ETV Bharat / state

ಇಂದು ವಿಶ್ವ ಕ್ಯಾನ್ಸರ್‌ ಜಾಗೃತಿ ದಿನಾಚರಣೆ.. ರಾಜ್ಯದಲ್ಲಿ ಕಾಯಿಲೆಯ ಉಲ್ಬಣ ಹೇಗಿದೆ?

ಇಂದು ವಿಶ್ವ ಕ್ಯಾನ್ಸರ್‌ ಜಾಗೃತಿ ದಿನವಾಗಿದ್ದು, ಕ್ಯಾನ್ಸರ್ ರೋಗವು ಸಾವಿನ ಸರಣಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಸಾವುಗಳಲ್ಲಿ ಶೇ.70 ರಷ್ಟು ಸಾವುಗಳು ಕೆಳ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿಯೇ ಸಂಭವಿಸುತ್ತಿವೆ. ಕ್ಯಾನ್ಸರ್​ನ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

World Cancer Awareness Day Celebration
ವಿಶ್ವ ಕ್ಯಾನ್ಸರ್‌ ಜಾಗೃತಿ ದಿನ ಆಚರಣೆ
author img

By

Published : Feb 4, 2021, 11:46 AM IST

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸಂಭವಿಸುವ ಬಹುತೇಕ ಸಾವುಗಳಿಗೆ ಕ್ಯಾನ್ಸರ್​​ ಕಾರಣವಾಗುತ್ತಿದೆ. 2018 ರಲ್ಲಿ 9.6 ಮಿಲಿಯನ್ ಸಾವುಗಳು ಕ್ಯಾನ್ಸರ್‌ನಿಂದ ಸಂಭವಿಸಿವೆ. ಈ ರೀತಿ ಕ್ಯಾನ್ಸರ್ ರೋಗವು ಸಾವಿನ ಸರಣಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಸಾವುಗಳಲ್ಲಿ ಶೇ.70 ರಷ್ಟು ಸಾವುಗಳು ಕೆಳ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿಯೇ ಎಂಬುದು ಆತಂಕದ ವಿಷಯ.

ಭಾರತೀಯ ಸಂಶೋಧನಾ ಪರಿಷತ್ತಿನ (ICMR) ನ 2012-2016 ರವರೆಗಿನ ವರದಿಯಂತೆ ಸಮುದಾಯ ಮಟ್ಟದ ದಾಖಲೆಯಂತೆ 4,27,524 ಕ್ಯಾನ್ಸರ್ ರೋಗಿಗಳು ಹಾಗೂ ಸಂಸ್ಥೆವಾರು ದಾಖಲೆಯಂತೆ 667,666 ಪ್ರಕರಣಗಳು (ಒಟ್ಟು: 1,09,591 ಪ್ರಕರಣಗಳು) ಸಂಭವಿಸಿದೆ. ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್, ಬಾಯಿ ಕ್ಯಾನ್ಸರ್‌, ಜಠರ ಮತ್ತು ಅನ್ನನಾಳದ ಕ್ಯಾನ್ಸರ್‌ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದರೆ, ಇತ್ತ ಸ್ತ್ರೀಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠ ಮತ್ತು ಗರ್ಭಕೋಶದ ಕ್ಯಾನ್ಸರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿವೆ.

World Cancer Awareness Day Celebration
ವಿಶ್ವ ಕ್ಯಾನ್ಸರ್‌ ಜಾಗೃತಿ ದಿನ ಆಚರಣೆ

ಕರ್ನಾಟಕದಲ್ಲಿ ಯಾವ ಯಾವ ಕ್ಯಾನ್ಸರ್ ಎಷ್ಟು ಪ್ರಮಾಣದಲ್ಲಿದೆ..?

ಶೇ.10 ರಷ್ಟು ಶ್ವಾಸಕೋಶದ ಕ್ಯಾನ್ಸರ್‌

ಶೇ.7 ರಷ್ಟು ಜಠರ ಕ್ಯಾನ್ಸರ್​

ಶೇ.6 ರಷ್ಟು ಪ್ರಾಸ್ಟೇಟ್‌ ಕ್ಯಾನ್ಸರ್​

ಶೇ.28 ಸ್ತನ ಕ್ಯಾನ್ಸರ್‌

ಶೇ.12 ರಷ್ಟು ಗರ್ಭಗೋಶದ ಕ್ಯಾನ್ಸರ್​​

ಶೇ. 6 ರಷ್ಟು ಅಂಡಾಶಯದ ಕ್ಯಾನ್ಸರ್ ಕಂಡು ಬರುತ್ತಿರುವುದು ದೃಢಪಟ್ಟಿರುತ್ತದೆ. ರಾಜ್ಯದಲ್ಲಿ ಈವರೆಗೆ 5,862 ರೋಗಿಗಳನ್ನು ಪರೀಕ್ಷಿಸಿ, ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಕ್ಯಾನ್ಸರ್‌ ಬರಲು ಕಾರಣಗಳೇನು.??

ಶೇ. ಮೂರನೇ ಒಂದರಷ್ಟು ಕ್ಯಾನ್ಸರ್‌ಗಳಿಗೆ ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದ ಈ ಕೆಳಗಿನ 5 ಅಂಶಗಳು ಕಾರಣವಾಗಿದೆ.

1. ಹೆಚ್ಚಿನ ದೇಹವಿನ್ಯಾಸ (High body mass index)

2. ಕಡಿಮೆ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳ ಸೇವನೆ

3. ಕಡಿಮೆ ದೈಹಿಕ ಚಟುವಟಿಕೆ

4. ತಂಬಾಕು ಸೇವನೆ

5. ಮದ್ಯಪಾನ

ತಂಬಾಕು ಸೇವನೆಯೊಂದರಿಂದಲೇ ಶೇ.22ರಷ್ಟು ಕ್ಯಾನ್ಸರ್ ಸಂಬಂಧಿ ಸಾವುಗಳು ಜಗತ್ತಿನಾದ್ಯಂತ ಜರುಗುತ್ತಿದೆ. ಮಧ್ಯಮ ಮತ್ತು ಕೆಳ ಆದಾಯದ ರಾಷ್ಟ್ರಗಳಲ್ಲಿ ಶೇ. 25 ರಷ್ಟು ಕ್ಯಾನ್ಸರ್‌ಗಳು ಹೆಪಟೈಟಿಸ್ ಮತ್ತು ಹೆಚ್​ಪಿವಿ (HPV-Human Papilloma Virus) ವೈರಸ್‌ನಿಂದಲೇ ಸಂಭವಿಸುತ್ತಿದೆ. ಇತರೆ ಮುಖ್ಯ ಕಾರಣಗಳೆಂದರೆ ವಿಕಿರಣಗಳು, ಅಲ್ಟ್ರಾವಯ್​ಲೆಟ್ ಕಿರಣಗಳು (Ultra violent radiation), ನಗರಗಳಲ್ಲಿ ವಾಯುಮಾಲಿನ್ಯ ಮತ್ತು ಗೃಹಮಟ್ಟದಲ್ಲಿ ಅಡಿಗೆಗೆ ಕಟ್ಟಿಗೆ ಮತ್ತು ಬೆರಣಿ ಬಳಸುವುದು

ಕ್ಯಾನ್ಸರ್ ತಡೆಯುವ ಬಗೆ ಹೇಗೆ??

ಹೆಚ್.ಪಿ.ಎ ಮತ್ತು ಹೆಪಟೈಟಿಸ್ ಬಿ ಗಳಿಗೆ ಲಸಿಕೆ ಲಭ್ಯವಿದ್ದು, ಇದರ ಪ್ರಯೋಜನ ಪಡೆಯುವುದು. ಕೆಲಸದ ಸ್ಥಳದಲ್ಲಿ ಮತ್ತು ವಿಕಿರಣಗಳ ಸಂಪರ್ಕವನ್ನು ಆದಷ್ಟೂ ತಡೆಯುವುದು. ವೈದ್ಯಕೀಯ ಕ್ಷೇತ್ರದಲ್ಲಿ ಕ್ಷ-ಕಿರಣಗಳಿಂದ ಹಾನಿಯಾಗದಂತೆ ಕ್ರಮ ವಹಿಸುವುದು.

ಕ್ಯಾನ್ಸರ್‌ ಮುಕ್ತಿಗೆ ಮೂರು ಮುಖ್ಯ ಮಂತ್ರಗಳು:

1. ಅರಿವು ಮೂಡಿಸುವುದು ಮತ್ತು ಆರೈಕೆಗೆ ಅವಕಾಶಗಳನ್ನು ಕಲ್ಪಿಸುವುದು

2. ಶೀಘ್ರ ಪತ್ತೆ ಮತ್ತು ಸಕಾಲದಲ್ಲಿ ಚಿಕಿತ್ಸೆ

3. ಎಲ್ಲರಿಗೂ ಚಿಕಿತ್ಸೆ ಲಭ್ಯವಾಗುವಂತೆ ಕ್ರಮ ವಹಿಸುವುದು.

ಸರ್ಕಾರದ ಕಾರ್ಯಕ್ರಮಗಳೇನು??

ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದಯರೋಗ ಮತ್ತು ಪಾರ್ಶ್ವವಾಯು ನಿಯಂತ್ರಣ ಕಾರ್ಯಕ್ರಮ (NPCDCS- National Programme for Prevention and control of Cancer, Diabetes, Cardiovascular diseases and Stroke) ದ ಅಡಿಯಲ್ಲಿ 30 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೂ ಪ್ರತಿ 5 ವರ್ಷಕ್ಕೆ ಒಂದು ಬಾರಿಯಂತೆ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಗರ್ಭಗೋಶದ ಕ್ಯಾನ್ಸರ್​​ಗೆ ಪೂರ್ವಭಾವಿ ತಪಾಸಣೆ ಕೈಗೊಂಡು ರೋಗಪತ್ತೆ ಮತ್ತು ಚಿಕಿತ್ಸೆಗೆ ಒಳಪಡಿಸುವ ಅವಕಾಶವಿರುತ್ತದೆ. ಈ ಮೂರು ಕ್ಯಾನ್ಸರ್‌ಗಳನ್ನು ಸಮುದಾಯ ಮಟ್ಟದಲ್ಲಿ ಬೇಗ ಗುರುತಿಸಲೂ ಸಾಧ್ಯ ಮತ್ತು ಸಕಾಲದ ಚಿಕಿತ್ಸೆಯಿಂದ ಗುಣಪಡಿಸಲೂ ಸಾಧ್ಯ. ಶೇ.34 ರಷ್ಟು ಕ್ಯಾನ್ಸರ್‌ಗಳು ಈ ಮೂರು ರೀತಿಯ ಕ್ಯಾನ್ಸರ್‌ಗಳಿಂದಲೇ ಸಂಭವಿಸುತ್ತಿರುವೆ.

2021 ರ ಕ್ಯಾನ್ಸರ್ ಜಾಗೃತಿ ದಿನದಂದು:

“ನಾನು ಸಿದ್ಧನಿದ್ದೇನೆ ಮತ್ತು ನಾನು ಮಾಡಿಯೇ ತೀರುತ್ತೇನೆ” ಅನ್ನುವ ಘೋಷ ವಾಕ್ಯದೊಂದಿಗೆ ಈ ಸಲದ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಕ್ಯಾನ್ಸರ್ ಕುರಿತಾದ ಅರಿವು ಮೂಡಿಸುವ ಮತ್ತು ಕ್ಯಾನ್ಸರ್​ನ್ನು ಶೀಘ್ರ ಪತ್ತೆ ಹಚ್ಚುವ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುವುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.