ಬೆಂಗಳೂರು: ಫೇಸ್ಬುಕ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ಯುವಕನಿಗೆ ಬಲೆ ಬೀಸಿ ಹನಿಟ್ರ್ಯಾಪ್ನಲ್ಲಿ ಬೀಳಿಸಿಕೊಂಡಿದ್ದ ಗ್ಯಾಂಗ್ವೊಂದು ಯುವಕನ ಪ್ರಾಣ ತೆಗೆದಿದೆ. ಅಶ್ಲೀಲ ದೃಶ್ಯ ಹರಿಬಿಡುವುದಾಗಿ ಹೆದರಿಸುತ್ತಿದ್ದ ತಂಡದ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೆ.ಆರ್ ಪುರ ನಿವಾಸಿ ಅವಿನಾಶ್ (26) ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಂಬಿಎ ವ್ಯಾಸಂಗ ಮುಗಿಸಿ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಏನಿದು ಘಟನೆ..?
ಕೆ.ಆರ್.ಪುರದಲ್ಲಿರುವ ಕೋಚಿಂಗ್ ಸೆಂಟರ್‌ಗೂ ಸೇರಿಕೊಂಡಿದ್ದ ಯುವಕ, ಫೇಸ್ಬುಕ್ನಲ್ಲಿ ಸಕ್ರಿಯವಾಗಿದ್ದ, ಈ ನಡುವೆ ನೇಹಾ ಶರ್ಮಾ ಎಂಬ ನಕಲಿ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು.
ಬಳಿಕ ಸಲುಗೆಯಿಂದ ಮಾತನಾಡಿ ವಿಡಿಯೋ ಕರೆ ಮಾಡಲು ಆರಂಭಿಸಿದ್ದಾರೆ. ಕಾಲ ಕ್ರಮೇಣ ಸಲುಗೆ ಬೆಳೆಸಿಕೊಂಡು ಯುವಕನಿಗೆ ತಿಳಿಯದಂತೆ ಅಶ್ಲೀಲ ದೃಶ್ಯಗಳ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಹಂತ ಹಂತವಾಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಯುವಕ ಸಹ ಮಾನಕ್ಕೆ ಅಂಜಿ ಹಣ ನೀಡುತ್ತಾ ಬಂದಿದ್ದು, ಬಳಿಕ ಸಾಲ ಮಾಡಿ ಅವರ ಖಾತೆಗೆ ಹಣ ಹಾಕಿದ್ದಾನೆ.
ಆದರೆ ಇಷ್ಟಕ್ಕೆ ಸುಮ್ಮನಾಗದ ತಂಡ ಪದೇ ಪದೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ದೃಶ್ಯಗಳ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ಇದರಿಂದ ಬೇಸತ್ತಿದ್ದ ಯುವಕ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ರಾಜ್ಯದ 8 ನಗರಗಳಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ: ಸಂಜೆ ಮಾರ್ಗಸೂಚಿ ಬಿಡುಗಡೆ