ETV Bharat / state

ಶಾಸಕ ಎಸ್​ಟಿ ಸೋಮಶೇಖರ್ ಮುನಿಸು: ಯಶವಂತಪುರ ಮಂಡಲ ಮಾಜಿ ಅಧ್ಯಕ್ಷ ಮಾರೇಗೌಡರನ್ನು ಉಚ್ಛಾಟಿಸಿದ ಬಿಜೆಪಿ

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಯಶವಂತಪುರ ಮಂಡಲ ಮಾಜಿ ಅಧ್ಯಕ್ಷ ಮಾರೇಗೌಡರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದೆ.

yesvantpur-mandal-former-president-maregowda-was-expelled-by-bjp
ಶಾಸಕ ಎಸ್​ಟಿ ಸೋಮಶೇಖರ್ ಮುನಿಸಿ: ಯಶವಂತಪುರ ಮಂಡಲ ಮಾಜಿ ಅಧ್ಯಕ್ಷ ಮಾರೇಗೌಡರನ್ನು ಉಚ್ಚಾಟಿಸಿದ ಬಿಜೆಪಿ
author img

By

Published : Aug 20, 2023, 3:13 PM IST

ಬೆಂಗಳೂರು: ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ ಅಸಮಾಧಾನ ಶಮನಕ್ಕೆ ಮುಂದಾಗಿರುವ ರಾಜ್ಯ ಬಿಜೆಪಿ ನಾಯಕರು, ಸೋಮಶೇಖರ್ ಬೇಡಿಕೆಯಂತೆ ಯಶವಂತಪುರ ಮಂಡಲ ಮಾಜಿ ಅಧ್ಯಕ್ಣ ಸಿ.ಎಂ.ಮಾರೇಗೌಡರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿ, ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ ಎಂದು ಸಿ.ಎಂ.ಮಾರೇಗೌಡರನ್ನು ಬಿಜೆಪಿ 6 ವರ್ಷಗಳ ಕಾಲ ಹೊರಹಾಕಿದೆ.

ರಾಜ್ಯ ಶಿಸ್ತು ಸಮಿತಿಯ ಆದೇಶದಂತೆ ನೀವು 2023ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರದ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ, ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಇದರಿಂದ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ ಎಂದು ಪರಿಗಣಿಸಿ, ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿಸಿ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ನಾರಾಯಣ್ ಆದೇಶ ಹೊರಡಿಸಿದ್ದಾರೆ.

Yesvantpur mandal former president Maregowda was expelled by BJP
ಬಿಜೆಪಿಯಿಂದ ಯಶವಂತಪುರ ಮಂಡಲ ಮಾಜಿ ಅಧ್ಯಕ್ಷ ಮಾರೇಗೌಡರನ್ನು ಉಚ್ಚಾಟನೆ

ವಿವಾದದ ಕೇಂದ್ರ ಬಿಂದುವಾಗಿದ್ದ ಮಾರೇಗೌಡ ವಿರುದ್ಧ ಕಡೆಗೂ ಬಿಜೆಪಿ ಕ್ರಮ ಕೈಗೊಂಡಿದೆ. ಒಕ್ಕಲಿಗರ ಸಂಘದ ನಿರ್ದೇಶಕ, ಖಜಾಂಚಿ ಮಾರೇಗೌಡ ವಿರುದ್ಧ ಎಸ್​ಟಿ ಸೋಮಶೇಖರ್ ಸಿಡಿದೆದ್ದು, ಕ್ರಮಕ್ಕೆ ಆಗ್ರಹಿಸಿದ್ದರು. 2016ರಿಂದ ಒಂದು‌ ಅವಧಿಗೆ ಯಶವಂತಪುರ ಬಿಜೆಪಿ ಅಧ್ಯಕ್ಷರಾಗಿದ್ದ ಮಾರೇಗೌಡರ ವಿರುದ್ಧ ಸೋಮಶೇಖರ್ ಪಕ್ಷ ವಿರೋಧಿ ಚಟುವಟಿಕೆ ಆರೋಪ ಮಾಡಿದ್ದರು. ಚುನಾವಣೆ ಮೊದಲಿಂದಲೇ ಇದ್ದ ವೈಮನಸ್ಸು ಚುನಾವಣೆಯ ವೇಳೆ ಹೆಚ್ಚಾಗಿತ್ತು.

ಮೂಲ ಒಕ್ಕಲಿಗ ಗುಂಪಿನ ತಿಕ್ಕಾಟದಿಂದ ಅಸಮಧಾನಗೊಂಡಿದ್ದರು. ತಮ್ಮ ವಿರುದ್ಧ ಕೆಲಸ ಮಾಡಿದ್ದ ಮಾರೇಗೌಡ ಜುಲೈ ಕೊನೆ ವಾರ ಆಚರಿಸಿಕೊಂಡ ಜನ್ಮದಿನದ ವೇಳೆ ಬಿಜೆಪಿ ಬ್ಯಾನರ್​ನಲ್ಲಿ ತಮ್ಮ ಫೋಟೋ ಜೊತೆ ಎಸ್‌ಟಿ ಸೋಮಶೇಖರ್ ಫೋಟೊ ಹಾಕಿದ್ದರು. ಇದಕ್ಕೆ ಸಿಡಿಮಿಡಿಗೊಂಡಿದ್ದ ಸೋಮಶೇಖರ್, ನಮ್ಮ ವಿರುದ್ಧ ಇರುವವರು, ಸೋಲಿಸಲು ಕೆಲಸ ಮಾಡಿದವರು ಜೆಡಿಎಸ್‌ಗೆ ಬೆಂಬಲ ನೀಡಿದವರು ನಮ್ಮ ಫೋಟೋ ಯಾಕೆ ಹಾಕ್ತಾರೆ? ಎಂದು ಬಹಿರಂಗವಾಗಿ ಗುಡುಗಿದ್ದರು.

ಮಾರೇಗೌಡ ಟೀಂ ವಿರುದ್ಧ ಕ್ರಮ ಆಗಬೇಕು ಎಂದು ಪಟ್ಟುಹಿಡಿದಿದ್ದರು. ಇದರ ನಡುವೆಯೇ ಆಪರೇಷನ್ ಹಸ್ತದ ಚರ್ಚೆ ಶುರುವಾಗಿ ಸೋಮಶೇಖರ್ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ನಂತರ ಬೆಂಗಳೂರು ಶಾಸಕರ ಸಭೆ ನಡೆಸಿದ್ದ ಯಡಿಯೂರಪ್ಪ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದರು. ಅದರ ಬೆನ್ನಲ್ಲೇ ಮಾರೇಗೌಡರ ಉಚ್ಛಾಟನೆ ಮಾಡಲಾಗಿದೆ.

ಇದನ್ನೂ ಓದಿ: ಕೋಳಿಯನ್ನು ಕೇಳಿ ಮಸಾಲೆ ಅರೆಯಲ್ಲ: ಬಿಜೆಪಿಗೆ ಡಿ.ಕೆ.ಶಿವಕುಮಾರ್ ಟಾಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.