ETV Bharat / state

ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯುವತಿಯನ್ನು ವಂಚಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Youth  Congress Protest
ಜಾರಕಿಹೊಳಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
author img

By

Published : Mar 28, 2021, 12:19 PM IST

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ರಮೇಶ್ ಜಾರಕಿಹೊಳಿ ಯುವತಿಯನ್ನು ವಂಚಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಆಕೆ ನೀಡಿರುವ ದೂರಿನ ಅನ್ವಯ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಇದೇ ವೇಳೆ ರಮೇಶ್ ಭಾವಚಿತ್ರಕ್ಕೆ ಪೊರಕೆಯಿಂದ ಹೊಡೆದು, ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಜಾರಕಿಹೊಳಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಇದನ್ನೂ ಓದಿ: ಬೆಳಗಾವಿ: ಸಂತ್ರಸ್ತೆಯ ಪೋಷಕರ ಮನೆಗೆ ಪೊಲೀಸ್ ಬಿಗಿ ಭದ್ರತೆ

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮನೋಹರ್ ಮಾತನಾಡಿ, ರಮೇಶ್ ಜಾರಕಿಹೊಳಿ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಇದೀಗ ಆ ಹುಡುಗಿಯ ಪರಿಚಯವೇ ತನಗಿಲ್ಲ, ಅದು ನಕಲಿ ವಿಡಿಯೋ ಎಂದು ಹೇಳಿಕೆ ನೀಡಿದ್ದಾರೆ. ಈ ಅಸಂಬದ್ದ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಅವರು ನಿಜವಾಗಿ ಗಂಡಸೇ ಆಗಿದ್ದರೆ ಎಸ್‌ಐಟಿ ಮುಂದೆ ಹೋಗಿ, ನಾನು ತಪ್ಪು ಮಾಡಿಲ್ಲ ಎಂದು ವಿಚಾರಣೆ ಎದುರಿಸಲಿ. ಮಾಧ್ಯಮಗಳೆದುರು ಬಂದು ನೀಡಿರುವ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಗಂಡಸು ಯಾರು ಎನ್ನುವುದು ತನಿಖೆಯಿಂದ ಬಯಲಾಗಲಿದೆ. ಸ್ವತಃ ರಮೇಶ್ ಜಾರಕಿಹೊಳಿ ಅವರು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬೇಕು. ವಿಡಿಯೋ ನಕಲಿ ಎಂದು ಹೇಳಿಕೆ ನೀಡಿದ ಮೇಲೆ ಯುವತಿಯ ಹೆಸರನ್ನು ಬಳಸುವ ನೈತಿಕತೆ ಅವರಿಗೆ ಎಲ್ಲಿದೆ?, ನೈಜವಾಗಿ ತಾವು ಮಾಡಿರುವ ತಪ್ಪು ಒಪ್ಪಿಕೊಂಡು ರಾಜ್ಯದ ಜನತೆ ಮುಂದೆ ತಲೆತಗ್ಗಿಸಬೇಕು. ಪೊಲೀಸರಿಗೆ ಶರಣಾಗಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.