮದುವೆ ಮಾಡಿಕೊಡುವಂತೆ ತಂದೆ ಮಂಜುನಾಥ್ ಬಳಿ ಡೇವಿಡ್ ನಿವೇದಿಸಿಕೊಂಡಿದ್ದ. ಇದಕ್ಕೆ ಆರೋಪಿ ಸಮ್ಮತಿ ಸೂಚಿಸಲಿರಲಿಲ್ಲ. ಇಬ್ಬರ ನಡುವೆಯೂ ಕೆಲ‌ ದಿನಗಳಿಂದ ಮಾತಿನ ಚಕಮಕಿ‌ ನಡೆಯುತ್ತಿತ್ತು. ಮದುವೆಗೆ ಒಪ್ಪದಿದ್ದರೆ ಮಗಳ ಜೊತೆಗಿರುವ ಫೋಟೋ ಹಾಗೂ ವಿಡಿಯೊ ವೈರಲ್ ಮಾಡುವುದಾಗಿ ಡೇವಿಡ್ ಬೆದರಿಕೆ ಹಾಕಿದ್ದ.

ಮಗಳ ಮಾನ ಮಾರ್ಯಾದೆ ಹೋಗಲಿದ್ದು, ಇದರಿಂದ ಭವಿಷ್ಯ ಹಾಳಾಗಲಿದೆ ಎಂದು ಭಾವಿಸಿದ್ದ ಮಂಜುನಾಥ್ ನಿನ್ನೆ‌ ಸಂಜೆ 6.30 ಸುಮಾರಿಗೆ ಅಶೋಕ ನಗರದ ಸುಬ್ಬಣ್ಣ ಗಾರ್ಡನ್ ಬಳಿ ಡೇವಿಡ್​​ನನ್ನ ಕರೆಯಿಸಿಕೊಂಡಿದ್ದ. ಮಾತಿನ ಭರದಲ್ಲಿ ಏಕಾಏಕಿ ಡೇವಿಡ್​​ನನ್ನ ಚಾಕುವಿನಿಂದ ಚುಚ್ಚಿದ್ದಾನೆ. ಅಲ್ಲೇ ಇದ್ದ ಹಾಲೋಬಾಕ್ಸ್ ಕಲ್ಲಿನಿಂದ ಹೊಡೆದು ಸಾಯಿಸಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ‌ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಘಟನೆಗಳು: ತನ್ನ ತಾಯಿಯನ್ನು ಎಂಟು ವರ್ಷಗಳ‌ ಹಿಂದೆ ಕೊಲೆ ಮಾಡಿದ ವ್ಯಕ್ತಿಯನ್ನು ಯುವಕನೊಬ್ಬ ಕಲ್ಲು ಎತ್ತಿ ಹಾಕಿ ಕೊಲೆ‌ ಮಾಡಿರುವ ಘಟನೆ ನಿನ್ನ ರಾತ್ರಿ ಆನೇಕಲ್ - ಹೊಸೂರು ಮುಖ್ಯ ರಸ್ತೆಯ ಸಮಂದೂರು ಗೇಟ್ ಬಳಿ ನಡೆದಿತ್ತು. ಸಮಂದೂರಿನ ನಾರಾಯಣಪ್ಪ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ಯುವಕ ಮಧು ಎಂದು ತಿಳಿದುಬಂದಿದೆ.

ಮೃತ ನಾರಾಯಣಪ್ಪ ಮಧು ತಾಯಿಯನ್ನು 2015ರಲ್ಲಿ ಹತ್ಯೆ ಮಾಡಿ ಐದು ವರ್ಷ ಜೈಲು ಶಿಕ್ಷೆ ಅನುಭವಿಸಿ 3 ವರ್ಷದ ಹಿಂದೆ ಬಿಡುಗಡೆಯಾಗಿದ್ದ. ನಾರಾಯಣಪ್ಪ ಮತ್ತು ಮಧು ಸಂಬಂಧಿಗಳಾಗಿದ್ದು, ಮಧು ಮನೆಯ ಹತ್ತಿರ 10-15 ದಿನದಿಂದ ನಾರಾಯಣಪ್ಪ ಗುರಾಯಿಸುತ್ತಿದ್ದ. ಹೀಗಾಗಿ ತನ್ನ ತಾಯಿಯನ್ನು ಕೊಂದವನೆಂಬ ದ್ವೇಷದಿಂದ ಕೊಲೆ ಮಾಡಿದ್ದಾನೆಂದು ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಘಟನೆ ಬಳಿಕ ಆರೋಪಿ ಮಧು ಪರಾರಿಯಾಗಿದ್ದು, ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಮಹಿಳಾ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ: ಆರೋಪಿ ಬಾಯ್ಬಿಟ್ಟ ಹತ್ಯೆ ಹಿಂದಿನ ಕಾರಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.