ETV Bharat / state

ಪತಿಯ ಅಂತ್ಯಕ್ರಿಯೆ ಮಾಡಲಾಗದೇ ಪತ್ನಿ ಗೋಳಾಟ.. ಶವ ಸಂಸ್ಕಾರಕ್ಕೆ ಸಹಾಯ ಮಾಡಿದ ಯುವಕರ ತಂಡ!

author img

By

Published : Jun 3, 2021, 2:42 PM IST

ಪತಿಯ ಶವ ಸಂಸ್ಕಾರ ಮಾಡಲಾಗದೇ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಯ ಸಹಾಯಕ್ಕೆ ಯುವಕರು ನೆರವಾಗಿ ಅಂತ್ಯಕ್ರಿಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Youngers help to woman, Youngers help to woman husband cremation, Youngers help to woman's husband cremation in Bangalore, Bangalore news, Bangalore corona news, ಶವ ಸಂಸ್ಕಾರಕ್ಕೆ ಸಹಾಯ ಮಾಡಿದ ಯುವಕರು, ಮಹಿಳೆಯ ಗಂಡನ ಶವ ಸಂಸ್ಕಾರಕ್ಕೆ ಸಹಾಯ ಮಾಡಿದ ಯುವಕರ, ಬೆಂಗಳೂರಿನಲ್ಲಿ ಶವ ಸಂಸ್ಕಾರಕ್ಕೆ ಸಹಾಯ ಮಾಡಿದ ಯುವಕರ, ಬೆಂಗಳೂರು ಸುದ್ದಿ, ಬೆಂಗಳೂರು ಕೊರೊನಾ ಸುದ್ದಿ,
ಶವ ಸಂಸ್ಕಾರಕ್ಕೆ ಸಹಾಯ ಮಾಡಿದ ಯುವಕರ ತಂಡ

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ನಿಂದ ಕೋವಿಡ್ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. ಆದ್ರೆ ಕೊರೊನಾದಿಂದ ಆಗುತ್ತಿರುವ ಸಾವು ನೋವುಗಳು ಮಾತ್ರ ನಿಯಂತ್ರಣವಾಗಿಲ್ಲ. ಅದ್ರಲ್ಲೂ ಕೋವಿ‌ಡ್‌ನಿಂದ ಮೃತಪಟ್ಟವರೆಂದು ಕುಟುಂಬಸ್ತರೇ ಹತ್ರಕ್ಕೆ ಸುಳಿಯುತ್ತಿಲ್ಲ.

ಇದೇ ರೀತಿಯ ಮನಕಲುಕುವ ಘಟನೆಯೊಂದು ನಗದರಲ್ಲಿ ನಡೆದಿದೆ. ಕೋವಿಡ್ ಸಾವೆಂಬ ಕಾರಣಕ್ಕೆ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲವೆಂದು‌ ಸತ್ತ ಪತಿಯ ಶವದ ಮುಂದೆ ಪತ್ನಿ ಕಣ್ಣೀರಿಟ್ಟಿದ್ದಾಳೆ. ಈ‌ ಹಿಂದೆ ಕೊರೊನಾದಿಂದ ಬಳಲುತ್ತಿದ್ದ ಸವರಿ ಮುತ್ತು ಚಿಕಿತ್ಸೆ ಪಡೆಯಲು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸವರಿ‌ ಮುತ್ತು ಸಾವನ್ನಪ್ಪಿದ್ದಾರೆ. ಪತಿ ಮೃತ ಪಟ್ಟಿರುವ ವಿಷಯ ತಿಳಿದ ಪತ್ನಿ ಆಸ್ಪತ್ರೆಗೆ ದೌಡಾಯಿಸಿದ್ದಾಳೆ. ಆದರೆ, ದುರಾದೃಷ್ಟವಷಾತ್ ಕೋವಿಡ್ ಸಾವೆಂದು ಯಾವ ಸಂಬಂಧಿಕರು ಕೂಡ ಈಕೆಯ ಸಹಾಯಕ್ಕೆ ಮುಂದಾಗಿಲ್ಲ.

ಶವ ಸಂಸ್ಕಾರಕ್ಕೆ ಸಹಾಯ ಮಾಡಿದ ಯುವಕರ ತಂಡ

ಇನ್ನು ಕಿಮ್ಸ್ ಆಸ್ಪತ್ರೆಯ ಮುಂದೆ ಗೋಳಾಡುತ್ತಿದ್ದವಳಿಗೆ ಆಸ್ಪತ್ರೆಯವರೂ ಏನೂ ಮಾಡಲಾಗಲಿಲ್ಲ. ಇದೇ ವೇಳೆ, ಸಂಬಂಧಿಕರು ಇಲ್ಲದೇ ಅನಾಥವಾಗಿ ರೋಧಿಸುತ್ತಿದ್ದವಳ ಸಹಾಯಕ್ಕೆ ಯುವಕರ ತಂಡವೊಂದು ಮುಂದೆ ಬಂದಿದೆ. ಶಪಕತ್ ಅಲಿ, ಅಕೀಬ್ ಖಾನ್, ಸೈಫುಲ್ಲ, ಫಿರ್ದೋಸ್ ಎಂಬ ಯುವಕರ ತಂಡ ಸಹಾಯಕ್ಕೆ ನಿಂತರು.

ಕ್ರೈಸ್ತ ಧರ್ಮದವರೆಂದು ಗೊತ್ತಾದಾಗ ಶವವನ್ನ ಕೊನೆಯ ವಿಧಿ ವಿಧಾನಕ್ಕೆಂದು ಚರ್ಚ್​ಗೆ ಕೊಂಡೊಯ್ದಿದ್ದಾರೆ. ಆದರೆ ಚರ್ಚ್​ನವರೂ ಕೂಡ ಶವದ ಹತ್ತಿರ ಬರಲಿಲ್ಲ. ಕೊನೆಗೇ ಈ ಯುವಕರ ತಂಡವೇ ಕ್ರೈಸ್ತ ಧರ್ಮದ ಪ್ರಕಾರ ಅಂತಿಮ‌ ಸಂಸ್ಕಾರ ನಡೆಸಿ, ಕ್ರೈಸ್ತ ಧರ್ಮದ ಪ್ರಕಾರ ಪ್ರಾರ್ಥನೆ ಸಲ್ಲಿಸಿ, ತಾವೇ ಶವವನ್ನ ಕ್ರಿಶ್ಚಿಯನ್ ಧರ್ಮದ ಪ್ರಕಾರ ಗುಂಡಿಯಲ್ಲಿಳಿಸಿ ಅಂತ್ಯ ಸಂಸ್ಕಾರ ಪೂರ್ಣಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.