ಬೆಂಗಳೂರು : ಮುಂಬರುವ ಚುನಾವಣೆಯಲ್ಲಿ 130 ರಿಂದ 135 ಸ್ಥಾನ ಗೆದ್ದು ಸಿದ್ದರಾಮಯ್ಯರನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸುತ್ತೇನೆ, ಇಲ್ಲದಿದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಸಭಾತ್ಯಾಗ ಮಾಡಿದ್ದಕ್ಕೆ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಫುಲ್ ಗರಂ ಆದ ಸಿಎಂ, ಏನು ನೈತಿಕತೆ ಇದೆ ಎಂದು ಅವರು ಪ್ರಶ್ನೆ ಮಾಡುವುದು, ಅವರ ತಲೆ, ಸದನಕ್ಕೆ ಸಿದ್ದರಾಮಯ್ಯ ಬರಲಿ, ವಿಧಾನಸಭೆಯಲ್ಲಿ ಸಿಡಿ ವಿಷಯದ ಬಗ್ಗೆ ಚರ್ಚೆಯಾಗಲಿ. ಅವರು ಏನು ಸಲಹೆ ಕೊಡುತ್ತಾರೋ ಅದರ ಆಧಾರದ ಮೇಲೆ ತನಿಖೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ದೇಶದಲ್ಲಿ ಯಾವುದಾದರೂ ವಿರೋಧ ಪಕ್ಷ ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಿರುವ ಇತಿಹಾಸದ ಉದಾಹರಣೆಗಳು ಇದೆಯೇ. ಇಡೀ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಜಾಸ್ತಿ ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ ಜಾಸ್ತಿಯಾಗಿಲ್ಲ. ಯಾವ ಇಲಾಖೆಗೂ ನಾನು ಹಣ ಕಡಿತ ಮಾಡಿಲ್ಲ. ಕಳೆದ ವರ್ಷ ಕೊಟ್ಟಿದ್ದಕ್ಕಿಂತ ಈ ಬಾರಿ ಇಲಾಖೆಗಳಿಗೆ ಹೆಚ್ಚಿಗೆ ಅನುದಾನ ಕೊಟ್ಟಿದ್ದೇನೆ ಎಂದು ಬಜೆಟ್ ಸಮರ್ಥಿಸಿಕೊಂಡಿದ್ದಾರೆ.
ಓದಿ:ಬ್ರಹ್ಮ ಬಂದಿದ್ರೂ ಇಂಥ ಬಜೆಟ್ ಮಂಡನೆ ಮಾಡಲಾಗುತ್ತಿರಲಿಲ್ಲ: ಆರ್. ಅಶೋಕ್