ಬೆಂಗಳೂರು : ಹೊಸ ವರ್ಷ ಅಂದ್ರೆ ಕುಡಿದು ತಿಂದು ಎಂಜಾಯ್ ಮಾಡೋದೆ ಕೆಲಸ ಎಂದುಕೊಂಡಿರುವ ಕೆಲವರು ಈ ದಿನ ಮಾಡಬಾರದ ಕೆಲಸ ಮಾಡಿ ಸುದ್ದಿ ಆಗುವುದುಂಟು. ಅದಕ್ಕೆ ಉದಾಹರಣೆಯೆಂಬಂತೆ ಮತ್ತಿನಲ್ಲಿ ಯುವಕನೊಬ್ಬ ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ.
ಕುಡಿದ ಮತ್ತಿನಲ್ಲಿ ಯುವತಿಯನ್ನು ಆತ ತಬ್ಬಿಕೊಳ್ಳಲು ಮುಂದಾಗಿದ್ದಾನೆ. ತಬ್ಬಿಕೊಳ್ಳಲು ಮುಂದಾಗುತ್ತಿದ್ದಂತೆ ಯುವತಿ ಜೋರಾಗಿ ಕಿರುಚಾಡಿ ಕಪಾಳ ಮೋಕ್ಷ ಮಾಡಿದ್ದಾಳೆ.
ಈ ವೇಳೆ ಅಲ್ಲೇ ಇದ್ದ ಮಾಧ್ಯಮದವರ ಕ್ಯಾಮೆರಾ ಕಣ್ಣುಗಳು ಅವರ ಮೇಲೆ ಬೀಳುತ್ತಿದ್ದಂತೆ ಮತ್ತಿನಲ್ಲಿದ್ದ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇನ್ನು ಪೊಲೀಸರು ಸುರಕ್ಷಿತವಾಗಿ ಆಕೆಯನ್ನು ಮನೆಗೆ ಕಳುಹಿಸಲು ಮುಂದಾಗಿದ್ದಾರೆ.
ಓದಿ: ಹೊಸ ವರ್ಷದ ಸಂಭ್ರಮದಲ್ಲಿ ಕೋವಿಡ್ ನಿಯಮ ಗಾಳಿಗೆ.. ಬೆಂಗಳೂರಿನ ಕೆಲ ಪಬ್‌ಗಳಲ್ಲಿ ಜನಸಂದಣಿ..