ETV Bharat / state

ಬೆಂಗಳೂರು: ಮನೆಗೆ‌‌ ನುಗ್ಗಿ ಮಹಿಳೆಯ ಕತ್ತು ಹಿಸುಕಿ ಹತ್ಯೆ - ಸಾವು

ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

murder
ಮಹಿಳೆ ಹತ್ಯೆ
author img

By ETV Bharat Karnataka Team

Published : Jan 5, 2024, 7:06 AM IST

ಬೆಂಗಳೂರು: ಮಹಿಳೆ ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕುತ್ತಿಗೆ ಹಿಸುಕಿ ಕೊಲೆಗೈದು ಪರಾರಿಯಾದ ಘಟನೆ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಪ್ರಭಾಕರ್ ರೆಡ್ಡಿ ಲೇಔಟ್ ನಿವಾಸಿ ನೀಲಂ (30) ಕೊಲೆಯಾದ ಮಹಿಳೆ.

ಪರಿಚಯಸ್ಥರೇ ಕೃತ್ಯ ಎಸಗಿರುವ ಅನುಮಾನ ಮೂಡಿದೆ. ಈ ಸಂಬಂಧ ನೀಲಂ ಪತಿ ಪ್ರದ್ಯುನ್ಮ ಎಂಬುವರು ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಪ್ರದ್ಯುನ್ಮ 11 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಬೆಟ್ಟದಾಸನಪುರ ಸಮೀಪದ ಪ್ರಭಾಕರ್ ರೆಡ್ಡಿ ಲೇಔಟ್‌ನಲ್ಲಿ ಪತ್ನಿ ನೀಲಂ ಹಾಗೂ ಇಬ್ಬರು ಗಂಡು ಮಕ್ಕಳ ಜೊತೆ ವಾಸವಾಗಿದ್ದಾರೆ.

ಮನೆ ಸಮೀಪದಲ್ಲೇ ಹಾರ್ಡ್‌ವೇರ್​ ಮಳಿಗೆ ಹೊಂದಿದ್ದು, ಅದನ್ನು ನೀಲಂ ಸಹೋದರ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರದ್ಯುನ್ಮ ಪೇಂಟಿಂಗ್ ಗುತ್ತಿಗೆದಾರಾಗಿದ್ದಾರೆ. ಗುರುವಾರ ಬೆಳಗ್ಗೆ ಎಂದಿನಂತೆ ಪ್ರದ್ಯುನ್ಮ ಕೆಲಸಕ್ಕೆ ತೆರಳಿದ್ದು, ಮಕ್ಕಳು ಶಾಲೆಗೆ ಹೋಗಿದ್ದಾರೆ. ಮನೆಯಲ್ಲಿ ನೀಲಂ ಒಬ್ಬರೇ ಇದ್ದರು.

ಅಪರಾಹ್ನ 12 ಗಂಟೆ ಸುಮಾರಿಗೆ ಮನೆಗೆ ನುಗ್ಗಿರುವ ದುಷ್ಕರ್ಮಿಗಳು, ಮನೆಯ ಪ್ರಾಂಗಣದಲ್ಲೇ ನೀಲಂ ಕುತ್ತಿಗೆ ಬಿಗಿದು ಪರಾರಿಯಾಗಿದ್ದಾರೆ. ಮಕ್ಕಳು ಸಂಜೆ ಶಾಲೆಗೆ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ವೇಳೆ ಮನೆಯಲ್ಲಿ ಚಿನ್ನಾಭರಣ, ನಗದು ಅಥವಾ ಬೇರೆ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ಹೀಗಾಗಿ ಪರಿಚಯಸ್ಥರೇ ಬಂದು ಕೊಲೆಗೈದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮನೆಗೆ ಮುಂಬಾಗಿಲು ಅಲ್ಲದೆ, ಕಬ್ಬಿಣದಿಂದ ಮಾಡಿರುವ ಡೋರ್ ಕೂಡ ಇದೆ. ಪತಿ ಮತ್ತು ಮಕ್ಕಳು ಹೊರಗಡೆ ತೆರಳಿದಾಗ, ಅದನ್ನು ನೀಲಂ ನಿತ್ಯ ಲಾಕ್ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಡೋರ್ ತೆರೆದವರು ಯಾರು? ನೀಲಂ ಅವರೇ ತೆರೆದಿದ್ದರಾ? ಆಕೆಯ ಪತಿ ಅಥವಾ ಸಹೋದರ ತೆರೆದಿದ್ದರಾ? ಎಂಬುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಎಲೆಕ್ಟ್ರಾನಿಕ್​ ಸಿಟಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಳಗಾವಿ: ಮಹಿಳೆ ಮೂಗು ಕೊಯ್ದಿದ್ದ ಆರೋಪಿ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.