ETV Bharat / state

ಯಡಿಯೂರಪ್ಪ ಜಿಂದಾಲ್​ನಲ್ಲೂ ಕಿಕ್ ಬ್ಯಾಕ್ ಪಡೆದಿದ್ದಾರೆ: ಉಗ್ರಪ್ಪ

ಯಡಿಯೂರಪ್ಪನವರ ಬದಲಾವಣೆ ಚರ್ಚೆಯಾಗ್ತಿದೆ. ಸಿಎಂ ವಿರುದ್ಧ ಕೆಲವರು ತಿರುಗಿಬಿದ್ದಿದ್ದಾರೆ. ಇದರ ಬಗ್ಗೆ ಮಾಧ್ಯಮಗಳಲ್ಲಿ‌ ವರದಿ ಬರ್ತಿದೆ. ಜಿಂದಾಲ್​ಗೆ ಭೂಮಿ ಮಾರಾಟ ಮಾಡಿದ್ದಾರೆ. ಹಾಗಾಗಿ ಸಿಎಂ ತೆಗೆಯಲು ಪ್ರಯತ್ನ ನಡೆದಿದೆ. ಇದರ ಬಗ್ಗೆ ರಾಜ್ಯದ ಜನ ಚರ್ಚೆ ಮಾಡ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.

ಉಗ್ರಪ್ಪ
ಉಗ್ರಪ್ಪ
author img

By

Published : May 31, 2021, 5:08 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಂದಾಲ್​ನಲ್ಲೂ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್​ಗೆ 3,667ಎಕರೆ ಭೂ ಮಾರಾಟ ವಿಚಾರದ ಬಗ್ಗೆ ಆರೋಪ ಮಾಡಿದರು.

ಎಕರೆಗೆ 1.25 ಲಕ್ಷ ರೂ. ಸರ್ಕಾರ ನೀಡಿತ್ತು. ಅಲ್ಲಿ ಪ್ರಸ್ತುತ ಎಕರೆಗೆ 50 ಲಕ್ಷ ರೂ. ದರವಿದೆ. ಯಡಿಯೂರಪ್ಪ ಮೇಲೆ ಹಿಂದೆ ಚೆಕ್ ಮೂಲಕ ಹಣ ಪಡೆದ ಆರೋಪವಿತ್ತು. ಆರ್​ಟಿಜಿಎಸ್ ಮೂಲಕವೂ ಲಂಚ ಪಡೆದಿದ್ದರು. ಇದೀಗ ಇಲ್ಲಿಯೂ ಕಿಕ್​ಬ್ಯಾಕ್​​ ಪಡೆದಿದ್ದಾರೆ. ಇದು ಬಿಜೆಪಿ ಕೇಂದ್ರ ನಾಯಕರ ಗಮನಕ್ಕೆ ಬಂದಿದೆ. ಹಾಗಾಗಿ ಭೂ ಮಾರಾಟ ಕ್ಯಾನ್ಸಲ್ ಮಾಡಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ

ಯಡಿಯೂರಪ್ಪನವರ ಬದಲಾವಣೆ ಚರ್ಚೆಯಾಗ್ತಿದೆ. ಸಿಎಂ ವಿರುದ್ಧ ಕೆಲವರು ತಿರುಗಿಬಿದ್ದಿದ್ದಾರೆ. ಇದರ ಬಗ್ಗೆ ಮಾಧ್ಯಮಗಳಲ್ಲಿ‌ ವರದಿ ಬರ್ತಿದೆ. ಜಿಂದಾಲ್​ಗೆ ಭೂಮಿ ಮಾರಾಟ ಮಾಡಿದ್ದಾರೆ. ಹಾಗಾಗಿ ಸಿಎಂ ತೆಗೆಯಲು ಪ್ರಯತ್ನ ನಡೆದಿದೆ. ಇದರ ಬಗ್ಗೆ ರಾಜ್ಯದ ಜನ ಚರ್ಚೆ ಮಾಡ್ತಿದ್ದಾರೆ ಎಂದರು.

ತೋರಣಗಲ್​ನಲ್ಲಿ ಸ್ಟೀಲ್ ಪ್ಯಾಕ್ಟರಿ ತೆರೆಯುವ ನಿರ್ಧಾರದ ಕುರಿತು ಮಾತನಾಡಿ, ಹಿಂದೆ ಕೇಂದ್ರ ಸರ್ಕಾರವೇ ನಿರ್ಧರಿಸಿತ್ತು. ಆದರೆ ಸ್ಟೀಲ್ ಫ್ಲಾಂಟ್ ತೆರೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಕೇಂದ್ರ 9,341 ಎಕರೆಯನ್ನು ರಾಜ್ಯಕ್ಕೆ ಹಸ್ತಾಂತರಿಸಿತು. 1995 ರಲ್ಲಿ 6.5 ಕೋಟಿಗೆ ಹಸ್ತಾಂತರಿಸಿತ್ತು. ರಾಜ್ಯ ಸರ್ಕಾರ ಅಲ್ಲಿ ಸ್ಟೀಲ್ ಪ್ಲಾಂಟ್ ಮಾಡಲು ಆಗಲಿಲ್ಲ. ಹಾಗಾಗಿ ಜಿಂದಾಲ್​ಗೆ ಭೂಮಿಯನ್ನ ನೀಡಿದೆ.

9,341 ಎಕರೆಯಲ್ಲಿ 4,045 ಎಕರೆ ಕೊಟ್ಟಿದೆ. 2004 ರಲ್ಲಿ ಜಿಂದಾಲ್​ಗೆ ಭೂಮಿ ನೀಡಿದೆ. ಮತ್ತೆ 2006 ರಲ್ಲಿ 3,667 ಎಕರೆ ಲೀಸ್​ಗೆ ಕೊಟ್ಟಿದೆ. ಲೀಸ್ ಕಂ ಸೇಲ್ ಆಧಾರದಲ್ಲಿ ಕೊಟ್ಟಿದೆ. ಕಂಪನಿ ಪ್ರಸ್ತುತ 12 ಮಿಲಿಯನ್ ಟನ್ ಐರನ್ ಉತ್ಪಾದಿಸುತ್ತಿದೆ. 25 ಸಾವಿರ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಆದರೆ ಇದೇ ಭೂಮಿಯನ್ನು ಈಗ ಸೇಲ್ ಮಾಡಿದೆ.

ಎಕರೆಗೆ 1.25 ಲಕ್ಷ ರೂ. ಕೊಟ್ಟಿತ್ತು. ಸರ್ಕಾರ 25 ಲಕ್ಷ ರೂ. ಎಕರೆಗೆ ಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ. ಸರ್ಕಾರಕ್ಕೆ ಸುಮಾರು 1 ಸಾವಿರ ಕೋಟಿ ರೂ. ಬರುತ್ತಿತ್ತು. ಇದರಿಂದ ಕೋವಿಡ್​ಗೆ ಬಳಸಬಹುದಿತ್ತು. ಆದರೆ ಕೇವಲ 1.25 ಲಕ್ಷ ರೂ. ಎಕರೆಗೆ ನೀಡಿದೆ. ಇದರಿಂದ ಎಷ್ಟು ಕಿಕ್ ಬ್ಯಾಕ್ ಬಂದಿರಬಹುದು. ಅದಕ್ಕೆ ಅವರದೇ ಹೈಕಮಾಂಡ್ ಬ್ರೇಕ್ ಹಾಕಿದೆ. ಭೂಮಿ‌ ಮಾರಾಟವನ್ನು ವಾಪಸ್ ಪಡೆಯುವಂತೆ ಮಾಡಿದೆ ಎಂದು ಹೇಳಿದರು.

ಮೋದಿ ಒಬ್ಬ ದುರ್ಯೋಧನ. ನಾನು ಸಂಸತ್ತಿನಲ್ಲೇ ಇದನ್ನ ಹೇಳಿದ್ದೆ. ಆದರೆ ಈಗ ಹೇಳ್ತೇನೆ ಮೋದಿ ‌ಆಧುನಿಕ ಭಸ್ಮಾಸುರ. ಶೇ 9 ಜಿಡಿಪಿ ದರ ಶೇ 2.6 ಕ್ಕೆ ಕುಸಿದಿದೆ. ಶಿಕ್ಷಣ, ಕೃಷಿ, ಆರೋಗ್ಯ ಕ್ಷೇತ್ರ ಹಾಳಾಗಿದೆ. ದೇಶವನ್ನ ಈ ಸ್ಥಿತಿಗೆ ಕೊಂಡೊಯ್ದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಪ್ರಕಾಶ ರಾಥೋಡ್ ಹಾಗೂ ಮಾಜಿ ಮೇಯರ್ ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.