ಬೆಂಗಳೂರು: ಪಬ್ ಜೀ ಗೇಮ್ನನ್ನ ಗೇಮ್ ರೀತಿಯಲ್ಲೇ ಆಡುವುದರ ಬದಲು ಅದರಲ್ಲಿ ಬರೋ ಸನ್ನಿವೇಶವನ್ನ ನಿಜವೆಂದು ಭಾವಿಸಿ, ವಾಸ್ತವದಲ್ಲೂ ಹಾಗೇ ವರ್ತಿಸುವ ಪರಿಯನ್ನು ಯುವಕರು ರೂಢಿಸಿಕೊಳ್ಳುತ್ತಿದ್ದಾರೆ ಎಂದು ನಿಮ್ಹಾನ್ಸ್ ತಜ್ಞರಾದ ಮನೋಜ್ ಕುಮಾರ್ ಶರ್ಮಾ ಹೇಳುತ್ತಾರೆ.
ಇದಕ್ಕೆ ತಾಜಾ ಉದಾಹರಣೆ ಎಂದರೆ ಬೆಳಗಾವಿಯಲ್ಲಿ ಯುವಕನೊರ್ವ ಪಬ್ ಜೀ ಗೇಮ್‌ಗೆ ದಾಸನಾಗಿ, ತನ್ನ ತಂದೆಯನ್ನ ಕೊಂದ ಘಟನೆಯು ನಡೆದಿದೆ. ಪಬ್ ಜೀ ಎನ್ನುವ ಆನ್ ಲೈನ್ ಆಟವು ಯುವಕರ ಮನಸ್ಸನ್ನು ಹಾಳು ಮಾಡುತ್ತಿದ್ದು. ಇದೀಗ ಹೆಚ್ಚಿನ ಯುವಕರು ಇದರಲ್ಲೇ ಕಾಲ ಕಳೆಯುತ್ತಿದ್ದಾರೆ. ಅಂದ ಹಾಗೆ ಪಬ್ ಜೀ ಗೇಮ್ಗಾಗಿ ಒಂದಲ್ಲಾ ಎರಡಲ್ಲಾ ದಿನಕ್ಕೆ ಐದಾರು ತಾಸು ಯುವಜನಾಂಗ ಅತ್ಯಮೂಲ್ಯ ಸಮಯ ಮೀಸಲಿಡುತ್ತಿದ್ದಾರೆ. ನಿಮ್ಹಾನ್ಸ್ಗೆ ವಾರದಲ್ಲಿ10ಕ್ಕೂ ಹೆಚ್ಚು ಕೇಸ್ಗಳು ಬರುತ್ತಿದೆ ಎಂದು ತಜ್ಞರು ಹೇಳುತ್ತಾರೆ.
ನಿಮ್ಮ ಮಕ್ಕಳಲ್ಲೂ ವರ್ತನೆ ಬದಲಾಗುತ್ತಿರಬಹುದು ಗಮನಿಸಿ:
ಮೊಬೈಲ್ನಲ್ಲೇ ದಿನ ಕಳೆಯುತ್ತಿರುವ ಯುವಕರ ವರ್ತನೆ ದಿಢೀರ್ ಬದಲಾಗಬಹುದು. ಇದನ್ನ ಪೋಷಕರು ಮೊದಲು ಗಮನಿಸಿ ಅವರಿಗೆ ಸೂಕ್ತ ರೀತಿಯಲ್ಲಿ ತಿಳಿವಳಿಕೆ ಹೇಳುವ ಕೆಲಸ ಮಾಡಬೇಕು ಅಂತಾರೆ ತಜ್ಞರು. ಕೋಪದಿಂದಲೋ ಅಥವಾ ಹೊಡೆದು ಬಡೆದು ಅವರಿಗೆ ಬುದ್ಧಿ ಕಲಿಸುವ ಬದಲು, ಸಮಾಧಾನದಿಂದ ಅವರ ಮನ ಪರಿವರ್ತನೆ ಮಾಡುವ ಕೆಲಸ ಮನೆಯಿಂದಲೇ ಆಗಬೇಕು ಅಂತಾರೆ ತಜ್ಞರು.
ಹೇಗೆಲ್ಲ ವರ್ತಿಸಬಹುದು:
ಪದೇ ಪದೆ ಮೊಬೈಲ್ ನೋಡುವುದು, ಏನೋ ಕಳೆದುಕೊಂಡವರಂತೆ ಕೂರುವುದು, ಸುಖಾ ಸುಮ್ನೆ ಮೊಬೈಲ್ ಕ್ಯಾಮೆರಾದಲ್ಲಿ ಸೆಲ್ಪೀ ತೆಗೆದುಕೊಳ್ಳುವುದು, ಸದಾ ಮೊಬೈಲ್ಗೆ ಜೋತು ಬೀಳುವುದು. ಜನರೊಟ್ಟಿಗೆ ಬೇರೆಯದೇ ಒಬ್ಬಂಟಿಯಾಗಿ ಇರುವುದು ಕಂಡು ಬಂದರೆ ಮನೋ ವೈದ್ಯರ ಬಳಿ ಚಿಕಿತ್ಸೆ ಕೊಡಿಸುವುದು ಉತ್ತಮ.