ETV Bharat / state

ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನಮಾನ ವಾಪಸ್ ನೀಡಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ : ಸಿದ್ದರಾಮಯ್ಯ - Siddaramaih talk about cabinet expansion

ಮೋದಿ ಹೆಸರಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಇದೆ. ದೆಹಲಿಯಲ್ಲಿ ಅರುಣ್ ಜೆಟ್ಲಿ ಹೆಸರಿನಲ್ಲಿ‌ ಕ್ರೀಡಾಂಗಣ ಇದೆ. ದೀನ್ ದಯಾಳ್ ಉಪಾಧ್ಯಾಯ ಹೆಸರಲ್ಲಿ ಮೇಲ್ಸೇತುವೆ ಇದೆ. ವಾಜಪೇಯಿ ಹೆಸರಲ್ಲಿ ಅನೇಕ ಯೋಜನೆಗಳಿವೆ. ಅವುಗಳನ್ನು ನಾವು ಬದಲಾವಣೆ ಮಾಡಿದ್ದೇವೆಯೇ? ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ..

siddaramaih
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
author img

By

Published : Aug 8, 2021, 5:46 PM IST

ಬೆಂಗಳೂರು : ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನಮಾನ ವಾಪಸ್ ನೀಡಿದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ನಾನೇ ಯಡಿಯೂರಪ್ಪಗೆ ಹೇಳೋಣ ಎಂದುಕೊಂಡಿದ್ದೆ. ನಾನು ಹೇಳುವ ಮೊದಲೇ ವಾಪಸ್ ಮಾಡಿದ್ದಾರೆ ಎಂದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದೊರೆಸ್ವಾಮಿ ಶ್ರದ್ಧಾಂಜಲಿ ಸಮಾರಂಭದ ನಂತರ ಸಚಿವರ ಖಾತೆ ಬಗೆಗಿನ ಅಸಮಾಧಾನ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು. ಸಚಿವ ಸ್ಥಾನ ಹಂಚಿಕೆ ಅವರ ಆಂತರಿಕ ವಿಚಾರ. ಇಷ್ಟು ಮಾತ್ರ ನಿಜ ಅನ್ನಿಸುತ್ತಿದೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ.

ಬೊಮ್ಮಾಯಿ ಮುಖ್ಯಮಂತ್ರಿ ಮಾಡಿದಕ್ಕೂ ಅಸಮಾಧಾನವಿದೆ. ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಿದಕ್ಕೂ ಆಕ್ರೋಶವಿದೆ. ಯಾವಾಗ ಏನು ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಯಾವುತ್ತಾದರೂ ಒಂದು ದಿನ ಆಕ್ರೋಶ ಸ್ಫೋಟವಾಗಬಹುದು ಎಂದರು.

ರಾಜೀವ್ ಗಾಂಧಿ ಹೆಸರು ಬದಲಾವಣೆ ಬೇಡ : ರಾಜೀವ್ ಗಾಂಧಿ ಇದ್ದಾಗ ಖೇಲ್ ರತ್ನ ಪ್ರಶಸ್ತಿ ಆರಂಭಿಸಿದ್ದರು. ಬಿಜೆಪಿಗರು ದುರುದ್ದೇಶದಿಂದ ಹೆಸರು ಬದಲಾವಣೆ ಮಾಡುತ್ತಿದ್ದಾರೆ. ಧ್ಯಾನ್ ಚಂದ್ ಹೆಸರಲ್ಲಿ ಇನ್ನೂ ದೊಡ್ಡ ಪ್ರಶಸ್ತಿ ನೀಡಿ. ಆದರೆ, ರಾಜೀವ್ ಗಾಂಧಿ ಹೆಸರು ಬದಲಾವಣೆ ಬೇಡ ಎಂದರು.

ದ್ವೇಷದ ರಾಜಕಾರಣ : ಮೋದಿ ಹೆಸರಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಇದೆ. ದೆಹಲಿಯಲ್ಲಿ ಅರುಣ್ ಜೆಟ್ಲಿ ಹೆಸರಿನಲ್ಲಿ‌ ಕ್ರೀಡಾಂಗಣ ಇದೆ. ದೀನ್ ದಯಾಳ್ ಉಪಾಧ್ಯಾಯ ಹೆಸರಲ್ಲಿ ಮೇಲ್ಸೇತುವೆ ಇದೆ. ವಾಜಪೇಯಿ ಹೆಸರಲ್ಲಿ ಅನೇಕ ಯೋಜನೆಗಳಿವೆ. ಅವುಗಳನ್ನು ನಾವು ಬದಲಾವಣೆ ಮಾಡಿದ್ದೇವೆಯೇ? ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಓದಿ: ಹೆಸರು ಬದಲಿಸಿದ್ದು ರಾಜಕೀಯ ರತ್ನದ್ದಲ್ಲ, ಖೇಲ್ ರತ್ನದ್ದು ; ಸಚಿವ ಅಶ್ವತ್ಥ್ ನಾರಾಯಣ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.