ಬೆಂಗಳೂರು: ರಾಜ್ಯ ಸರ್ಕಾರ 100 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಿತಪ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ ಇದಕ್ಕೆ ಶಹಬಾಸ್ ಗಿರಿ ಕೊಡಬೇಕು ಎಂದು ಹೇಳಿದರು.
ದೇಶದ ಇತಿಹಾಸದಲ್ಲಿ ಕಂಡರಿಯದ ಪ್ರವಾಹ ಬಂದಿದ್ದನ್ನು ಕಂಡಿದ್ದೇವೆ. ಇದು ಯಡಿಯೂರಪ್ಪನವರಿಗೆ ಸವಾಲೋ ಅಥವಾ ಇಲ್ಲವೋ ಅಂತ ಗೊತ್ತಿಲ್ಲ. ಇದೆಲ್ಲದರ ಮಧ್ಯೆಯೂ ಅವರು ಎಲ್ಲವನ್ನೂ ನಿಭಾಯಿಸುವ ಕೆಲಸ ಮಾಡಿದ್ದಾರೆ ಎಂದು ಬಿಎಸ್ವೈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಆಗಿರುತ್ತಿದ್ದರೆ ಏನು ಮಾಡ್ತಿದ್ದರು ಅಂತಾ ನಿಮಗೆಲ್ಲಾ ಗೊತ್ತಿದೆ. ಯಡಿಯೂರಪ್ಪ ಬಹಳ ಮುಂಗೋಪಿ ಅಂತಾ ಬಹಳ ಹಿಂದಿನಿಂದಲೂ ಹೇಳುತ್ತಿದ್ದರು. ಆದರೆ ಎಷ್ಟು ಚೆನ್ನಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. 77 ವರ್ಷದ ಯುವಕ ರಾತ್ರಿ ಹಗಲು ಓಡಾಟ ಮಾಡಿದ್ದನ್ನು ನೋಡಿದ್ದೀರಿ ಎಂದರು. ಅವರ ಮ್ಯಾನೇಜ್ಮೆಂಟ್ ಆಫ್ ಅಡ್ಮಿನಿಸ್ಟ್ರೇಶನ್ ವಂಡರ್ಪುಲ್. 100 ದಿನಕ್ಕೆ 80 ಅಂಕ ಕೊಡಲೇಬೇಕು. ಕೋರ್ಟ್, ಆರೋಪ ಪ್ರತ್ಯಾರೋಪದ ಮಧ್ಯೆಯೂ ಕೆಲಸ ಮಾಡಿದ್ದು ಅದ್ಭುತ ಸಾಧನೆ ಎಂದರು.
ಜಗದೀಶ್ ಶೆಟ್ಟರ್ ವಿದೇಶ ಪ್ರವಾಸದ ಕುರಿತು ಮಾತನಾಡಿದ ಅವರು, ಶೆಟ್ಟರ್ ಮಜಾ ಮಾಡಲು ಹೋಗುತ್ತಿಲ್ಲ. ಬಂಡವಾಳ ಬಂದರೆ ಮಾತ್ರ ಅಭಿವೃದ್ಧಿ ಆಗುತ್ತದೆ. ಎಲ್ಲ ಮುಗಿದ ಮೇಲೆ ಹೋಗುತ್ತೇನೆದರೆ 5 ವರ್ಷ ಆಗಿರುತ್ತದೆ. ಬಂಡವಾಳ ಸೆಳೆಯಲು ಹೋಗುವುದರಲ್ಲಿ ವಿದೇಶಕ್ಕೆ ಹೋಗುವುದರಲ್ಲಿ ತಪ್ಪಿಲ್ಲ. ಹಿಂದೆಲ್ಲಾ ಯಾರೆಲ್ಲಾ ಸಿಂಗಾಪುರ ಬೇರೆ ಕಡೆ ಹೇಗೆಲ್ಲಾ ಹೋಗಿದ್ದಾರೆ ಅಂತಾ ಗೊತ್ತಿದೆ. ಈಗ ವಿರೋಧ ಮಾಡುವವರು ನಾಡಿದ್ದು ಶೆಟ್ಟರ್ ಏನೂ ಮಾಡಿಲ್ಲ ಅಂತಾ ಹೇಳ್ತಾರೆ ಎಂದು ಶೆಟ್ಟರ್ ವಿದೇಶ ಪ್ರವಾಸವನ್ನು ಸಮರ್ಥಿಸಿಕೊಂಡರು.