ETV Bharat / state

ತೆಲುಗು ಯುವನಟ ತಾರಕರತ್ನಗೆ ಲಘು ಹೃದಯಾಘಾತ.. ಬೊಮ್ಮಸಂದ್ರದಲ್ಲಿ ಮುಂದುವರಿದ ಚಿಕಿತ್ಸೆ

ಟಾಲಿವುಡ್​ ಯುವ ನಟನಿಗೆ ಹೃದಯಾಘಾತ - ಟಿಡಿಪಿ ಪಾದಯಾತ್ರೆ ವೇಳೆ ಘಟನೆ - ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಾದ ತಾರಕರತ್ನ

Young Telugu actor Tarakaratna  Telugu actor Tarakaratna has a mild heart attack  Tarakaratna has a mild heart attack in Padayatra  ತೆಲುಗು ಯುವನಟ ತಾರಕರತ್ನ ಲಘು ಹೃದಯಾಘಾತ  ಕೆಲ ನಿಮಿಷಗಳಲ್ಲಿ ಬೊಮ್ಮಸಂದ್ರದ ಎನ್​ಹೆಚ್​ಗೆ ರವಾನೆ  ನಟ ತಾರಕರತ್ನ ಅವರಿಗೆ ಲಘು ಹೃದಯಾಘಾತ  ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ  ನಟ ನಾರಾಯಣ ಹೆಲ್ತ್​ ಸಿಟಿಗೆ ಶಿಫ್ಟ್  ತಾರಕರತ್ನ ಆರೋಗ್ಯದ ಬಗ್ಗೆ ಎನ್​ಟಿಆರ್​ ಕುಟುಂಬ ನಿಗಾ  ತಾರಕರತ್ನ ನಟಿಸಿದ್ದ ಚಿತ್ರಗಳು  ಆಂಧ್ರಕ್ಕೆ ತೆರಳಿತ್ತು ಬೆಂಗಳೂರಿನ ವೈದ್ಯರ ತಂಡ  ಕುಪ್ಪಂನಲ್ಲಿ ಬಾಲಯ್ಯ ಹೇಳಿದ್ದು ಹೀಗೆ
ತೆಲುಗು ಯುವನಟ ತಾರಕರತ್ನ ಲಘು ಹೃದಯಾಘಾತ
author img

By

Published : Jan 28, 2023, 7:32 AM IST

Updated : Jan 28, 2023, 10:20 AM IST

ಹೈದರಾಬಾದ್​/ಬೆಂಗಳೂರು: ಆಂಧ್ರಪ್ರದೇಶದ ತೆಲುಗು ದೇಶಂ ಪಾರ್ಟಿಯ ಯುವಘಳಂ ಪ್ರಚಾರದ ಚಟುವಟಿಕೆಗಳಲ್ಲಿ ತಾರಕರತ್ನ ತೊಡಗಿಸಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕುಪ್ಪಂನ ಪ್ರಮುಖ ಬೀದಿಗಳಲ್ಲಿ ಸಾಗಿದ ಯುವಘಳಂ ಪಾದಯಾತ್ರೆಯಲ್ಲಿ ನಾರಾ ಲೋಕೇಶ್​ರೊಂದಿಗೆ ಹೆಜ್ಜೆ ಹಾಕಿದ್ದ ಸಂದರ್ಭದಲ್ಲಿ ನಟ ತಾರಕರತ್ನ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಟಿಡಿಪಿ ಪಕ್ಷದ ಕಾರ್ಯಕರ್ತರು ಕೂಡಲೇ ಅವರನ್ನು ಕುಪ್ಪಂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆ ಕೃಷ್ಣಗಿರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಕರೆತಂದು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಗೆ ದಾಖಲಿಸಲಾಗಿದೆ.

ಆಸ್ಪತ್ರೆ ಸುತ್ತ-ಮುತ್ತ ಬಿಗಿ ಭದ್ರತೆ: ಕುಪ್ಪಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ನಟ ತಾರಕರತ್ನ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು. ಆದರೆ ಮುಂಜಾಗ್ರತೆಗಾಗಿ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ನಾರಾಯಣ ಹೆಲ್ತ್ ಸಿಟಿಗೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ಅವರನ್ನು ಎನ್​ಹೆಚ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟೇ ಅಲ್ಲ, ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆಯಾಗದಂತೆ ಹಾಗು ಎನ್ ಟಿಆರ್ ಕುಟುಂಬದ ಅಭಿಮಾನಿಗಳ ನೂಕು ನುಗ್ಗಲು ತಡೆಯಲು ಅತ್ತಿಬೆಲೆ, ಸೂರ್ಯಸಿಟಿ, ಹೆಬ್ಬಗೋಡಿಯಲ್ಲಿ ಪೊಲೀಸರನ್ನು‌ ನಿಯೋಜಿಸಲಾಗಿದೆ.

ನಟ ನಾರಾಯಣ ಹೆಲ್ತ್​ ಸಿಟಿಗೆ ಶಿಫ್ಟ್​: ತೆಲುಗಿನ ನಂದಮೂರಿ ಕುಟುಂಬದ ನಟ ತಾರಕರತ್ನ ಅವರನ್ನು ಬೊಮ್ಮಸಂದ್ರ-ಹೆಬ್ಬಗೋಡಿಯ ನಾರಾಯಣ ಹೆಲ್ತ್ ಸಿಟಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆತರಲಾಗಿದೆ. ತಡ ರಾತ್ರಿ 2ಗಂಟೆ ಸುಮಾರಿಗೆ ನಲವತ್ತು ಕಾರುಗಳಲ್ಲಿ ಕುಟುಂಬ ಹಾಗು ಟಿಡಿಪಿ ಪಕ್ಷದ ಕಾರ್ಯಕರ್ತರ ಆಗಮಿಸಿದ್ದರು. ಕುಪ್ಪಂ ಖಾಸಗಿ ಆಸ್ಪತ್ರೆಯಿಂದ 12.50ಕ್ಕೆ ನಿರ್ಗಮಿಸಿದ ತಾರಕರತ್ನ ಇದ್ದ ಆಂಬ್ಯುಲೆನ್ಸ್​ ಝೀರೋ ಟ್ರಾಫಿಕ್ ಮೂಲಕ ಸುಮಾರು 148 ಕಿ.ಮೀ ದೂರವನ್ನು ಕೇವಲ 1 ಗಂಟೆ 25 ನಿಮಿಷದಲ್ಲಿ ಕ್ರಮಸಿ ಎನ್​ಹೆಚ್ ಆಸ್ಪತ್ರೆಗೆ ದಾಖಲಿಸಲಾಯಿತು.. ಈ ವೇಳೆ ತಮಿಳುನಾಡಿನ ಕೃಷ್ಣಗಿರಿ, ಸೂಳಗಿರಿ, ಹೊಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಅತ್ತಿಬೆಲೆ ಗಡಿ ಮೂಲಕ ಚಂದಾಪುರ, ಬೊಮ್ಮಸಂದ್ರ ಮಾರ್ಗವನ್ನು ಝೀರೋ ಟ್ರಾಫಿಕ್​ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಾರಕರತ್ನ ಆರೋಗ್ಯದ ಬಗ್ಗೆ ಎನ್​ಟಿಆರ್​ ಕುಟುಂಬ ನಿಗಾ: ವಿಷಯ ತಿಳಿದ ತಕ್ಷಣ ಆಂಧ್ರದ ಹಿಂದೂಪುರಂ ಶಾಸಕ ಹಾಗೂ ಚಿತ್ರ ನಾಯಕ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿ ಅನಾರೋಗ್ಯಕ್ಕೊಳಗಾದ ತಾರಕರತ್ನ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ತಾರಕರತ್ನ ಅವರ ಆರೋಗ್ಯದ ಬಗ್ಗೆ ಟಿಡಿಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬಾಲಕೃಷ್ಣ ಅವರಿಗೆ ಕರೆ ಮಾಡಿ, ಮಾಹಿತಿ ಪಡೆದಿದ್ದಾರೆ. ಜೂನಿಯರ್ ಎನ್‌ಟಿಆರ್‌ಗೂ ಪರಿಸ್ಥಿತಿ ಬಗ್ಗೆ ವಿವರಿಸಲಾಗಿದೆ.

ತಾರಕರತ್ನ ನಟಿಸಿದ ಚಿತ್ರಗಳು: ಟಾಲಿವುಡ್​ನಲ್ಲಿ ಅನೇಕ ಚಿತ್ರಗಳಲ್ಲಿ ತಾರಕರತ್ನ ನಟಿಸಿದ್ದಾರೆ. ತೆಲುಗಿನಲ್ಲಿ 'ನಂದೀಶ್ವರಡು, ವೆಂಕಟಾದ್ರಿ, ದೇವನೇನಿ, ಮತ್ತು ಮಿಸ್ಟರ್ ತಾರಕ್ ಸೇರಿದಂತೆ ಮತ್ತಿತರ ತೆಲುಗು ಸಿನಿಮಾಗಳಲ್ಲಿ ನಾಯಕ ನಟರಾಗಿ ಮಿಂಚಿದ್ದಾರೆ. ಹತ್ತು ಹಲವು ಅಭಿಮಾನಿ ಯುವ ಸಂಘಗಳನ್ನು ಇವರು ಹೊಂದಿದ್ದಾರೆ.

ಆಂಧ್ರಕ್ಕೆ ತೆರಳಿತ್ತು ಬೆಂಗಳೂರಿನ ವೈದ್ಯರ ತಂಡ: ಎನ್​ಹೆಚ್​ ಆಸ್ಪತ್ರೆಗೆ ದಾಖಲಿಸುವ ಮುನ್ನ ಬೆಂಗಳೂರಿನ‌ ಮಣಿಪಾಲ್ ಆಸ್ಪತ್ರೆಗೆ ತಾರಕರತ್ನ ಅವರನ್ನು ಶಿಫ್ಟ್​ ಮಾಡಲು ಚಿಂತಿಸಲಾಗಿತ್ತು. ಆದ್ರೆ ವೈದ್ಯರ ಮೇರೆಗೆ ಅವರನ್ನು ಎನ್​ಹೆಚ್​​ ಆಸ್ಪತ್ರೆಗೆ ಶಿಫ್ಟ್​ ಮಾಡಲು ತೀರ್ಮಾನಿಸಲಾಗಿತ್ತು. ಹೀಗಾಗಿ ಅನಂತಪುರಂ ಜಿಲ್ಲೆಯ ಕುಪ್ಪಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾರಕರತ್ನ ಅವರನ್ನು ಕರೆತರಲು ಬೆಂಗಳೂರಿನ ವೈದ್ಯರ ತಂಡ ತೆರಳಿತ್ತು. ಬೆಂಗಳೂರು ವೈದ್ಯರ ತಂಡದ ಮೇಲ್ವಿಚಾರಣೆಯಲ್ಲಿ ತಾರಕರತ್ನ ಅವರನ್ನು ಬೆಂಗಳೂರಿನ ಎನ್​ಹೆಚ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಪ್ಪಂನಲ್ಲಿ ಬಾಲಯ್ಯ ಹೇಳಿದ್ದು ಹೀಗೆ: ಈಗ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲಿ ತಾರಕರತ್ನ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ನಿನ್ನೆ ಪಾದಯಾತ್ರೆ ಮುಗಿಸಿ ರಾತ್ರಿ 8.20ಕ್ಕೆ ನಾರಾ ಲೋಕೇಶ್ ಕುಪ್ಪಂ ಆಸ್ಪತ್ರೆಗೆ ತೆರಳಿ ತಾರಕರತ್ನ ಅವರ ಆರೋಗ್ಯ ವಿಚಾರಿಸಿದ್ದರು. ಬಾಲಕೃಷ್ಣ ಪಿಇಎಸ್ ಆಸ್ಪತ್ರೆ ವೈದ್ಯರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ತಾರಕರತ್ನ ಅವರಿಗೆ ಹೃದಯಾಘಾತವಾಗಿದ್ದು, ಎಡಭಾಗದ ಕವಾಟ ಶೇ.90ರಷ್ಟು ಬ್ಲಾಕ್ ಆಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ರಕ್ತದೊತ್ತಡ ಸಾಮಾನ್ಯವಾಗಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಬಾಲಯ್ಯ ಮಾಧ್ಯಮಗಳಿಗೆ ತಿಳಿಸಿದರು.

ಓದಿ: ಬಾಲಯ್ಯ 'ಆಹಾ' ಕಾರ್ಯಕ್ರಮದಲ್ಲಿ ಪವರ್​ ಸ್ಟಾರ್​ ಪವನ್​ ಕಲ್ಯಾಣ್​!

Last Updated : Jan 28, 2023, 10:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.