ETV Bharat / state

ಇಂದು ವಿಶ್ವ ಏಡ್ಸ್ ದಿನಾಚರಣೆ: ದೇಶದಲ್ಲಿ ಹೆಚ್ಚು ಸೋಂಕಿತರಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ - ಹೆಚ್ಚು ಏಡ್ಸ್ ಸೋಂಕಿತರಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ

ಹೆಚ್ಐವಿ ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು, ಜವಾಬ್ದಾರಿಯ ಹಂಚಿಕೆ ಎಂಬುದು ಈ ಬಾರಿಯ ವಿಶ್ವ ಏಡ್ಸ್ ದಿನದ ಘೋಷ ವಾಕ್ಯವಾಗಿದೆ.

World AIDS Day
ವಿಶ್ವ ಏಡ್ಸ್ ದಿನಾಚರಣೆ
author img

By

Published : Dec 1, 2020, 1:52 AM IST

ಬೆಂಗಳೂರು: ಮಹಾಮಾರಿಯ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯು 1988 ರಿಂದ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ ಆಚರಿಸುತ್ತಾ 2011 ರಿಂದ 2015ರ ವರೆಗೆ ಹೆಚ್‌ಐವಿ ಸೋಂಕು ಹಾಗೂ ಅದರಿಂದ ಉಂಟಾಗುತ್ತಿರುವ ಸಾವನ್ನು ಶೂನ್ಯಕ್ಕೆ ತರಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ವಿಶ್ವ ಏಡ್ಸ್ ದಿನದ ಈ ಬಾರಿಯ ಘೋಷ ವಾಕ್ಯವಾಗಿ ಹೆಚ್ಐವಿ ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು, ಜವಾಬ್ದಾರಿಯ ಹಂಚಿಕೆ ಎಂಬುದಾಗಿದೆ. ಹೆಚ್ಐವಿ ಸೋಂಕು ತಡೆಗಟ್ಟಲು ಜನ ಸಾಮಾನ್ಯರಲ್ಲಿ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸುವುದಕ್ಕಾಗಿ ಮತ್ತು ಇದನ್ನು ಎದುರಿಸಲು ಮುಂದಿರುವ ಸವಾಲುಗಳ ಬಗ್ಗೆ ಚಿಂತಿಸುವ ಸಲುವಾಗಿ ದಿನವನ್ನು ಆಚರಿಸಲಾಗುತ್ತೆ. ಏಡ್ಸ್ ನಿಯಂತ್ರಣ ಕುರಿತು ಸರ್ಕಾರಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಕೈಗೊಂಡ ಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಸದಾವಕಾಶ ಹೊಂದಿದ ದಿನವಾಗಿದೆ.

ದೇಶದಲ್ಲಿ ಹೆಚ್ಚು ಏಡ್ಸ್ ಸೋಂಕಿರುವ ರಾಜ್ಯಗಳಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಹೆಚ್ಐವಿ ಸೋಂಕು ಹೆಚ್ಚಿರುವ ನಾಲ್ಕು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ಕರ್ನಾಟಕವು 1998 ರಿಂದ ಹೆಚ್​ಐವಿ ಕಣ್ಗಾವಲು ಸಮೀಕ್ಷೆಯನ್ನು ನಡೆಸುತ್ತಿದೆ. ವಯಸ್ಕರಲ್ಲಿನ ಹೆಚ್‌ಐವಿ ಹರಡುವಿಕೆಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ಪ್ರಮುಖವಾಗಿ ಗರ್ಭಿಣಿಯರಲ್ಲಿ ಎಚ್ಐವಿ ಸೋಂಕು 0.04 ಗೆ ಇಳಿದಿರುವುದು 2019-20ರ ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿನ (ಐಸಿಟಿಸಿ) ಅಂಕಿ ಅಂಶಗಳಿಂದ ರುಜುವಾತಾಗಿದೆ. ಹಾಗೆಯೇ ಹೆಚ್ಚು ಅಪಾಯಕಾರಿ ಗುಂಪುಗಳಲ್ಲಿನ ಹೆಚ್‌ಐವಿ ಹರಡುವಿಕೆಯು ಗಣನೀಯವಾಗಿ ಇಳಿಮುಖವಾಗುತ್ತಿದೆ.

ಸಮಗ್ರ ಆಪ್ತಸಮಾಲೋಚನೆ ಹಾಗೂ ಪರೀಕ್ಷಾ ಕೇಂದ್ರ ಹೆಚ್ಐವಿ ಆಪ್ತ ಸಮಾಲೋಚನೆ ಮತ್ತು ಪರೀಕ್ಷೆಯನ್ನು ನಡೆಸಲಾಗುತ್ತಿದೆ.

  • 2014-15ರಲ್ಲಿ 19,06,237 ಜನರನ್ನು ಪರೀಕ್ಷಿಸಲಾಗಿ 1.39 ರಷ್ಟು ಹೆಚ್​ಐವಿ ಸೋಂಕಿತರು ಕಂಡು ಬಂದಿದ್ದಾರೆ. 12,32,862 ಗರ್ಭಿಣಿ ಸ್ತ್ರೀಯರನ್ನು ಪರೀಕ್ಷಿಸಲಾಗಿದ್ದು 0.11 ರಷ್ಟು ಸೋಂಕಿತರು ಕಂಡು ಬಂದಿದ್ದಾರೆ.
  • 20015-16ರಲ್ಲಿ 19,45,282 ಜನರನ್ನು ಪರೀಕ್ಷಿಸಲಾಗಿದ್ದು 1.13 ರಷ್ಟು ಏಡ್ಸ್ ಸೋಂಕಿತರು ಕಂಡು ಬಂದಿದ್ದಾರೆ. 12,80,862 ಗರ್ಭಿಣಿ ಸ್ತ್ರೀಯರನ್ನು ಪರೀಕ್ಷಿಸಲಾಗಿದ್ದು 0.08 ರಷ್ಟು ಸೋಂಕಿತರು ಕಂಡು ಬಂದಿದ್ದಾರೆ.
  • 2016-17 ರಲ್ಲಿ 19,40,589 ಜನರನ್ನು ಪರೀಕ್ಷಿಸಲಾಗಿದ್ದು 1.03 ರಷ್ಟು ಸೋಂಕಿತರನ್ನು ಪತ್ತೆಹಚ್ಚಲಾಗಿದೆ. 13,21,668 ಗರ್ಭಿಣಿ ಸ್ತ್ರೀಯರನ್ನು ಪರೀಕ್ಷಿಸಲಾಗಿದ್ದು 0.06 ರಷ್ಟು ಹೆಚ್​ಐವಿ ಸೋಂಕಿತರು ಕಂಡುಬಂದ್ದಾರೆ
  • 2017- 18ರಲ್ಲಿ 22,20,292 ಜನರನ್ನು ಪರೀಕ್ಷಿಸಲಾಗಿದ್ದು 0.85 ರಷ್ಟು ಸೋಂಕಿತರನ್ನು ಪತ್ತೆಹಚ್ಚಲಾಗಿದೆ. 14,18,176 ಗರ್ಭಿಣಿ ಸ್ತ್ರೀಯರನ್ನು ಪರೀಕ್ಷಿಸಿದ್ದು 0.06 ರಷ್ಟು ಸೋಂಕಿತರು ಕಂಡು ಬಂದಿದ್ದಾರೆ.
  • 2018-19ರಲ್ಲಿ 24,73,845 ಜನರನ್ನು ಪರೀಕ್ಷಿಸಲಾಗಿದ್ದು 0.73 ರಷ್ಟು ಹೆಚ್​ಐವಿ ಸೋಂಕಿತರನ್ನು ಪತ್ತೆಹಚ್ಚಲಾಗಿದೆ. 14,23,045 ಗರ್ಭಿಣಿಯರನ್ನ ಪರೀಕ್ಷಿಸಿದ್ದು 0.05 ರಷ್ಟು ಸೋಂಕಿತರು ಕಂಡು ಬಂದಿದ್ದಾರೆ.
  • 2019-20 ರಲ್ಲಿ 25,78,254 ಜನರನ್ನ ಪರೀಕ್ಷಿಸಲಾಗಿದ್ದು, 0.60 ಯಷ್ಟು ಸೋಂಕಿತನ್ನ ಪತ್ತೆಹಚ್ಚಲಾಗಿದೆ. 14,50,538ಗರ್ಭಿಣಿ ಸ್ತ್ರೀಯರನ್ನು ಪರೀಕ್ಷಿಸಲಾಗಿದ್ದು 0.04 ರಷ್ಟು ಹೆಚ್ಐವಿ ಸೋಂಕಿತರು ಕಂಡು ಬಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.