ETV Bharat / state

ಸ್ನೇಹಿತರಿಬ್ರೂ ಸೇರಿಯೇ ಗುಂಡ್ಹಾಕಿದ್ದರು.. ಮತ್ತಿನಲ್ಲಿ ಇಬ್ಬರ ಮಧ್ಯೆ ಕಿರಿಕ್‌.. ಕೊನೆಗೆ ಕೊಲೆಯಲ್ಲಿ ಅಂತ್ಯ!

ವೆಲ್ಡಿಂಗ್​​ ಕೆಲಸ ಮಾಡುವ ಪುರುಷೋತ್ತಮ್ ಮತ್ತು ಗಿರೀಶ್ ಎಂಬಿಬ್ಬರು ಸ್ನೇಹಿತರಾಗಿದ್ದರು. ಜತೆಗೆ ನೆರೆ ಮನೆಯ ನಿವಾಸಿಗಳಾಗಿದ್ದರು. ಇಬ್ಬರು ಮಂಗಳವಾರ ಮಧ್ಯಾಹ್ನದಿಂದ ಗಿರೀಶ್ ಮನೆಯಲ್ಲಿ ಪಾರ್ಟಿ ಮಾಡಿದ್ದರು...

Bangalore
ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ
author img

By

Published : May 6, 2020, 9:52 AM IST

ಬೆಂಗಳೂರು: ಕುಡಿದ ಮತ್ತಿನಲ್ಲಿ ಜಗಳ ವಿಕೋಪಕ್ಕೆ ತಿರುಗಿದಾಗ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದು ಪಾತಕಿಯೊಬ್ಬ ಹತ್ಯೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾರುತಿ ನಗರ ನಿವಾಸಿ ಪುರುಷೋತ್ತಮ್ (34) ಕೊಲೆಯಾದವರು. ವೆಲ್ಡಿಂಗ್​​ ಕೆಲಸ ಮಾಡುವ ಪುರುಷೋತ್ತಮ್ ಮತ್ತು ಗಿರೀಶ್ ಎಂಬಿಬ್ಬರು ಸ್ನೇಹಿತರಾಗಿದ್ದರು. ಜತೆಗೆ ನೆರೆ ಮನೆಯ ನಿವಾಸಿಗಳಾಗಿದ್ದರು. ಇಬ್ಬರು ಮಂಗಳವಾರ ಮಧ್ಯಾಹ್ನದಿಂದ ಗಿರೀಶ್ ಮನೆಯಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಕುಡಿದ ಮತ್ತಿನಲ್ಲಿ ಪುರುಷೋತ್ತಮ್ ಸ್ನೇಹಿತ ಗಿರೀಶ್ ಮೇಲೆ ಹಲ್ಲೆ ನಡೆಸಿದ್ದ.

ಈ ವಿಚಾರಕ್ಕೆ ಸ್ನೇಹಿತನ ಮೇಲೆ ಕೋಪಗೊಂಡಿದ್ದ ಗಿರೀಶ್, ರಾತ್ರಿ 8.40ರ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸ್ನೇಹಿತನನ್ನು ಮಾರುತಿನಗರ ರಸ್ತೆಯಲ್ಲಿ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು, ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಸದ್ಯ ಆರೋಪಿ ಗಿರೀಶ್​​ನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.