ETV Bharat / state

ಯಡಿಯೂರಪ್ಪ ನಮ್ಮ ನಾಯಕ, ಮುಖ್ಯಮಂತ್ರಿ ಆಗಿ ಅವಧಿ ಮುಗಿಸಲಿದ್ದಾರೆ: ಬೊಮ್ಮಾಯಿ

ಯಡಿಯೂರಪ್ಪ ನಾಯಕತ್ವದಲ್ಲಿ ನಾವೆಲ್ಲಾ ಬಂದಿದ್ದೇವೆ. ಅವರ ನಾಯಕತ್ವದಲ್ಲೇ ನಾವು ಮುಂದುವರೆಯಲಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

basavaraja-bommai
ಬಸವರಾಜ ಬೊಮ್ಮಾಯಿ
author img

By

Published : Jun 6, 2021, 4:54 PM IST

ಬೆಂಗಳೂರು: ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಹಗಲಿರುಳು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ ನಾಯಕತ್ವ ಬದಲಾವಣೆ ಹೇಳಿಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಘಾಸಿ ಮಾಡಿದೆ. ಆದರೆ ಯಡಿಯೂರಪ್ಪ ನಾಯಕತ್ವದಲ್ಲೇ ನಾವು ಮುಂದುವರೆಯಲಿದ್ದೇವೆ, ಮುಖ್ಯಮಂತ್ರಿಯಾಗಿ ಅವರು ಅವಧಿ ಮುಗಿಸಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದರು

ಸಿಎಂ ನಿವಾಸ ಕಾವೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹೋರಾಟದಿಂದ ಬಂದವರು, ಜನರಿಂದ‌ ಬಂದವರು. ಜನರ ಸಂಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡಿದವರು. ಅಧಿಕಾರ ಬಂದಾಗ ಆ ಜನರಿಗೋಸ್ಕರ ಅಭಿವೃದ್ಧಿ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ, ಪಕ್ಷ ನಿಷ್ಠರಾಗಿದ್ದಾರೆ ಎಂದರು.

2018 ರಲ್ಲಿ ಬಹುಮತ ಯಡಿಯೂರಪ್ಪ ಹೆಸರಿನಲ್ಲಿದೆ. ಹಳ್ಳಿ ಹಳ್ಳಿಗೆ ಹೋಗಿ ಪರಿವರ್ತನೆ ಯಾತ್ರೆ ಮಾಡಿ ಮತ ಕೇಳಿದಾಗ ಅವರಿಗೆ ಅತಿ ಹೆಚ್ಚು ಸ್ಥಾನ ಕೊಟ್ಟಿದ್ದಾರೆ. ಯಡಿಯೂರಪ್ಪ ನಾಯಕತ್ವಕ್ಕೆ ಹೆಚ್ಚಿನ ಸ್ಥಾನ ಕೊಟ್ಡಿದ್ದಾರೆ, ಬಹುಮತ ಇಲ್ಲದಾಗ 18 ಶಾಸಕರು ಯಡಿಯೂರಪ್ಪರನ್ನು ನಂಬಿ ಅವರನ್ನು ಸಿಎಂ ಮಾಡಲು ಬಂದ ಕಾರಣ ಸರ್ಕಾರ ರಚನೆಯಾಯಿತು. ಈಗ ಕೆಲವರು ಅಪಸ್ವರದ ಮಾತನಾಡುತ್ತಿದ್ದಾರೆ. ಅವರು ಸ್ವಲ್ಪ ಗಮನಿಸಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಈಗ ಅಪಸ್ವರ ಎತ್ತಿರುವವರೇ ಈ ಸರ್ಕಾರ ತರಲು ಏನೆಲ್ಲಾ ಪ್ರಯತ್ನ ಮಾಡಿದ್ದಾರೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದರು

ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಎರಡು ಬಾರಿ ಪ್ರವಾಹ, ಕೊರೊನಾ ಬಂತು. ಇದರ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಅವರು ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ, ಕಾಲ ಕಾಲಕ್ಕೆ ನಿರ್ಣಯ ಕೈಗೊಳ್ಳುತ್ತಿದ್ದಾರೆ. ಪ್ರತಿದಿನ ಸಭೆ ನಡೆಸಿ ನಿರ್ಧಾರ ಮಾಡುತ್ತಿದ್ದಾರೆ, ರಾಜ್ಯದ ಮೂಲೆ ಮೂಲೆ ಸ್ಥಿತಿಗತಿ ತಿಳಿದು ಹಣಕಾಸು ಬಿಡುಗಡೆ ಮಾಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಬೇರೆ ಬೇರೆ ರಾಜ್ಯಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣ ನಿಲ್ಲಿಸಿದ್ದಾರೆ. ಸರ್ಕಾರಿ ನೌಕರರ ವೇತನ ಕಡಿತವಾಗಿದೆ. ಆದರೆ ಇಲ್ಲಿ ಅದಾಗಿಲ್ಲ, ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು ಹಗಲಿರುಳು ದುಡಿಯುತ್ತಿರುವ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಪದೇ ಪದೇ ನಾಯಕತ್ವ ಬದಲಾವಣೆಯ ಗಾಳಿ ಸುದ್ದಿ ಬಿಡುತ್ತಿದ್ದಾರೆ, ಮುಂದಿನ ಸಿಎಂ ನಾನು, ಮುಂದಿನ ಸಿಎಂ ನೀನು ಎನ್ನುವ ವಿಚಾರ ಬಿಂಬಿಸುತ್ತಿರುವುದರಿಂದ ಯಡಿಯೂರಪ್ಪ ಅವರಿಗೆ ಬಹಳಷ್ಟು ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾವು ಈಗ ಸಿಎಂ ಜೊತೆ ಮಾತನಾಡಿದಾಗ ಅವರ ಮನಸ್ಸಿನ ನೋವು ಅರ್ಥವಾಗುತ್ತಿದೆ. ಈ ನೋವಿನಲ್ಲೂ ಅವರು ಕರ್ತವ್ಯ ಪ್ರಜ್ಞೆ ಬಿಟ್ಟಿಲ್ಲ, ಕೋವಿಡ್, ಆಡಳಿತ ವಿಚಾರದ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ತಮ್ಮ ಕರ್ತವ್ಯ ಪ್ರಜ್ಞೆ ಮರೆಯದೆ ಪ್ರತಿಕ್ಷಣ ಕೆಲಸ ಮಾಡುತ್ತಿದ್ದಾರೆ. ಹೈಕಮಾಂಡ್ ಕೂಡ ಯಡಿಯೂರಪ್ಪ ಪಕ್ಷದಲ್ಲಿ, ಸಂಘಟನೆಯಲ್ಲಿ ಹಿರಿಯ ಎಂದು ಗುರುತಿಸಿದ್ದು, ಯಾವುದೇ ಗೊಂದಲ ಹೈಕಮಾಂಡ್ ನಲ್ಲಿ ಇಲ್ಲ ಎನ್ನುವುದು ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಷಿ, ಸಿ.ಟಿ ರವಿ ಮಾತಿನಲ್ಲಿ ಸ್ಪಷ್ಟವಾಗಿದೆ ಎಂದರು.

ಯಡಿಯೂರಪ್ಪ ನಾಯಕತ್ವದಲ್ಲಿ ನಾವೆಲ್ಲಾ ಬಂದಿದ್ದೇವೆ. ಅವರ ನಾಯಕತ್ವದಲ್ಲೇ ನಾವು ಮುಂದುವರೆಯಲಿದ್ದೇವೆ. ಮುಖ್ಯಮಂತ್ರಿಯಾಗಿ ಈ ಅವದಿ ಮುಗಿಸಲಿದ್ದಾರೆ. ಕಷ್ಟ ಕಾಲದಲ್ಲಿ ಜನರ ದುಃಖ ದುಮ್ಮಾನ ದೂರಮಾಡಬೇಕು, ಅವರ ನಾಯಕತ್ವವೇ ನಮಗೆ ಶ್ರೀರಕ್ಷೆ. ಇದೇ ಭಾವನೆ ಎಲ್ಲರದ್ದೂ ಆಗಿದೆ.ಇಂದಿನಿಂದ ಇಂತಹ ಸಣ್ಣಪುಟ್ಟ ವಿಚಾರಕ್ಕೆ ಸಂಪೂರ್ಣ ವಿರಾಮ ಹಾಕಿ, ಕೋವಿಡ್ ವಿರುದ್ಧ ಸಮರವನ್ನು ಯಶಸ್ವಿಯಾಗಿ ಸಾರುವತ್ತ ಗಮನ ಹರಿಸಲಾಗುತ್ತದೆ ಎಂದರು.

ಪದೇ ಪದೆ ನಾಯಕತ್ವ ಬದಲಾವಣೆ ಮಾತುಗಳನ್ನಾಡಿದಾಗ ಹಗಲಿರುಳು ಕೆಲಸ‌ ಮಾಡಿದರೂ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎನ್ನುವ ನೋವು ತರಿಸಲಿದೆ. ಹಾಗಾಗಿ, ಪಕ್ಷದಲ್ಲಿ ಸಭ್ಯತೆ,‌ ಶಿಸ್ತು ತರಬೇಕು. ಹೈಕಮಾಂಂಡ್​ಗೂ ಇದನ್ನು ಮುಟ್ಟಿಸಬೇಕು ಎಂದು ನಿರ್ಧರಿಸಲಾಗಿದೆ ಎಂದರು.

ಸಿ ಟಿ ರವಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಿಜಯನಗರ ಅರಸರ ಕಥೆಯ ಕುರಿತು ಪ್ರತಿಕ್ರಿಯೆ ನೀಡಲು ಬಸವರಾಜ ಬೊಮ್ಮಾಯಿ ನಿರಾಕರಿಸಿದರು. ಕಥೆ ಉಪ ಕಥೆಗಳು ಯಾರು ಹೇಳಿದ್ದಾರೋ, ಅವರೇ ಉತ್ತರ ನೀಡಬೇಕು. ನಾನು ಉತ್ತರ ಕೊಡಲ್ಲ, ನಾಯಕತ್ವದ ಗೊಂದಲವಿಲ್ಲ ಎಂದು ರವಿ ಹೇಳಿದ್ದಾರೆ. ಹೈಕಮಾಂಡ್ ನಲ್ಲಿಯೂ ಗೊಂದಲ ಇಲ್ಲ ಎಂದರು.

ಓದಿ: ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ: ಸಿಎಂ ಬಿಎಸ್​ವೈ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.