ಬೆಂಗಳೂರು: ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಆಘಾತಕಾರಿ ಕೃತ್ಯಯೊಂದು ನಡೆದಿದೆ. ಡ್ರಾಪ್ ಕೊಡುವ ಸೋಗಿನಲ್ಲಿ ಮಹಿಳೆಯನ್ನು ಶಾಲಾ ಬಸ್ಗೆ ಹತ್ತಿಸಿಕೊಂಡು ಅತ್ಯಾಚಾರವೆಸಗಿದ ಆರೋಪದ ಮೇಲೆ ಬಸ್ ಚಾಲಕನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ್ ಎಂಬಾತನೇ ಬಂಧಿತ ಶಾಲಾ ಬಸ್ ಚಾಲಕನಾಗಿದ್ದು, ಈತ ಖಾಸಗಿ ಶಾಲೆಯೊಂದರ ಸ್ಕೂಲ್ ಬಸ್ ಚಾಲಕನಾಗಿ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ. ನಿನ್ನೆ (ಮಂಗಳವಾರ) ಸಂಜೆ ಎಂದಿನಂತೆ ಶಾಲಾ ಮಕ್ಕಳನ್ನು ಡ್ರಾಪ್ ಮಾಡಿ ನಾಯಂಡಹಳ್ಳಿ ಬಳಿ ಹೋಗುತ್ತಿರುವಾಗ ಡ್ರಾಪ್ ಕೊಡುವ ಸೋಗಿನಲ್ಲಿ ಮಹಿಳೆಯನ್ನು ಬಸ್ಗೆ ಹತ್ತಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಸ್ವಲ್ಪ ದೂರ ಹೋಗಿ ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಿ, ಬಸ್ನಲ್ಲೇ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಮಹಿಳೆಯನ್ನು ಅಲ್ಲೇ ಬಿಟ್ಟು ಶಿವಕುಮಾರ್ ಪರಾರಿಯಾಗಿದ್ದ. ಇತ್ತ, ಸಂತ್ರಸ್ತ ಮಹಿಳೆ ಬಸ್ ಫೋಟೋ ತೆಗೆದುಕೊಂಡಿದ್ದು, ಮಗನಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ತಾಯಿ ನೀಡಿದ ಮಾಹಿತಿ ಮೇರೆಗೆ ಆಕೆಯ ಮಗ ಬಸ್ ಚಾಲಕನನ್ನು ಪತ್ತೆ ಮಾಡಿ, ಹಿಡಿದು ಥಳಿಸಿದ್ದಾನೆ.
ಅಲ್ಲಿಂದ ಚಂದ್ರಾಲೇಔಟ್ ಪೊಲೀಸರಿಗೆ ಈ ಘಟನೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ವಕೀಲನಿಗೆ 25 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್