ETV Bharat / state

ಕುಣಿಗಲ್​ ಬಳಿ ಮಹಿಳೆ ನಾಪತ್ತೆ: ಪತಿಯಿಂದ ದೂರು

ಬೆಂಗಳೂರಿನಿಂದ ಹಾಸನಕ್ಕೆ ಬಸ್ಸೊಂದರಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಹಾಸನದ ಪಂಕಜ ಎಂಬುವರು ತಮ್ಮ ಮೊಬೈಲ್​​ನ್ನು ದರೋಡೆಕೋರರು ಕಸಿದುಕೊಳ್ಳುವ ಮುನ್ನ ತಮ್ಮ ಪತಿಗೆ ಫೋನ್ ಮಾಡಿ, ಕುಣಿಗಲ್ ಸಮೀಪ ಬಸ್​​ ನಾಪತ್ತೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗ್ತಿದೆ.

ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆ
author img

By

Published : Sep 13, 2019, 8:41 AM IST

Updated : Sep 13, 2019, 10:45 AM IST

ಹಾಸನ: ಬೆಂಗಳೂರಿನಿಂದ ಹಾಸನಕ್ಕೆ ಹೊರಟಿದ್ದ ಬಸ್​ ವೊಂದರಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ವದರಿಯಾಗಿದ್ದು, ಈ ಸಂಬಂಧ ನಾಪತ್ತೆಯಾದ ಮಹಿಳೆಯ ಪತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆ ನಾಪತ್ತೆ ಆಗಿದ್ದು ಹೇಗೆ? : ಬಸ್​​ನಲ್ಲಿ ತೆರಳುತ್ತಿದ್ದ ಹಾಸನದ ಪಂಕಜ ಎಂಬುವರು ತಮ್ಮ ಮೊಬೈಲ್ಅನ್ನು ದುಷ್ಕರ್ಮಿಗಳು ಕಸಿದುಕೊಳ್ಳುವ ಮುನ್ನ ತಮ್ಮ ಪತಿಗೆ ಫೋನ್ ಮಾಡಿ, ಕುಣಿಗಲ್ ಸಮೀಪ ಬಸ್​​ ನ್ನು ಯಾರೋ ದುಷ್ಕರ್ಮಿಗಳು ತಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರಂತೆ.

ರಾಜಗೋಪಾಲ್​ನಗರ, ಜಾಲಹಳ್ಳಿ ಕ್ರಾಸ್​ ಪೊಲೀಸ್​ ಠಾಣೆಯಲ್ಲಿ ದೂರು: ಈ ಸಂಬಂಧ ರಾಜಗೋಪಾಲ್ ನಗರ ಮತ್ತು ಜಾಲಹಳ್ಳಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪಂಕಜ ಅವರ ಪತಿ ದೂರು ದಾಖಲಿಸಿದ್ದು, ನಿನ್ನೆ ಮಧ್ಯಾಹ್ನದಿಂದ ಪೊಲೀಸರು ಬೆಂಗಳೂರಿನಿಂದ ಹಾಸನಕ್ಕೆ ಹೊರಟ ಕೆಎಎಸ್​ಆರ್​ಟಿಸಿ ಬಸ್​ಗಳ ಮಾಹಿತಿ ಜೊತೆಗೆ, ಕೆಲವು ಖಾಸಗಿ ಬಸ್​ಗಳ ಮಾಹಿತಿಯನ್ನೂ ಕೂಡಾ ಕಲೆಹಾಕಿದ್ದಾರೆ.

ನಾಪತ್ತೆಯಾದ ಮಹಿಳೆ ಪುತ್ರ ಹೇಳೋದೇನು?

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಂಕಜ ಅವರ ಪುತ್ರ ಧನಂಜಯ್​, ಹಾಸನದ ನಿಟ್ಟೂರಿನಲ್ಲಿ ನನ್ನ ಸೋದರಮಾವನ ಮನೆಯಿದ್ದು ಮಾತನಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಅಮ್ಮ ಹೊರಟಿದ್ದರು. ನನ್ನ ತಂದೆಯೇ ರಾಜಗೋಪಾಲ ನಗರದಿಂದ ಜಾಲಹಳ್ಳಿ ಕ್ರಾಸ್ ಗೆ ಬಿಎಂಟಿಸಿ ಬಸ್ ನಲ್ಲಿ ಹತ್ತಿಸಿ ಕಳುಹಿಸಿದ್ದರು.‌ ನಂತರ ಜಾಲಹಳ್ಳಿ ಕ್ರಾಸ್ ನಿಂದ ತಾಯಿಯು ಹಾಸನದ ಬಸ್ ಹತ್ತಿದ್ದಾರೆ. ಮಾರ್ಗಮಧ್ಯೆ ಕುಣಿಗಲ್ ಬಳಿ ದರೋಡೆಕೋರರು ಬಸ್​ನಲ್ಲಿ ನನ್ನ ತಾಯಿ ಸೇರಿ ಸುಮಾರು ಹತ್ತು ಮಂದಿ ಪ್ರಯಾಣಿಕರ ಸಮೇತ ಬಸ್ ವಶಕ್ಕೆ ಪಡೆದು ಅರಣ್ಯ ಪ್ರದೇಶದ ಕಡೆ ತಿರುಗಿಸಿದ್ದಾರೆ ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ. ದರೋಡೆಕೋರರು ಹೆದರಿಸಿ ಎಲ್ಲರ ಮೊಬೈಲ್​ಗಳನ್ನು ಕಸಿದುಕೊಂಡಿರುವ ಬಗ್ಗೆ ಕೊನೆ ಬಾರಿ ನನ್ನ ತಂದೆಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ಧನಂಜಯ್​ ಮಾಹಿತಿ ನೀಡಿದ್ದಾರೆ.

ಕೆಎಸ್​​ಆರ್​​ಟಿಸಿ ಅಧಿಕಾರಿಗಳಿಂದ ಸ್ಪಷ್ಟನೆ:

ಆದರೆ, ಕೆಎಸ್ಆರ್​ಟಿಸಿ ಅಧಿಕಾರಿಗಳು ಮಾತ್ರ ಯಾವುದೇ ಬಸ್ ಹೈಜಾಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ಬೆಂಗಳೂರು ನಗರ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಪ್ರತಿಕ್ರಿಯಿಸಿ, ಬಸ್ ಹೈಜಾಕ್ ಮಾಡಿರುವ ವಿಚಾರ ತಿಳಿದುಬಂದಿಲ್ಲ. ಮಹಿಳೆಯೊಬ್ಬರು ಜಾಲಹಳ್ಳಿಯಿಂದ ನಾಪತ್ತೆಯಾಗಿರುವುದಾಗಿ ದೂರು ಬಂದಿದ್ದು, ಈ ಬಗ್ಗೆ ಪೀಣ್ಯ ಪೊಲೀಸರು ತನಿಖೆ‌ ‌ನಡೆಸುತ್ತಿರುವುದಾಗಿ ಹೇಳಿದ್ದಾರೆ. .

Intro:-NATIONAL BIGGEST NEWS-

ಹಾಸನ: ಬೆಂಗಳೂರಿನಿಂದ ಹಾಸನಕ್ಕೆ ಹೊರಟ ಬಸ್ಸೊಂದನ್ನ ಹೈಜಾಕ್ ಮಾಡಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ನಿಟ್ಟೂರಿನವರಾದ ಹಾಗೂ ಬೆಂಗಳೂರಿನ ರಾಜಗೋಪಾಲ್ ನಗರದ ನಿವಾಸಿಯಾಗಿರೋ ಶಾಮಚಾರಿ ಪತ್ನಿ ಪಂಕಜಾ ಎಂಬುವರು ಬೆಂಗಳೂರಿನಿಂದ ಹಾಸನಕ್ಕೆ ಹೊರಟಿದ್ದವರು ಸದ್ಯ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ರಾಜಗೋಪಾಲ್ ನಗರದಿಂದ ಸುಮಾರು 9 ಗಂಟೆಗೆ ಬಿಎಂಟಿಸಿ ಬಸ್ ಹತ್ತಿ ಜಾಲಹಳ್ಳಿ ಕ್ರಾಸ್ ಗೆ ಬಂದಿದ್ದಾರೆ. ಅಲ್ಲಿಂದ 10.15ಕ್ಕೆ ಹಾಸನ ಬಸ್ ಹತ್ತಿದ್ದಾರೆ ಎನ್ನಲಾಗಿದೆ. ಇನ್ನು ಸರ್ಕಾರಿ ಬಸ್ ಹತ್ತಿದ್ದಾರಾ ? ಅಥವಾ ಖಾಸಗಿ ಬಸ್ ಹತ್ತಿದ್ದಾರೆಯೇ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.

ಇನ್ನು ಬಸ್ ನ್ನ ಹೈಜಾಕ್ ಮಾಡಿರುವವರಲ್ಲಿ ಓರ್ವ ಮಹಿಳೆಯ ಸೇರಿ 5 ಮಂದಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲರ ಮೊಬೈಲ್ ಗಳನ್ನ ಕಸಿದಕೊಂಡು ಸ್ವಿಚ್ ಆಫ್ ಮಾಡಿದ್ದಾರೆ. ಅದ್ರಲ್ಲಿ ಪಂಕಜ ಎಂಬುವರು ತಮ್ಮ ಮೊಬೈಲ್ ಕಸಿದುಕೊಳ್ಳುವ ಮುನ್ನ ತನ್ನ ಪತಿಗೆ ಪೋನ್ ಮಾಡಿ, ನಮ್ಮ ಕುಣಿಗಲ್ ಸಮೀಪ್ ಬಸ್ಸನ್ನ ಕಾಡಿನಲ್ಲಿ ಹೈಜಾಕ್ ಮಾಡಿದ್ದಾರೆ ಎಂದು ಹೇಳಿದ್ದು, ನಮ್ಮನ್ನ ಕೆಲವು ಕಳ್ಳರು ಹಿಡಿದಿಟ್ಟುಕೊಂಡಿದ್ದು ಬೆದರಿಕೆ ಒಡ್ಡಿದ್ದಾರೆ. ನಂತ್ರ ಚಾಲಕ ಮತ್ತು ನಿರ್ವಾಹಕನ್ನ ಹೆದರಿಸಿ ಬಸ್ಸನ್ನ ಬೆರೆಡೆಗೆ ಕರೆದೊಯ್ದಿದ್ದಾರೆ. ಇದು ಯಾವುದೋ ಒಂದು ಕಾಡು ಎನಿಸುತ್ತಿದೆ. ಸರಿಯಾಗಿ ಯಾವ ಸ್ಥಳ ಎಂದು ಗೊತ್ತಾಗುತ್ತಿಲ್ಲ. ಎಂದು ಹೇಳಿದ ಬಳಿಕ ಪಂಕಜರವರ ಮೊಬೈಲ್ ಸ್ವಿಚ್ ಆಫ್ ಆಗಿದೆಯಂತೆ. ನಂತ್ರ ಮಧ್ಯಾಹ್ನದಿಂದ ಪೊನ್ ಆನ್ ಆಗಿಲ್ಲ ಎಂಬುದು ಪಂಕಜಾ ಮಗನ ಮಾತು.

ಇನ್ನು ಈ ಸಂಬಂಧ ರಾಜಗೋಪಾಲ್ ನಗರ ಮತ್ತು ಜಾಲಹಳ್ಳಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಹೈಜಾಕ್ ಎಂದು ದೂರವಾಣಿ ಕರೆ ಮಾಡಿದ ಪಂಕಜಾರವರ ಪತಿ ದೂರು ದಾಖಲಿಸಿದ್ದು, ಮಧ್ಯಾಹ್ನದಿಂದ ಪೊಲೀಸ್ ರು ಬೆಂಗಳೂರಿನಿಂದ ಹಾಸನಕ್ಕೆ ಹೊರಟ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಮಾಹಿತಿಯನ್ನ ಕಲೆಹಾಕಿರುವ ಜೊತೆಗೆ ಕೆಲವು ಖಾಸಗಿ ಬಸ್ ಗಳ ಮಾಹಿತಿಯನ್ನ ಕೂಡಾ ಕಲೆಯಾಕಿದ್ದಾರೆ. ಆದ್ರೆ ಬೆಂಗಳೂರಿನಿಂದ ಹೊರಟ ಆ ಬಸ್ ಆದ್ರು ಯಾವುದು...? ನಿಜವಾಗಿಯೂ ಬಸ್ ಹೈಜಾಕ್ ಆಗಿದ್ಯಾ ..? ಹೈಜಾಕ್ ಆದ ಬಸ್ ನಿಂದ ಪಂಕಜಾ ದೂರವಾಣಿ ಕರೆ ಮಾಡಿದ್ದು, ನಿಜನಾ...? ಅಥವಾ ಪಂಕಜಾ ಸೇರಿದಂತೆ ಎಷ್ಟು ಮಂದಿ ಪ್ರಯಾಣಿಕರು ಬಸ್ ನಲ್ಲಕಿದ್ರು ? ಎಂಬುದು ಪೊಲೀಸ್ ತನಿಖೆಯಿಂದ ಮಾತ್ರ ಬಯಲಾಗಬೇಕಿದೆ.

ಕಳೆದ ತಿಂಗಳು ಕೂಡಾ ದೇಶದಲ್ಲಿ ಉಗ್ರರು ನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಸುಳಿವು ನೀಡಿತ್ತು. ಇದ್ರ ಬೆನ್ನಲ್ಲಿಯೇ ರಾಜ್ಯದ ರಾಜಧಾನಿ ಸೇರಿದಂತೆ ಎಲ್ಲಾ ಜಿಲ್ಲೆಯಲ್ಲಿಯೂ ಪೊಲೀಸ್ರು ಹೈ ಅಲರ್ಟ್ ಘೋಷಣೆ ಮಾಡಿದ್ದು, ಕೆಲ ದಿನಗಳ ಬಳಿಕ ದೇಶವೇ ಬೆಚ್ಚಿಬೀಳಿಸುವಂತಹ ಸುದ್ದಿ ಇದಾಗಿದ್ದು, ನಿಜಕ್ಕೂ ಹೈಜಾಕ್ ಹಾಗಿದ್ಯಾ....? ಪೊಲೀಸ್ರ ತನಿಖೆಯಿಂದಲೇ ಬಯಲಾಗಬೇಕಿದೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Sep 13, 2019, 10:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.