ETV Bharat / state

ಸಿದ್ದರಾಮಯ್ಯನವರು ಮತ್ತೊಮ್ಮೆ ಸಿಎಂ ಆಗಿ ಧರ್ಮಾಕ್ರಸಿಯನ್ನು ಮತ್ತೆ ಡೆಮಾಕ್ರಸಿ ಮಾಡಲಿ : ನಾದಬ್ರಹ್ಮ ಹಂಸಲೇಖ - ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಂಸಲೇಖ ಭಾಗಿ

ನಾನು ಭಯಪಡುವ ವ್ಯಕ್ತಿ ಅಲ್ಲ. ಮಾಗಡಿ ರೋಡಿನಲ್ಲಿ ದೊಡ್ಡ ದೊಡ್ಡ ಪೋಲಿ ಆಟಗಳನ್ನು ಆಡಿ ಬಂದವನು. ಅದಕ್ಕೊಂದು ಚರಿತ್ರೆಯೇ ಇದೆ. ಈಗ ನನಗೆ ಎಪ್ಪತ್ತು, ತಿನ್ನೋದು ಒಪ್ಪತ್ತು, ಎರಡು ಹೊತ್ತು ಬಸವನ ಹಸಿವು ಪ್ರೊಟೀನ್ ಕೊಡುತ್ತೆ..

Writer SG Siddaramaiah book release program
ಸಾಹಿತಿ ಎಸ್​ಜಿ ಸಿದ್ದರಾಮಯ್ಯನವರ ಪುಸ್ತಕ ಬಿಡುಗಡೆ ಕಾರ್ಯಕ್ರಮ
author img

By

Published : Dec 26, 2021, 7:11 PM IST

ಬೆಂಗಳೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಗಳಾಗಿ ಬಂದು ಧರ್ಮಾಕ್ರಸಿಯನ್ನು ಮತ್ತೆ ಡೆಮಾಕ್ರಸಿ ಮಾಡಲಿ ಎಂದು ನಾದಬ್ರಹ್ಮ ಹಾಗೂ ಸಾಹಿತಿ ಹಂಸಲೇಖ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಸಾಹಿತಿ ಎಸ್​​.ಜಿ. ಸಿದ್ದರಾಮಯ್ಯನವರ ಆತ್ಮಕಥೆ 'ಯರೆಬೇವು' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೊದಲ ಬಾರಿ ನಾನು ಬರೆದುಕೊಂಡು ಭಾಷಣ ಮಾಡ್ತಿದ್ದೇನೆ. ಬರೆದುಕೊಳ್ಳದೆ ಆಗುವ ಅಪಾಯವನ್ನು ತಡೆಯಲು ಬರೆದುಕೊಂಡು ಬಂದು ಮಾತನಾಡುತ್ತಿದ್ದೇನೆ. ನಾಗರಾಜ ಮೂರ್ತಿ ಯಾರಿಗೂ ಹೆದರಬೇಡಿ ಅಂತಾ ಬೆಂಬಲ ನೀಡಿದ್ದಾರೆ.

ನಾನು ಭಯಪಡುವ ವ್ಯಕ್ತಿ ಅಲ್ಲ. ಮಾಗಡಿ ರೋಡಿನಲ್ಲಿ ದೊಡ್ಡ ದೊಡ್ಡ ಪೋಲಿ ಆಟಗಳನ್ನು ಆಡಿ ಬಂದವನು. ಅದಕ್ಕೊಂದು ಚರಿತ್ರೆಯೇ ಇದೆ. ಈಗ ನನಗೆ ಎಪ್ಪತ್ತು, ತಿನ್ನೋದು ಒಪ್ಪತ್ತು, ಎರಡು ಹೊತ್ತು ಬಸವನ ಹಸಿವು ಪ್ರೊಟೀನ್ ಕೊಡುತ್ತೆ. ದೇಸಿ ಸಮುದಾಯದ ಕರುಳಿನ ಕಥೆಯಾಗಿದೆ ಯರೆಬೇವು ಪುಸ್ತಕ. ನಮ್ಮದೂ ಕೂಡ ಅದೇ ರೀತಿಯ ಕರುಳಿನ ಕಥೆ ಎಂದರು.

ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಮಾಜದಲ್ಲಿ ಶಿಕ್ಷಣದ ಜೊತೆಗೆ ವೈಚಾರಿಕತೆ ಬೆಳೆಯಬೇಕು. ಪ್ರತಿಯೊಂದನ್ನು ಪ್ರಶ್ನೆ ಮತ್ತು ವಿಶ್ಲೇಷಣೆ ಮಾಡಬೇಕು. ಆಗ ಮಾತ್ರ ಜಡ್ಡುಗಟ್ಟಿರುವ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ. ಶಿಕ್ಷಣ ಮಟ್ಟ ಶೇ.16ರಿಂದ78ಕ್ಕೆ ಬಂದು ನಿಂತಿದೆ. ಆದರೆ, ಅನಿಷ್ಟ ಪದ್ಧತಿಗಳು ದಿನೇದಿನೆ ಹೆಚ್ಚಾಗುತ್ತಿವೆ. ಗಾಂಧಿ ಮತ್ತು ಬಸವಣ್ಣ, ಬುದ್ಧನ ತತ್ವಪಾಲನೆ ಮಾಡುವಲ್ಲಿ ವಿಫಲವಾಗಿದ್ದೇವೆ ಎಂದರು.

ನೇರವಾಗಿ,ನಿಷ್ಠುರವಾಗಿ ಸತ್ಯ ಹೇಳುವುದೇ ಕಷ್ಟವಾಗಿದೆ. ಇಂದು ಅಭಿವ್ಯಕ್ತಿ ಸ್ವಾತಂತ್ರ ಬಹಳ ಕಷ್ಟದಲ್ಲಿದೆ. ವಕ್ರ ಕಣ್ಣಿನಿಂದ ನೋಡುವವರು ಪ್ರಶ್ನೆ ಮಾಡೋರನ್ನು ಟೆರಿರಿಸ್ಟ್ ಎಂದು ಬಿಂಬಿಸುತ್ತಾರೆ. ಇದನ್ನು ವಿಚಾರವಂತರಾದವರು ಖಂಡಿಸಬೇಕು. ಎಂಎಂ ಕಲಬುರ್ಗಿಯವರು ಏನು ತಪ್ಪು ಮಾಡಿದ್ರು, ಸತ್ಯ ಹೇಳುವ ಪ್ರಯತ್ನ ಮಾಡಿದ್ರು. ಕೋಮುವಾದಿ ಭಾವನೆ ಇರೋರು ಅವರನ್ನು ಕೊಂದರು. ಇಂತಹ ಘಟನೆಗಳನ್ನು ಖಂಡಿಸಬೇಕು. ಆ ನಿಟ್ಟಿನಲ್ಲಿ ನಾವು ಯೋಚನೆ ಮಾಡಬೇಕು. ಸತ್ಯ ಹೇಳುವುದಕ್ಕೆ ಹೆದರುವ ಅಗತ್ಯಯಿಲ್ಲ ಎಂದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಡಾ. ಎಂ.ಎಂ.ಕಲಬುರ್ಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಾಹಿತಿ ಎಸ್​ಜಿ.ಸಿದ್ದರಾಮಯ್ಯ, ಡಾ. ಕೆ ಮರಳುಸಿದ್ದಪ್ಪ, ಚನ್ನಬಸಪ್ಪ, ಹಂಸಲೇಖ, ಆಶಾದೇವಿ, ಮಹದೇವಯ್ಯ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಧಾರವಾಡದಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್: ಬಾಲಕಿ ವಾಸಿಸುವ ಏರಿಯಾ ಯುವಕರಿಂದಲೇ ಕೃತ್ಯ?

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.