ಬೆಂಗಳೂರು: ತಂತ್ರಜ್ಞಾನದ ಬೆಳವಣಿಗೆ ಆಧುನಿಕ ಜೀವನ ಶೈಲಿಗೆ ಎಷ್ಟು ಪೂರಕವೋ ಅಷ್ಟೇ ಮಾರಕ. ಅದ್ರಲ್ಲೂ ಅಂತರ್ಜಾಲವೆಂಬ ನವ ಮಾಧ್ಯಮ ಬಂದ ಮೇಲಂತೂ, ಜನರ ಬದುಕು ದುಸ್ತರವಾಗ್ತಿದೆ.
ಕತ್ರಿಗುಪ್ಪೆ ನಿವಾಸಿಯೊಬ್ಬ 2 ವರ್ಷಗಳ ಹಿಂದೆ ರೋಮಿಯೋ ಹೆಸರಿನ ಹೊಮಿಯೋ ಸೆಕ್ಸ್ ಆ್ಯಪ್ನಲ್ಲಿ ರಿಜಿಸ್ಟರ್ ಆಗಿ ಆರೋಪಿ ಸಂದೀಪ್ ಜೊತೆ ಸಂಪರ್ಕದಲ್ಲಿದ್ದ. ಅಲ್ಲಿ ಇಬ್ಬರು ಹೋಮಿಯೊ ಸೆಕ್ಸ್ ಕುರಿತಂತೆ ಚಾಟಿಂಗ್ ಕೂಡ ನಡೆಸ್ತಿದ್ರು. ಇತ್ತೀಚೆಗೆ ಆ ಸಂತ್ರಸ್ತ ಯುವಕ ಆರೋಪಿ ಸಂದೀಪ್ ಜೊತೆ ಸಹವಾಸಬಿಟ್ಟಿದ್ದರೂ ಕೂಡ ಸಂದೀಪ್ ಮಾತ್ರ ಪ್ರತಿದಿನ ಸಂತ್ರಸ್ತನಿಗೆ ಕಿರುಕುಳ ಕೊಡ್ತಿದ್ದ. ಅಲ್ಲದೇ ಸಂತ್ತಸ್ತ ಯುವಕನ ಫೋಟೊ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಲು ಯತ್ನಿಸಿದ್ದಾನೆ.
ಈ ಸಲಿಂಗಕಾಮ ಇಷ್ಟಕ್ಕೆ ನಿಲ್ಲಲಿಲ್ಲ. ಒಮ್ಮೆ ಆರೋಪಿ ಸಂದೀಪ್, ಸಂತ್ರಸ್ತ ಯುವಕನ ಮನೆಗೆ ಬಂದು, ತನ್ನ ಸ್ನೇಹಿತ ಮಧುಕರ್ ಅನ್ನೋನನ್ನು ಕರೆಸಿಕೊಂಡಿದ್ದ. ಆರೋಪಿ ಸಂದೀಪ್ ಸಂತ್ರಸ್ತ ಯುವಕನನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದಾನೆ. ಈ ಕೃತ್ಯದ ಬಳಿಕ ಆರೋಪಿ ಸಂದೀಪ್ ಹಾಗೂ ಮಧುಕರ್ ಸಂತ್ರಸ್ತ ಯುವಕನ ಮನೆಯಲ್ಲಿದ್ದ ಚಿನ್ನಾಭರಣ, ನಗದು, ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂದು ಎಸ್ಕೇಪ್ ಆಗಿದ್ದಾರೆ.
ಹಣ ಕಳೆದುಕೊಂಡ ಯುವಕ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಗೆ ದೂರು ನೀಡಿದ್ದು ಆರೋಪಿ ಸಂದೀಪ್‌ನನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದಾರೆ. ಅಲ್ಲದೇ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಮಧುಕರ್ ಪತ್ತೆಗೆ ಬಲೆ ಬೀಸಿದ್ದಾರೆ.