ETV Bharat / state

ಕರ್ನಾಟಕ ಬಂದ್: ಎಂದಿನಂತೆ ಕಾರ್ಯ ನಿರ್ವಹಿಸುತ್ತಿರುವ ಶಕ್ತಿಕೇಂದ್ರ - ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಬಂದ್​ ಆಚರಣೆ

ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ 'ಕರ್ನಾಟಕ ಬಂದ್'​ ಎಫೆಕ್ಟ್​​ ವಿಧಾನಸೌಧದ ಮೇಲೇನೂ ಪರಿಣಾಮ ಬೀರಿಲ್ಲ. ಎಂದಿನಂತೆ ಎಲ್ಲಾ ಕೆಲಸ ಕಾರ್ಯಗಳು ಶಕ್ತಿಕೇಂದ್ರದಲ್ಲಿ ಸಹಜವಾಗಿಯೇ ನಡೆಯುತ್ತಿವೆ.

works continued in  vidhansoudha during karanataka band
ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಶಕ್ತಿಕೇಂದ್ರ
author img

By

Published : Dec 5, 2020, 2:39 PM IST

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್​ನ ಯಾವುದೇ ಬಿಸಿ ಶಕ್ತಿಸೌಧಕ್ಕೆ ತಟ್ಟಿಲ್ಲ.

ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಶಕ್ತಿಕೇಂದ್ರ
ಬಂದ್ ಮಧ್ಯೆಯೂ ವಿಧಾನಸೌಧ, ವಿಕಾಸಸೌಧ ಹಾಗೂ ಎಂ.ಎಸ್.ಕಟ್ಟಡದಲ್ಲಿ ಎಂದಿನಂತೆ ಕಾರ್ಯ ನಡೆಯುತ್ತಿದೆ. ನಿಗದಿತ ಸಮಯಕ್ಕೆ ನೌಕರರು ಮತ್ತು ಅಧಿಕಾರಿಗಳು ಕಚೇರಿಗಳಿಗೆ ಆಗಮಿಸಿದ್ದಾರೆ.ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್ ಸಂಚಾರ, ನಮ್ಮ ಮೆಟ್ರೋ, ಓಲಾ, ಉಬರ್, ಆಟೋ ಸಂಚಾರದಲ್ಲಿ ಹೆಚ್ಚಿನ ವ್ಯತ್ಯಯವಾಗದ ಕಾರಣ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬೆಳಗಿನ ವೇಳೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿರೋ ಕಾರಣಕ್ಕೆ ವಿಧಾನಸೌಧದಲ್ಲಿ ಸಾರ್ವಜನಿಕರ ಓಡಾಟ ಕಂಡು ಬಂದಿಲ್ಲ.

ಓದಿ: ಕರ್ನಾಟಕ ಬಂದ್​​ ಬೆಂಬಲಿಸಿ ಬಿಬಿಎಂಪಿ ಕಚೇರಿ ಎದುರು‌ ಪ್ರತಿಭಟನೆ
ಪ್ರತಿಭಟನೆ, ರ್ಯಾಲಿಯಿಂದ, ಟ್ರಾಫಿಕ್ ಜಾಮ್‌ನಿಂದ ಸಾರಿಗೆ ವ್ಯವಸ್ಥೆಯಲ್ಲಿ ಸ್ವಲ್ಪ ವ್ಯತ್ಯಯ ಆಗಿರೋ ಕಾರಣಕ್ಕೆ ಕೆಲ ಸಿಬ್ಬಂದಿ ಸ್ವಲ್ಪ ತಡವಾಗಿ ಕಚೇರಿಗೆ ಆಗಮಿಸಿದ್ದಾರೆ. ಉಳಿದಂತೆ ಸಹಜ ರೀತಿಯಲ್ಲಿ ವಿಧಾನಸೌಧ ಸಚಿವಾಲಯ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಭಟನೆ, ಮುತ್ತಿಗೆ ಯತ್ನ ಹಿನ್ನೆಲೆ ವಿಧಾನಸೌಧ, ವಿಕಾಸಸೌಧ ಬಳಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಉಳಿದಂತೆ ಸಚಿವಾಲಯದ ಕೆಲಸ ಕಾರ್ಯಗಳಲ್ಲಿ ಯಾವುದೇ ರೀತಿಯ ವ್ಯತ್ಯಯವಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.