ETV Bharat / state

Watch.. ಮೇಲ್ಸೇತುವೆ ಮೇಲೆ ಯುವಕ - ಯುವತಿಗೆ ಕಾರು ಡಿಕ್ಕಿ: ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಸಾವು - car and bike collide in flyover

ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೇಲೆ ಬೈಕ್​ಗೆ ಕಾರು ಡಿಕ್ಕಿಯಾದ ರಭಸಕ್ಕೆ ಫ್ಲೆಓವರ್​ ಮೇಲಿಂದ ಕೆಳಗೆ ಬಿದ್ದು ಯುವಕ-ಯುವತಿ ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ.

flyover
ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಇಬ್ಬರು ಸಾವು
author img

By

Published : Sep 15, 2021, 9:55 AM IST

Updated : Sep 15, 2021, 1:10 PM IST

ಆನೇಕಲ್/ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೇಲೆ ಬೈಕ್​ಗೆ ಕಾರು ಗುದ್ದಿದ ಪರಿಣಾಮ ಮೇಲ್ಸೇತುವೆ ಮೇಲಿಂದ ಕೆಳಗೆ ಬಿದ್ದು ಯುವಕ-ಯುವತಿ ಸಾವನ್ನಪ್ಪಿದ ಭೀಕರ ಅಪಘಾತ ಪ್ರಕರಣ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಇಬ್ಬರು ಸಾವು

ತಮಿಳುನಾಡಿನ ಚೆನ್ನೈ ಮೂಲದ ಯುವಕ ಪ್ರೀತಮ್(30) ಹಾಗೂ ಕೃತಿಕಾ(28) ಮೃತ ದುರ್ದೈವಿಗಳು. ಇಬ್ಬರೂ ಖಾಸಗಿ ಕಂಪನಿವೊಂದರ ಟೆಕ್ಕಿಗಳಾಗಿದ್ದು ಬೆಂಗಳೂರಿನಲ್ಲಿ ವಾಸವಿದ್ದರು. ಸದ್ಯ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಇಬ್ಬರ ಮೃತದೇಹವಿದ್ದು ಅವರ ಸಂಬಂಧಿಗಳಿಗೆ ಪೊಲೀಸರಿಂದ ಮಾಹಿತಿ ರವಾನಿಸಲಾಗಿದೆ. ತಮಿಳುನಾಡಿನಿಂದ ಮೃತರ ಸಂಬಂಧಿಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಇಬ್ಬರ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ 10 ಗಂಟೆ ಬಳಿಕ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರವಾಗಲಿದೆ.

ರಾತ್ರಿ 9:20 ರ ಸಮಯದಲ್ಲಿ ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಆನೇಕಲ್ ತಿರುಪಾಳ್ಯದ (KA01 MR 2802)ಕಾರನ್ನು ಚಾಲಕ ನಿತೇಶ್ (23) ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ರಾಯಲ್ ಎನ್​ಫೀಲ್ಡ್​​ ಬೈಕ್​ಗೆ (TN-01-BD-9218) ಕಾರು ಡಿಕ್ಕಿಯಾದ ರಭಸಕ್ಕೆ ಯುವಕ ಯುವತಿ ಫ್ಲೈ ಓವರ್ ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆರೋಪಿ ಕಾರು ಚಾಲಕ ನಿತೇಶ್​ಗೆ ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ನಿತೇಶ್ ವಿರುದ್ಧ 279, 304(ಎ) ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಅಕ್ರಮವಾಗಿ ಗಾಂಜಾ ಸಾಗಾಟ: ಒಬ್ಬನನ್ನು ಬಂಧಿಸಿದ ಗಲ್​ಪೇಟೆ ಪೊಲೀಸರು

Last Updated : Sep 15, 2021, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.