ETV Bharat / state

ವಿಧಾನಸಭೆ ಸಚಿವಾಲಯದ ಸಿಬ್ಬಂದಿಗೆ ಇಂದಿನಿಂದ ಒಂದು ವಾರ ವರ್ಕ್​ ಫ್ರಂ ಹೋಂ ಅವಕಾಶ - ವಿಧಾನಸಭೆ ಸಚಿವಾಲಯ ಸಿಬ್ಬಂದಿಗೆ ವರ್ಕ್​ ಫ್ರಂ ಹೋಂ

ಲಾಕ್​ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯದ ಸಿಬ್ಬಂದಿಗೆ ಕಚೇರಿಗೆ ಹಾಜರಾಗಲು ವಿನಾಯಿತಿ ನೀಡಲಾಗುತ್ತದೆ. ಶಾಸಕರ ಭವನದ ಕೆಲಸ ಕಾರ್ಯಗಳಿಗೆ ಸಂಬಂಧಪಟ್ಟಂತೆ ಅಲ್ಲಿನ ಅಧಿಕಾರಿಗಳು/ಸಿಬ್ಬಂದಿ ಅಗತ್ಯತೆಗೆ ಅನುಗುಣವಾಗಿ ನಿಯೋಜಿಸಿದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.

work-from-home-for-ministry-of-legislative-assembly-staff
ವಿಧಾನಸಭೆ ಸಚಿವಾಲಯದ ಸಿಬ್ಬಂದಿಗೆ ಇಂದಿನಿಂದ ಒಂದು ವಾರ ವರ್ಕ್​ ಫ್ರಂ ಹೋಂ ಅವಕಾಶ
author img

By

Published : Jul 15, 2020, 3:09 AM IST

ಬೆಂಗಳೂರು : ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಲಾಕ್​ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮನೆಯಿಂದ ಕರ್ತವ್ಯ ನಿರ್ವಹಿಸುವ ಷರತ್ತಿಗೆ ಒಪ್ಪಿಕೊಳ್ಳುವ ವಿಧಾನಸಭೆ ಸಚಿವಾಲಯದ ಸಿಬ್ಬಂದಿಗೆ ಇಂದಿನಿಂದ ಒಂದು ವಾರಗಳ ಕಾಲ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಲಾಗಿದೆ.

Work from home for Ministry of Legislative Assembly  Staff
ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ

ಸಚಿವಾಲಯದ ಯಾವುದೇ ಶಾಖೆಯ ಕಾರ್ಯದಲ್ಲಿ ಬಾಕಿ ಉಳಿದಿರುವ ಅಥವಾ ತುರ್ತು ಸಂದರ್ಭ ಇರುವ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ನಿರ್ವಹಿಸಬೇಕು. ಅವಶ್ಯವಿದ್ದರೆ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಕೆಲಸಗಳನ್ನು ಬಾಕಿ ಉಳಿಸುವಂತಿಲ್ಲ. ಅಂತೆಯೇ ಮನೆಯಿಂದ ಕಾರ್ಯನಿರ್ವಹಿಸುವಂತಹ ಶಾಖೆಯ ಕೆಲಸಗಳನ್ನು ಮನೆಯಿಂದ ನಿರ್ವಹಿಸಲು ಅನುಮತಿ ನೀಡಲಾಗುತ್ತದೆ. ಈ ಷರತ್ತಿಗೊಳಪಟ್ಟು ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಜು.21 ರವರೆಗೆ ಕಾರ್ಯನಿರ್ವಹಿಸಬಹುದು ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಆದೇಶ ಹೊರಡಿಸಿದ್ದಾರೆ.

ಕಚೇರಿಗೆ ಹಾಜರಾಗಲು ವಿನಾಯಿತಿ ನೀಡಲಾಗುತ್ತದೆ. ಶಾಸಕರ ಭವನದ ಕೆಲಸ ಕಾರ್ಯಗಳಿಗೆ ಸಂಬಂಧಪಟ್ಟಂತೆ ಅಲ್ಲಿನ ಅಧಿಕಾರಿಗಳು/ಸಿಬ್ಬಂದಿ ಅಗತ್ಯತೆಗೆ ಅನುಗುಣವಾಗಿ ನಿಯೋಜಿಸಿದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.