ETV Bharat / state

ಬಿಎಸ್​ವೈ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್​​ ಮಾಡಿದ ಜ್ಯೋತಿಷಿಗಳು - bsy oath

ಬಿಎಸ್​ವೈ ಪದಗ್ರಹಣವು ಜ್ಯೋತಿಷಿಗಳ ಸಲಹೆಯಂತೆ ನಡೆಯಲಿದ್ದು, ಜ್ಯೋತಿಷಿಗಳು ಎರಡು ಮುಹೂರ್ತ ನೀಡಿದ್ದಾರೆ. ಈ ಮುಹೂರ್ತದಲ್ಲೇ ಯಡಿಯೂರಪ್ಪ ಪದಗ್ರಹಣ ಮಾಡಲಿದ್ದಾರೆ ಎನ್ನಲಾಗ್ತಿದೆ.

ಬಿಎಸ್​ವೈ ಪದಗ್ರಹಣಕ್ಕೆ ಮುಹೂರ್ತ...ಸಂಪುಟ ರಚನೆಗೆ ಆಷಾಢ ಅಡ್ಡಿ?
author img

By

Published : Jul 24, 2019, 10:48 AM IST

ಬೆಂಗಳೂರು: 14 ತಿಂಗಳ ಬಳಿಕ ಕೊನೆಗೂ ದೋಸ್ತಿ ಸರ್ಕಾರ ಪತನವಾಗಿದೆ. ಸರ್ಕಾರ ರಚನೆಗೆ ಬಿಜೆಪಿ ಸಕಲ ಸಿದ್ಧತೆ ನಡೆಸಿದ್ದು, ಬಿ.ಎಸ್​. ಯಡಿಯೂರಪ್ಪ ಅವರ ಪದಗ್ರಹಣವು ಜ್ಯೋತಿಷಿಗಳ ಸಲಹೆಯಂತೆ ನಡೆಯಲಿದೆಯಂತೆ.

ಜ್ಯೋತಿಷಿಗಳು ಎರಡು ಮುಹೂರ್ತ ನೀಡಿದ್ದು, ಗುರುವಾರ ಮಧ್ಯಾಹ್ನ 3.28 ನಿಮಿಷದಿಂದ 3.48 ನಿಮಿಷದವರೆಗೆ ಅಥವಾ ಶುಕ್ರವಾರ ಸಂಜೆ 4 ಗಂಟೆಗೆ ಪ್ರಮಾಣವಚನ ಸ್ವೀಕರಿಸುವಂತೆ ತಿಳಿಸಿದ್ದಾರೆ. ಯಡಿಯೂರಪ್ಪ ಗುರುವಾರದ ಮುಹೂರ್ತದಲ್ಲಿ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ಕಚೇರಿಯಲ್ಲಿಂದು ಮಧ್ಯಾಹ್ನ 12ಗಂಟೆಗೆ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. ಯಡಿಯೂರಪ್ಪ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಆಗಲಿದ್ದಾರೆ. ಸಭೆಯಲ್ಲಿ ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಸಹ ಭಾಗಿಯಾಗುವ ಸಾಧ್ಯತೆಯಿದೆ. ಜೊತೆಗೆ ಸಭೆಯಲ್ಲಿ ರಾಜ್ಯಪಾಲರ ಭೇಟಿ ಬಗ್ಗೆ ನಿರ್ಧರಿಸಲಿದ್ದಾರೆ.

ಆಗಸ್ಟ್ 1ರವೆರೆಗೂ ಆಷಾಢ ಇರುವ ಹಿನ್ನೆಲೆ, ಸಚಿವ ಸಂಪುಟ‌‌ ರಚನೆ ಕುರಿತು ಜ್ಯೋತಿಷಿಗಳ ಸಲಹೆ ಪಡೆದು ಬಿಎಸ್​ವೈ ಮುಂದುವರೆಯಲಿದ್ದಾರೆ ಎಂದು ತಿಳಿದುಬಂದಿದೆ.

Intro:Body:

ಬಿಎಸ್​ವೈ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಮಾಡಿದ ಜ್ಯೋತಿಷಿ! 

ಬೆಂಗಳೂರು: 14 ತಿಂಗಳ ಬಳಿಕ ಕೊನೆಗೂ ದೋಸ್ತಿ ಸರ್ಕಾರ ಪತನವಾಗಿದ್ದು, ಬಿ.ಎಸ್​.ಯಡಿಯೂರಪ್ಪ ನೇತೃತತ್ವದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. 

ಕಮಲ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದ್ದು, ಬಿಎಸ್​ವೈ ಮನೆ ಮುಂದೆ ಇಂದು ಬೆಳಗ್ಗೆಯಿಂದಲೇ ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ. 

ಇನ್ನು ಬಿಎಸ್​ವೈ ಪದಗ್ರಹಣವು ಜ್ಯೋತಿಷಿಗಳ ಸಲಹೆಯಂತೆ ನಡೆಯಲಿದೆಯಂತೆ. ಅಂತೆಯೇ ಜ್ಯೋತಿಷಿಗಳು ಎರಡು ಮುಹೂರ್ತ ನೀಡಿದ್ದಾರಂತೆ. ಗುರುವಾರ ಮಧ್ಯಾಹ್ನ 3.28 ನಿಮಿಷದಿಂದ 3.48 ನಿಮಿಷದವರೆಗೆ ಅಥವಾ ಶುಕ್ರವಾರ ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕರಿಸುವಂತೆ ಜ್ಯೋತಿಷಿಗಳು ಮುಹೂರ್ತ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಯಡಿಯೂರಪ್ಪ ಇದೇ ಮುಹೂರ್ತದಲ್ಲಿ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. 

Conclusion:

For All Latest Updates

TAGGED:

bsy oath
ETV Bharat Logo

Copyright © 2025 Ushodaya Enterprises Pvt. Ltd., All Rights Reserved.