ಬೆಂಗಳೂರು: ಆರ್ಥಿಕ ಹಿಂಜರಿತ ಇಡೀ ವಿಶ್ವದಲ್ಲಿ ಆಗುತ್ತಿದ್ದು, ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರುವುದಿಲ್ಲ. ಕಡಿಮೆ ಸೂಚ್ಯಾಂಕಗಳು ಕೇವಲ ತ್ರೈಮಾಸಿಕ ವರದಿ ಮಾತ್ರ ಎಂದು ಐಐಎಂ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ವೈದ್ಯನಾಥನ್ ಎಫ್ಕೆಸಿಸಿಐನಲ್ಲಿ ಹೇಳಿದ್ದಾರೆ.
1999 ರಲ್ಲಿ ಈಶಾನ್ಯ ಏಷ್ಯಾ ಕಂಡದಲ್ಲಿ ಆರ್ಥಿಕ ಹಿಂಜರಿತ ಆಗಿತ್ತು. 2005- 06 ರ ಮದ್ಯ ಲ್ಯಾಟಿನ್ ಅಮೆರಿಕನ್ನಲ್ಲಿ ಆರ್ಥಿಕ ಹಿಂಜರಿತ ಆಗಿತ್ತು. 7 ವರ್ಷಗಳಿಂದ ಗ್ರೀಸ್, ಜರ್ಮನಿ ಹಾಗೂ ಇನ್ನಿತರ ಯುರೋಪಿಯನ್ ರಾಷ್ಟ್ರಗಳು ಆರ್ಥಿಕ ಹಿಂಜರಿತ ಅನುಭವಿಸುತ್ತಿವೆ. ಇದಕ್ಕೆ ವಿಶ್ವ ಆರ್ಥಿಕ ಹಿಂಜರಿತ ಎನ್ನಲಾಗಿದೆ ಎಂದು ಅರ್ಥಶಾಸ್ತ್ರಜ್ಞ ವೈದ್ಯನಾಥನ್ ವಿವರಿಸಿದರು.
ಜಿ- 7 ರಾಷ್ಟ್ರಗಳು ಆರ್ಥಿಕವಾಗಿ ಕುಸಿತ ಕಾಣುತ್ತಿದ್ದು, ವಿಶ್ವ ಜಿಡಿಪಿಯಲ್ಲಿ ಜಿ 7 ಪಾಲು 50.97ರಿಂದ 36.25 ಕುಸಿದಿದೆ. ಇನ್ನೊಂದು ಕಡೆ ಜಿ-7 ಅಲ್ಲದ ರಾಷ್ಟ್ರಗಳ ಜಿಡಿಪಿ ಪಾಲು ಶೇಕಡಾ 35.97 ರಿಂದ 52 ಕ್ಕೆ ಏರಿಕೆ ಆಗಿದೆ. ಇದು ಭಾರತಕ್ಕೆ ಲಾಭದಾಯಕ ಎಂದು ವಿವರಿಸಿದರು.
ಮುಂಬರುವ ವರ್ಷಗಳಲ್ಲಿ ಬ್ರಿಟನ್ ರಾಷ್ಟ್ರ ನಮ್ಮ ದೇಶದ ಬಳಿ ಬಂದು ಆರ್ಥಿಕ ಸಹಾಯಕ್ಕೆ ಕೈಚಾಚುತ್ತದೆ. ಬ್ರಿಟನ್, ಯೂರೋಪ್ ಖಂಡದಿಂದ ಹೊರಬಂದರೆ ಈ ರೀತಿ ಆಗುವುದು ಖಚಿತ ಎಂದು ವೈದ್ಯನಾಥನ್ ಭವಿಷ್ಯ ನುಡಿದರು.
ಹಣ ಉಳಿತಾಯ:
ಭಾರತ ಹಾಗೂ ಚೀನಾ ಶೇಕಡಾ 30 ರಷ್ಟು ಉಳಿತಾಯ ಇದೆ. ಜಿ-7 ರಾಷ್ಟ್ರಗಳು ಶೇ 7 ರಷ್ಟು ಉಳಿತಾಯ ಮಾಡುತ್ತವೆ. ಶೇ 50ರಷ್ಟು ಭಾರತದ ಆರ್ಥಿಕತೆ ಪಾರ್ಟ್ನರ್ ಹಾಗೂ ಮಾಲೀಕತ್ವದ ವ್ಯವಹಾರಗಳ ಮೇಲೆ ನಿಂತಿದೆ. ಇದನ್ನ ಅಸಂಘಟಿತ ಎಂದು ಕರೆಯಲಾಗಿದೆ ಇದು ವಿಷಾದಕರ ಎಂದರು. ಒಬ್ಬ ಭಾರತೀಯ ನಾಗರಿಕ ವರ್ಷಕ್ಕೆ ಸರಾಸರಿ ಶೇ 20ರಷ್ಟು ಅವನ ಜೀವನದ ದುಡಿಮೆಯನ್ನು ಲಂಚವಾಗಿ ನೀಡುತ್ತಾನೆ ಎಂದು ವೈದ್ಯನಾಥನ್ ವಿಷಾದ ವ್ಯಕ್ತಪಡಿಸಿದರು. ಭಾರತದ ಗೃಹಿಣಿಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ, ಇದೆ ನಮ್ಮ ದೇಶದ ಆರ್ಥಿಕತೆಯ ಶಕ್ತಿ ಎಂದೂ ಕೊಂಡಾಡಿದರು.
ಶಿಕ್ಷಣ ದುಬಾರಿಯಾಗಿದೆ:
ಬ್ಯಾಂಕ್ಗಳು ಉನ್ನತ ಶಿಕ್ಷಣಕ್ಕೆ ಸಾಲ ನೀಡುವುದಿಲ್ಲ. ಆದ್ರೆ ಮನೆಯ 2ನೇ ಅಥವಾ 3ನೇ ಮಹಡಿಗೆ ಲೋನ್ ಕೊಡುತ್ತವೆ ಎಂದು ಹೇಳುವ ಮೂಲಕ ಬ್ಯಾಂಕ್ಗಳ ಕುರಿತು ಹಾಸ್ಯವನ್ನೂ ಮಾಡಿದರು.
ಬದಲಾವಣೆಗಳು:
ಆದಾಯ ತೆರಿಗೆಯನ್ನು ಸಡಿಲಗೊಳಿಸಬೇಕು, ಟ್ಯಾಕ್ಸ್ ಹೊರೆಗಳಿಂದ ಹೊರಬರಬೇಕು. ಶಾಪ್ ಅಂಡ್ ಎಷ್ಟಾಬ್ಲಿಶ್ ಮೆಂಟ್ ಆಕ್ಟ್ ನಂತ ನಿಯಮಗಳನ್ನು ತೆಗೆದು ಹಾಕಬೇಕು. ಇದರಿಂದ ವ್ಯಾಪಾರ ವಹಿವಾಟು ಸಲಿಸಾಗುತ್ತದೆ ಎಂದರು.