ತುಮಕೂರು : ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಇಂದು ಕೊರಟಗೆರೆ ನಾಮಪತ್ರ ಸಲ್ಲಿಸಲು ತಾಲ್ಲೂಕು ಕಚೇರಿ ಒಳಭಾಗ ಹೋಗುತ್ತಿದ್ದಾಗ ನೆರೆದಿದ್ದ ಜನರ ಗುಂಪಿನಿಂದ ಕಲ್ಲು ತೂರಿ ಬಂದಿದ್ದು ಗೇಟ್ ಒಳಭಾಗದಲ್ಲಿ ನಿಂತಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಗಾಯಗೊಂಡರು. ಕಲ್ಲೇಟಿನಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಕುಸಿದುಬಿದ್ದರು. ಕೂಡಲೇ ಆರೈಕೆ ಮಾಡಿ ಪೊಲೀಸ್ ಜೀಪ್‌ನಲ್ಲಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ನಾಮಪತ್ರ ಸಲ್ಲಿಸಲು ಕೊರಟಗೆರೆ ಪಟ್ಟಣದಾದ್ಯಂತ ಸಾವಿರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಪರಮೇಶ್ವರ್ ತಾಲೂಕು ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಗೇಟ್ ಒಳಭಾಗಕ್ಕೆ ಪರಮೇಶ್ವರ್ ತೆರಳಿದ ಬಳಿಕ ಕಲ್ಲೆಸೆಯಲಾಗಿದೆ. ಅಪಾರ ಸಂಖ್ಯೆಯಲ್ಲಿದ್ದ ಜನರ ಮಧ್ಯೆ ಯಾರು ಕಲ್ಲು ಎಸೆದಿದ್ದಾರೆ ಎಂದು ಗೊತ್ತಾಗಲಿಲ್ಲ.
ಪರಮೇಶ್ವರ್ ಹಾಗೂ ಅವರ ಜೊತೆಯಲ್ಲಿದ್ದ ಸಿ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದವರಿಗೆ ಕಲ್ಲೇಟು ಬಿದ್ದಿಲ್ಲ. ಕಲ್ಲುತೂರಾಟ ನಡೆದ ಸಂದರ್ಭದಲ್ಲಿ ಕೆಲವು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಮ್ಮ ನಾಯಕ ಯಡಿಯೂರಪ್ಪನವರ ಮನೆ ಮೇಲಿನ ದಾಳಿ ಖಂಡನೀಯ: ಶಿಕಾರಿಪುರ ಬಂಜಾರ ಮುಖಂಡರು
ಇದನ್ನೂ ಓದಿ: ನಮ್ಮ ಮನೆ ಮೇಲೆ ನಡೆದ ಕಲ್ಲು ತೂರಾಟ ವಿರೋಧ ಪಕ್ಷದ ಪ್ರಾಯೋಜಿತ ಕೃತ್ಯ: ಸಂಸದ ಬಿ ವೈ ರಾಘವೇಂದ್ರ