ETV Bharat / state

ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿದ ಕೇಸ್​; ಇದು ದುಶ್ಯಾಸನ ರಾಜ್ಯ, ಮಹಿಳೆಯ ನೆರವಿಗೆ ಯಾರೂ ಬಂದಿಲ್ಲ ಎಂದ ಹೈಕೋರ್ಟ್ - ತೀವ್ರ ಖಂಡನೆ ವ್ಯಕ್ತಪಡಿಸಿರುವ ಹೈಕೋರ್ಟ್

ಬೆಳಗಾವಿ ತಾಲೂಕಿನಲ್ಲಿ ಮಹಿಳೆ ವಿವಸ್ಸ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಬೇಸರ ವ್ಯಕ್ತಪಡಿಸಿದೆ. ಇದು ದುಶ್ಯಾಸನ ರಾಜ್ಯ, ಮಹಿಳೆ ನೆರವಿಗೆ ಯಾರೂ ಬಂದಿಲ್ಲ ಎಂದು ಹೈಕೋರ್ಟ್​ ಬೇಸರ ವ್ಯಕ್ತಪಡಿಸಿದೆ.

Woman naked paraded case  Dushyasana empire  High Court  no one came to help the woman  ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ  ಇದು ದುಶ್ಯಾಸನ ರಾಜ್ಯ  ಮಹಿಳೆಯ ನೆರವಿಗೆ ಯಾರೂ ಬಂದಿಲ್ಲ  ಮಾರ್ಮಿಕವಾಗಿ ನುಡಿದ ಹೈಕೋರ್ಟ್  ಹೈಕೋರ್ಟ್​ ಮಾರ್ಮಿಕ  ಮಹಿಳೆ ನೆರವಿಗೆ ಯಾರೂ ಬಂದಿಲ್ಲ  ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ  ತೀವ್ರ ಖಂಡನೆ ವ್ಯಕ್ತಪಡಿಸಿರುವ ಹೈಕೋರ್ಟ್  ಮುಖ್ಯ ನ್ಯಾಯಮೂರ್ತಿ  ಪ್ರಸನ್ನ ಬಾಲಚಂದ್ರ ವರಾಳೆ
ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ
author img

By ETV Bharat Karnataka Team

Published : Dec 14, 2023, 1:55 PM IST

Updated : Dec 14, 2023, 7:35 PM IST

ಬೆಂಗಳೂರು: ಬೆಳಗಾವಿ ತಾಲೂಕಿನಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿರುವ ಕ್ರಮಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಹೈಕೋರ್ಟ್, ಇದು ದುಶ್ಯಾಸನ ರಾಜ್ಯವಾಗಿದ್ದು, ಮಹಿಳೆಯ ನೆರವಿಗೆ ಯಾರೂ ಮುಂದಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದಿದೆ.

ಬೆಳಗಾವಿಯ ತಾಲೂಕಿನ ಗ್ರಾಮವೊಂದರಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಘಟನೆ ಕುರಿತಂತೆ ಪ್ರಸ್ತಾಪಿಸಿದ ನ್ಯಾಯಪೀಠ, ದ್ರೌಪದಿಯನ್ನು ವಿವಸ್ತ್ರಗೊಳಿಸಿದಾಗ ರಕ್ಷಿಸಲು ಕೃಷ್ಣ ಇದ್ದ. ಇದು ದುಶ್ಯಾಸನರ ಕಾಲವಾಗಿದೆ. ಮಹಿಳೆ ನೆರವಿಗೆ ಯಾರೂ ಬಂದಿಲ್ಲ. ನಮ್ಮಲ್ಲಿ ಕಾನೂನಿನ ಭಯವಿಲ್ಲ ಎಂಬ ಸಂದೇಶ ಹೋಗುತ್ತಿದೆ. ಸ್ವಾತಂತ್ರ್ಯ ಬಂದ 75 ವರ್ಷದ ನಂತರವೂ ಇಂತಹ ಘಟನೆ ನಡೆದಿದೆ. ಬಡ ಜನತೆಗೆ ರಕ್ಷಣೆ ಬೇಕಾಗಿದೆ. ಬದಲಾಗಿ ಇಂತಹ ಸಮಾಜದಲ್ಲಿ ಬದುಕುವುದಕ್ಕಿಂತ ಸಾಯುವುದು ಮೇಲು ಎಂಬ ಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದು ಪೀಠ ತಿಳಿಸಿತು.

ಮಗ ಮಾಡಿದ ತಪ್ಪಿಗೆ ತಾಯಿಗೆ ಶಿಕ್ಷೆ ನೀಡಲಾಗಿದೆ. ಮಗನನ್ನು ಹೆತ್ತಿದ್ದೆ ಆ ತಾಯಿಯ ತಪ್ಪಾ?, ಸಂತ್ರಸ್ತೆಯನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಂಡಿದ್ದಾರೆ. ಅಂತಹ ವ್ಯಕ್ತಿಗಳು ಮನುಷ್ಯರೆಂದು ಕರೆಸಿಕೊಳ್ಳಲು ಯೋಗ್ಯರಲ್ಲ. ಎರಡು ಗಂಟೆಗಳ ಕಾಲ ಮಹಿಳೆಯನ್ನು ಹಿಂಸಿಸಲಾಗಿದೆ. ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಹೊಡೆಯಲಾಗಿದೆ.‌ ಈ ಸಂದರ್ಭದಲ್ಲಿ ಸಂತ್ರಸ್ತೆ ಎದುರಿಸಿರಬಹುದಾದ ನೋವು ಊಹಿಸಲಾಗುವುದಿಲ್ಲ ಎಂದು ಪೀಠ ತಿಳಿಸಿತು.

ಸಮಾಜದಲ್ಲಿ ಬಡವರ ಮೇಲೆಯೇ ಇಂತಹ ದೌರ್ಜನ್ಯಗಳೇಕೆ ನಡೆಯುತ್ತವೆ. ಸಂತ್ರಸ್ತೆಗೆ ಅತ್ಯುತ್ತಮ ಚಿಕಿತ್ಸೆ, ಕೌನ್ಸೆಲಿಂಗ್ ಒದಗಿಸುವ ಅಗತ್ಯವಿದೆ. ಯಾವ ಆಸ್ಪತ್ರೆಯಲ್ಲಿ ಯಾವ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಪೊಲೀಸರ ವಿರುದ್ಧ ಕೈಗೊಂಡ ಕ್ರಮವೇನು ಎಂಬುದರ ಕುರಿತು ವರದಿ ನೀಡಬೇಕು ಎಂದು ಪೀಠ ವಿಚಾರಣೆ ವೇಳೆ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರಿಗೆ ಸೂಚನೆ ನೀಡಿತು.

ಮಹಿಳಾ ಆಯೋಗ ಇದೆಯೇ?: ಟಿವಿಗಳಲ್ಲಿ ನಡೆಯುವ ಸಂಭಾಷಣೆ ಕುರಿತು ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗುತ್ತಿದೆ. ಆದರೆ, ಮಹಿಳೆಯನ್ನು ಅತ್ಯಂತ ಹೀನಾಯದಿಂದ ಹಿಂಸೆ ನೀಡಲಾಗಿದೆ. ಆದರೆ, ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ ಏನು ಮಾಡುತ್ತಿವೆ ಎಂದು ಪೀಠ ಪ್ರಶ್ನೆ ಮಾಡಿತು.

ಎಜಿ ವರದಿಗೆ ಅತ್ಯಪ್ತಿ ವ್ಯಕ್ತಪಡಿಸಿದ ಹೈಕೋರ್ಟ್ : ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.‌ ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸುತ್ತಿದ್ದು, ಅವರಿಗೆ ಅಗತ್ಯ ಭದ್ರತೆ ನೀಡಲಾಗುತ್ತಿದೆ ಎಂದು ಅಡ್ವೋಕೇಟ್ ಜನರಲ್ ವಿವರಣೆ ನೀಡಿದರು. ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ಸಂತ್ರಸ್ತರು ಸತ್ತ‌ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ ಎಂದರೆ ಸಾಕಾಗುವುದಿಲ್ಲ. ಅದೊಂದು ಅಸಾಧಾರಣ ಪ್ರಕರಣವಾಗಿದ್ದು, ಅದಕ್ಕೆ ಅಗತ್ಯ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪೀಠ ತಿಳಿಸಿತು.

ಘಟನೆ ಅತ್ಯಂತ ಬೇಸರ ತಂದಿದ್ದು, ಇದರಿಂದ ನಮಗೆಲ್ಲರಿಗೂ ಅವಮಾನ ತರುವಂತಾಗಿದೆ. ಈ ಘಟನೆ ನಮ್ಮನ್ನು 21ನೇ ಶತಮಾನಕ್ಕೆ ಹೋಗುತ್ತಿದ್ದೇವೆಯೇ ಅಥವಾ 17ನೇ ಶತಮಾನಕ್ಕೆ ಹಿಂತಿರುಗುತ್ತೇವೆಯೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದು ಪೀಠ ಹೇಳಿತು. ಅಲ್ಲದೆ, ಘಟನೆಯಿಂದಾದ ವೇದನೆಯು ಅಂತಹ ಕಟುವಾದ ಪದಗಳನ್ನು ಬಳಸುವಂತೆ ಮಾಡುತ್ತದೆ. ನಮ್ಮ ದುಃಖವನ್ನು ಕೆಲವು ಕಟುವಾದ ಮಾತುಗಳಲ್ಲಿ ವ್ಯಕ್ತಪಡಿಸುವುದಷ್ಟೇ ನಾವು ಮಾಡಬಹುದೆಂದು ನಾವು ಭಾವಿಸುತ್ತೇವೆ ಎಂದು ನ್ಯಾಯಮೂರ್ತಿಗಳು ಹೇಳಿದರು.

ಮುಂದಿನ ವಿಚಾರಣೆ ವೇಳೆ ಎಸ್​ಪಿ ಹಾಜರಿಗೆ ಸೂಚನೆ: ಸಾರ್ವಜನಿಕರಿಗೆ ಕಾನೂನು ಕುರಿತಂತೆ ನಿರ್ಲಕ್ಷ್ಯ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ವಿಚಾರಣೆ ವೇಳೆ ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಎಸಿಪಿ ಖುದ್ದು ಹಾಜರಾಗಬೇಕು. ಘಟನೆ ಸಂಬಂಧ ವಿವರಣೆ ನೀಡಬೇಕು ಎಂದು ಪೀಠ ತಿಳಿಸಿದೆ. ಇದೇ ವೇಳೆ ಸಂತ್ರಸ್ತ ಮಹಿಳೆಗೆ ಯಾವುದೇ ಪರಿಹಾರ ಯೋಜನೆ ಲಭ್ಯವಿದೆಯೇ ಎಂದು ಪರಿಶೀಲಿಸುವಂತೆ ಅಡ್ವೋಕೇಟ್ ಜನರಲ್ ಅವರಿಗೆ ಪೀಠ ಸಲಹೆ ನೀಡಿತು. ಅಲ್ಲದೆ, ಆರ್ಥಿಕ ನೆರವಿನೊಂದಿಗೆ ಬರಲು ಸೂಚನೆ ನೀಡಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ಏನಿದು ಪ್ರಕರಣ: ಪ್ರೀತಿಸಿದ ಜೋಡಿ ಮನೆ ಬಿಟ್ಟು ಹೋಗಿದ್ದರಿಂದ ಯುವಕನ ತಾಯಿಯ ಮೇಲೆ ಯುವತಿಯ ಕುಟುಂಬಸ್ಥರು ದೌರ್ಜನ್ಯ ಮೆರೆದಿದ್ದರು. 42 ವರ್ಷ ವಯಸ್ಸಿನ ಮಹಿಳೆ ಹಲ್ಲೆಗೆ ಒಳಗಾಗಿದ್ದರು. ಕಂಬಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಕೀಚಕರು ಅಮಾನವೀಯವಾಗಿ ವರ್ತಿಸಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಪ್ರಕರಣ ತನಿಖಾ ಹಂತದಲ್ಲಿದೆ.

ಓದಿ: ಮಗನ 'ಪ್ರೀತಿ', ತಾಯಿಗೆ ಶಿಕ್ಷೆ; ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ

Last Updated : Dec 14, 2023, 7:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.