ಬೆಂಗಳೂರು: ಈಗ ಎಲ್ಲಿ ನೋಡಿದ್ರೂ 'ಹೌದು ಹುಲಿಯಾ' ಡೈಲಾಗ್ ಹವಾ ಜೋರಾಗಿದೆ.ರಾಜಕೀಯ ನಾಯಕರಿಗೆ ಸೀಮಿತವಾಗಿದ್ದ ಈ ಹೌದು ಹುಲಿಯಾ ಡೈಲಾಗ್, ಇದೀಗ ಸಿನಿಮಾ ನಟರು ಹೋದ ಕಡೆಯಲ್ಲಿಯೂ ಸದ್ದು ಮಾಡ್ತಿದೆ.
ಯಂಗ್ ರೆಬೆಲ್ ಅಭಿಷೇಕ್ ಅಂಬರೀಶ್ ಹೋದಲೆಲ್ಲಾ ಹೌದು ಹುಲಿಯಾ ಡೈಲಾಗ್ ಹವಾ ಕ್ರಿಯೇಟ್ ಮಾಡ್ತಿದೆ. ಇತ್ತೀಚೆಗಷ್ಟೇ ಕಾರ್ಯಕ್ರಮದಲ್ಲಿ ಜೂ.ರೆಬಲ್ ಡೈಲಾಗ್ಗೆ ಅಭಿಮಾನಿಯೊಬ್ರು ಹೌದು ಹುಲಿಯಾ ಅಂದಿದ್ದರು. ಇದೀಗ ಅಭಿಮಾನಿಗಳ ಜತೆ ಸೇರಿ ಅಭಿಷೇಕ್ ಕೂಡ ಹೌದು ಹುಲಿಯಾ ಡೈಲಾಗ್ ಹೊಡೆದಿದ್ದಾರೆ.
ನಿನ್ನೆ ಚಿತ್ರದುರ್ಗ ಜಿಲ್ಲೆಯ ಜುಂಜರಗುಂಟೆ ಗ್ರಾಮದಲ್ಲಿ ನಡೆದ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ನಟ ಅಭಿಷೇಕ್ ಅಂಬರೀಶ್ ಹೋಗಿದ್ದರು. ಈ ವೇಳೆ ಮಾತನಾಡಿದ ಅಭಿಷೇಕ್, ಅಂತ ಚಿತ್ರದ ಡೈಲಾಗ್ ಜೊತೆಗೆ ಹೌದು ಹುಲಿಯಾ ಅಂತ ಡೈಲಾಗ್ ಹೊಡೆದಿದ್ರು. ಇನ್ನು ಅಭಿಷೇಕ್ ಅವರಿಗೆ ಜುಂಜರಗುಂಟೆ ಗ್ರಾಮದ ಜನರು ಅದ್ಧೂರಿಯಾಗಿ ಸ್ವಾಗತ ಮಾಡಿದ್ದರು. ಗ್ರಾಮಸ್ಥರ ಪ್ರೀತಿಗೆ ಅಭಿಷೇಕ್ ಮನಸೋತಿದ್ದಾರೆ.