ETV Bharat / state

ಹಿರಿಯರನ್ನು ಗೌರವಯುತವಾಗಿ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ: ಡಿಸಿಎಂ ಅಶ್ವತ್ಥ ನಾರಾಯಣ - ಡಿಸಿಎಂ ಅಶ್ವಥ್ ನಾರಾಯಣ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಿಶೇಷಚೇತನರ ಹಾಗೂ ವಿಶ್ವ ಹಿರಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಉಪಸ್ಥಿತರಿದ್ದರು.

Ashwath Narayan
ಡಿಸಿಎಂ ಅಶ್ವಥ್ ನಾರಾಯಣ
author img

By

Published : Feb 11, 2021, 4:22 PM IST

Updated : Feb 11, 2021, 10:03 PM IST

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹಿರಿಯರ ಸಬಲೀಕರಣ ಇಲಾಖೆವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶೇಷ ಚೇತನರ ಹಾಗೂ ವಿಶ್ವ ಹಿರಿಯರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಉಪಸ್ಥಿತರಿದ್ದರು.

ಇನ್ನು ಕವಿ ಡಾ. ಸಿದ್ದಲಿಂಗಯ್ಯ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಶೇಷಚೇತನ ಕ್ರೀಡಾಪಟು ಕೆ.ವೈ.ವೆಂಕಟೇಶ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಸುಮಾರು 30 ಜನ ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ, ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ವೇಳೆ ಮಾತನಾಡಿದ ಶಶಿಕಲಾ ಜೊಲ್ಲೆ, ಅಕ್ಟೋಬರ್ 1ರಂದು ಹಿರಿಯರ ದಿನಾಚರಣೆ, ಅಕ್ಟೋಬರ್ 3ರಂದು ವಿಶೇಷಚೇತನರ ದಿನಾಚರಣೆ ಆಚರಣೆ ಮಾಡಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಆಚರಣೆ ಮಾಡಲು ಸಾಧ್ಯವಾಗಲಿಲ್ಲ. ವಿಶೇಷಚೇತನರು ಅಬಲರಲ್ಲ ಎಂಬುದನ್ನು ಸಾಬೀತುಪಡಿಸುವುದು ನಮ್ಮ ಇಲಾಖೆಯ ಗುರಿ. ಹುಟ್ಟಿದವನಿಗೆ ಮುಪ್ಪು ಖಚಿತ. ಹೀಗಾಗಿ ನಾವು ಹಿರಿಯರನ್ನು ಗೌರವಿಸಬೇಕು. ಹಿರಿಯರನ್ನು ಮನೆಯಲ್ಲಿ ಕಡೆಗಣಿಸಿದಾಗ ನೋಡಿಕೊಳ್ಳಲು ವೃದ್ಧಾಶ್ರಮಗಳಿವೆ. ಅವರಿಗೆ ಮಾಸಾಶನ ನೀಡುವ ವ್ಯವಸ್ಥೆ ಮಾಡಿದ್ದೇವೆ. ವಿಶೇಷಚೇತನರಿಗೆ ಸರ್ಕಾರದಿಂದ ಸಾಕಷ್ಟು ಅನುಕೂಲ ಮಾಡಿಕೊಡಲು ಪ್ರಯತ್ನ ಪಡ್ತಿದ್ದೇವೆ. ಇನ್ನೂ ಸಾಕಷ್ಟು ಬೇಡಿಕೆಗಳಿವೆ, ಅವುಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ‌ ಎಂದರು.

ನಂತರ ಡಿಸಿಎಂ ಅಶ್ವತ್ಥ ನಾರಾಯಣ ಮಾತನಾಡಿ, ಹಿರಿಯ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ನಗರೀಕರಣದಿಂದ ಆದ್ಯತೆಗಳು ಬದಲಾಗಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಿರಿಯರಿಗೆ ಗೌರವ ಕೊಡುವುದು ಕಡಿಮೆ ಆಗ್ತಿದೆ. ನಾವು ಏನೇ ಕಾನೂನುಗಳು ತಂದರೂ ಸಹ ಜನರಲ್ಲಿ ಪ್ರಜ್ಞೆ ಮೂಡಿದಾಗಷ್ಟೇ ಬದಲಾವಣೆ ಸಾದ್ಯ. ಜನ್ಮ ಕೊಟ್ಟ ತಂದೆ-ತಾಯಿ ಸೇವೆ ಮಾಡುವುದು ನಮ್ಮ ಭಾಗ್ಯ ಎಂದರು.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ದನಿ ಆಲಿಸುವುದು ನಮ್ಮ ಕರ್ತವ್ಯ ಆಗಬೇಕು. ಸಮಾನತೆ ಕೊಡುವ ದಿಕ್ಕಿನಲ್ಲಿ ನಾವಿನ್ನೂ ಯಶಸ್ಸು ಕಂಡಿಲ್ಲ. ನಮಗೆ ಏನು ಕೊರತೆ ಇದೆಯೋ ಅದನ್ನು ದೇವರಲ್ಲಿ ಬೇಡಿಕೊಳ್ತೀವಿ. ಕಣ್ಣಿಲ್ಲದವರು ಕಣ್ಣು ಕೊಡು ಅಂತಾ, ಕಾಲಿಲ್ಲದವರು ಕಾಲು ಕೊಡು ಅಂತಾ ಕೇಳಿಕೊಳ್ತಾರೆ. ಆದರೆ ಎಲ್ಲಾ ಇದ್ದವರು ವ್ಯರ್ಥವಾಗಿ ಕಾಲ ಕಳೆಯುವುದನ್ನೂ ನಾವು ಸಮಾಜದಲ್ಲಿ ನೋಡಿದ್ದೇವೆ. ಮನುಷ್ಯ ಜನ್ಮಕ್ಕೆ ರಿನೀವಲ್ ಅನ್ನೋದಿಲ್ಲ, ಸಿಕ್ಕಿರುವ ಜನ್ಮದಲ್ಲೇ ಎಲ್ಲಾ ಸಾಧನೆ ಮಾಡಬೇಕು ಎಂದು ಹೇಳಿದರು.

ಕೊನೆಯಲ್ಲಿ ಸಹಕಾರ ಸಚಿವ ಎಸ್.​ಟಿ.ಸೋಮಶೇಖರ್ ಮಾತನಾಡಿ, ಮಹಿಳಾ ಮತ್ತು ಕಲ್ಯಾಣ ಖಾತೆಯಲ್ಲಿ ಶಶಿಕಲಾ ಜೊಲ್ಲೆ ಸಮರ್ಥವಾಗಿ ಕಾರ್ಯ ನಿರ್ವಹಣೆ ಮಾಡ್ತಿದಾರೆ. ಖಾತೆ ಹಂಚಿಕೆ ಸಂದರ್ಭದಲ್ಲಿ ಕೆಲವರು ಇಂಧನ ಖಾತೆ, ಫೈನಾನ್ಸ್ ಖಾತೆ, ಜಲ ಸಂಪನ್ಮೂಲ ಖಾತೆ ಬೇಕು ಅಂತಾ ಕೇಳ್ತಿರೋದನ್ನು ನೋಡಿದ್ದೇವೆ. ಆದರೆ ಶಶಿಕಲಾ ಜೊಲ್ಲೆ ಮಾತ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಾತೆಯಲ್ಲಿ ತೃಪ್ತಿ ಪಟ್ಟುಕೊಂಡಿದ್ದಾರೆ. ಈ ಇಲಾಖೆಯಲ್ಲಿ ಮಾತ್ರ ಜನರ ಸೇವೆ ಮಾಡಬಹುದು ಎಂಬುದು ಅವರಿಗೆ ಗೊತ್ತಿದೆ ಎಂದು ಹೇಳುತ್ತ ಖಾತೆಗಾಗಿ ಕ್ಯಾತೆ‌ ತೆಗೆಯುತ್ತಿರುವವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

Last Updated : Feb 11, 2021, 10:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.