ETV Bharat / state

ಕೆಎಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣ: ಮಾನಸಿಕ ಖಿನ್ನತೆಗೊಳಗಾದ ಗೃಹಿಣಿ ನೇಣಿಗೆ ಶರಣು

ಕೆಎಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಿನ್ನೆಲೆ ಮಾನಸಿಕ ಖಿನ್ನತೆಗೊಳಗಗೊಳಗಾದ ಗೃಹಿಣಿ ಮೀನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

women committed suicide in nelamangala
ಮಾನಸಿಕ ಖಿನ್ನತೆಗೊಳಗಾದ ಗೃಹಿಣಿ ನೇಣಿಗೆ ಶರಣು
author img

By

Published : Jul 25, 2021, 2:21 PM IST

ನೆಲಮಂಗಲ: ಕೆಎಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ದಿನದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಗೃಹಿಣಿ ನೇಣಿಗೆ ಶರಣಾಗಿದ್ದಾರೆ. ನೆಲಮಂಗಲದ ವಿಜಯನಗರ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಮೀನಾ (42 ವರ್ಷ) ಆತ್ಮಹತ್ಯೆಗೆ ಶರಣಾದವರು.

ಗೃಹಿಣಿ ನೇಣಿಗೆ ಶರಣು

ಚಿಂತಾಮಣಿ ತಾಲೂಕಿನ ಟಿ. ದೇವಪಲ್ಲಿಯ ಮೂಲದವರಾದ ಮೃತ ಮಹಿಳೆ ಕಳೆದ 18 ವರ್ಷಗಳ ಹಿಂದೆ ಲಚ್ಚಿರೆಡ್ಡಿ ಎಂಬುವರೊಂದಿಗೆ ಮದುವೆಯಾಗಿದ್ದರು. ಎಂ.ಎ ಪದವೀಧರೆಯಾದ ಮೀನಾ ಕೆಎಎಸ್ ಪರೀಕ್ಷೆ ಪರೀಕ್ಷೆ ಬರೆದಿದ್ದರು. ಪರೀಕ್ಷೆ ಪಾಸಾಗಲು ಸಾಕಷ್ಟು ತಯಾರಿ ನಡೆಸಿದ್ದೂ ಕೂಡ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ರು. ಅಂದಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಮೇಲಿನ ಶೆಡ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಪ್ರವಾಹ : 10ನೇ ತರಗತಿ ಕೆಓಎಸ್ ಪರೀಕ್ಷೆ ಮುಂದೂಡಲು ಸಚಿವರಿಗೆ ಮನವಿ

ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.