ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಹಿನ್ನೆಲೆ ತಮ್ಮ ತಂದೆಯ ಆರೋಗ್ಯ ಸ್ಥಿತಿ ಬಗ್ಗೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ
ಮಾಹಿತಿ ನೀಡಿದ್ದಾರೆ.
ತಂದೆಯವರಿಗೆ ಹೃದಯ ಸಮಸ್ಯೆ ಇತ್ತು. ಡಾ. ರಮೇಶ್ ಅವರು ಮೊದಲಿನಿಂದ ನೋಡಿಕೊಳ್ಳುತ್ತಿದ್ದರು. ಈ ಹಿಂದೆ ಇದೇ ರೀತಿ ಆಂಜಿಯೋಪ್ಲ್ಯಾಸ್ಟ್ ಆಗಿತ್ತು ಎಂದು ತಿಳಿಸಿದ್ದಾರೆ.
ಹೃದಯಕ್ಕೆ ರಕ್ತ ಪರಿಚಲನೆ ಸರಿಯಾಗಿ ಆಗುತ್ತಿಲ್ಲ ಎಂಬುದನ್ನು ವೈದ್ಯರು ತಪಾಸಣೆ ವೇಳೆ ತಿಳಿಸಿದ್ದಾರೆ. ಅಂಜಿಯೋ ಗ್ರಾಂ ಮಾಡಬೇಕೆಂದು ವೈದ್ಯರ ಸಲಹೆ ಮೇರೆಗೆ ಆಂಜಿಯೋಪ್ಲ್ಯಾಸ್ಟ್ ಚಿಕಿತ್ಸೆಗೆ ತಂದೆಯವರು ಒಳಗಾಗಿದ್ದಾರೆ ಎಂದ ಅವರು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದರು.