ETV Bharat / state

ಫೇಕ್​​​​ ಸರ್ಟಿಫಿಕೇಟ್ ಕೊಟ್ಟು ವಿಮಾ ಕಂಪನಿಗೆ 3 ಕೋಟಿ ಪಂಗನಾಮ.. ಮಹಿಳೆ ಕರಾಮತ್ತು ಹೇಗಿತ್ತು ಗೊತ್ತಾ? - ಫೇಕ್​​​​ ಸರ್ಟಿಫಿಕೇಟ್ ಕೋಟ್ಟು ವಿಮಾ ಕಂಪನಿಗೆ ಮೂರು ಕೋಟಿ ಪಂಗನಾಮ ಹಾಕಿದ ಮಹಿಳೆ

ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ ವಿಚಾರ ಮುಚ್ಚಿಟ್ಟು ವಿಮೆ ಮಾಡಿಸಿರೋದಲ್ಲದೇ, ಹಾರ್ಟ್ ಅಟ್ಯಾಕ್ ನಿಂದ ಮೃತಪಟ್ಟಿರೋದಾಗಿ ಕೃಷ್ಣಪ್ರಸಾದ್ ಪತ್ನಿ ಸುಪ್ರಿಯಾ ಇನ್ಯೂರೆನ್ಸ್ ಕಂಪನಿಗೆ ಸುಳ್ಳು ದಾಖಲೆ ನೀಡಿ 3 ಕೋಟಿ ಹಣ ಕ್ಲೈಂ ಮಾಡಿರೋ ವಿಚಾರ ಗೊತ್ತಾಗಿದೆ.

ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ

author img

By

Published : Feb 9, 2022, 4:45 PM IST

ಬೆಂಗಳೂರು : ಇದು ಯಾವುದೇ ಕ್ತೈಂ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲದಂತೆ ಪ್ಲ್ಯಾನ್ ಮಾಡಿ ವಂಚಿಸಿರುವ ಕಥೆಯಿದು. ವ್ಯವಸ್ಥಿತ ಸಂಚು ರೂಪಿಸಿ ಅಂದು ಕೊಂಡಂತೆ ಮಹಿಳೆಯೂ ಇನ್ಸೂರೆನ್ಸ್ ಕಂಪನಿಗೆ 3 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಸುಳ್ಳು ಮಾಹಿತಿ ನೀಡಿ ಇನ್ಯೂರೆನ್ಸ್ ಕಂಪನಿಯಿಂದ 3 ಕೋಟಿ ಹಣ ವಿಮೆ ಮಂಜೂರು ಮಾಡಿಸಿಕೊಂಡಿರುವ ಘಟನೆ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರಪ್ರದೇಶ ಮೂಲದ ಕೃಷ್ಣಪ್ರಸಾದ್ ಎಂಬಾತ ನಗರದ ಆಕ್ಸೆಂ‍ಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಪತ್ನಿ ಸುಪ್ರಿಯಾ ಎಂಬಾಕೆಯ ಜೊತೆ ಕೋರಮಂಗಲದ ವಿಟ್ಲಸಂದ್ರದಲ್ಲಿ ವಾಸವಾಗಿದ್ದ. ಟೆಕ್ಕಿ ಕೃಷ್ಣಪ್ರಸಾದ್​​​ಗೆ ಪತ್ನಿ ಸುಪ್ರಿಯಾ ಟಾಟಾ ಎಐಎ ಇನ್ಯೂರೆನ್ಸ್ ನಲ್ಲಿ ಮಹಾರಕ್ಷ ಸುಪ್ರೀಂ ಪಾಲಿಸಿ ಮಾಡಿಸಿದ್ದಳು. ಕಳೆದ ವರ್ಷ ಮಾರ್ಚ್ ನಲ್ಲಿ ಪಾಲಿಸಿ ಮಾಡಿಸುವ ವೇಳೆ 3 ತಿಂಗಳ ವೇತನ ರಸೀದಿ, ಮೆಡಿಕಲ್ ಎಕ್ಸಾಮಿನೇಷನ್ ರಿಪೊರ್ಟ್ ಜೊತೆ ವಾರ್ಷಿಕ ವಿಮೆ ಮೊತ್ತ 51 ಸಾವಿರ ಹಣ ಕಟ್ಟಿದ್ದರು.

ಆದರೆ, ವಿಮೆ ಮಾಡಿಸುವ ವೇಳೆ ತನ್ನ ಗಂಡ ಕೃಷ್ಣಪ್ರಸಾದ್​​ಗೆ ಕ್ಯಾನ್ಸರ್ ಕಾಯಿಲೆ ಇರುವ ವಿಚಾರ ಮುಚ್ಚಿಟ್ಟಿದ್ದಾಳೆ. ಅಲ್ಲದೇ ವಿಮೆ ಕಟ್ಟಲು ಆರಂಭಿಸಿದ ಮೂರೇ ತಿಂಗಳಲ್ಲಿ ಕೃಷ್ಣಪ್ರಸಾದ್ ಮೃತಪಟ್ಟಿದ್ದಾನೆ.

ನಕಲಿ ದಾಖಲೆ ನೀಡಿ 3 ಕೋಟಿ ಕ್ಲೈಮ್​ ಮಾಡಿದ್ದ ಚಾಲಾಕಿ: ಟಾಟಾ ಎಐಎ ಇನ್ಯೂರೆನ್ಸ್ ಕಂಪನಿಯಲ್ಲಿ ಗಂಡ ಕೃಷ್ಣಪ್ರಸಾದ್ ಹೆಸರಲ್ಲಿ 28 ವರ್ಷದ ಮಹಾರಕ್ಷ ಸುಪ್ರೀಂ ಪಾಲಿಸಿ ಮಾಡಿಸಿದ್ದ ಸುಪ್ರಿಯಾ, ಪಾಲಿಸಿ ಮಾಡಿಸಿದ್ದ ಮೂರೇ ತಿಂಗಳಲ್ಲಿ ಸುಪ್ರಿಯಾಳ ಗಂಡ ಚಿಕಿತ್ಸೆ ಫಲಿಸದೇ ಕ್ಯಾನ್ಸರ್​ನಿಂದ ಮೃತಪಟ್ಟಿದ್ದರು. ಕ್ಯಾನ್ಸರ್ ನಿಂದ ಸಾವನ್ನಪ್ಪಿದರೆ ಜೀವವಿಮೆ ಹಣ ಕ್ಲೈಂ ಆಗಲ್ಲ ಎಂಬುದನ್ನ ಅರಿತಿದ್ದ ಸುಪ್ರಿಯಾ ತನ್ನ ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವಿಮೆಗೆ ಕ್ಲೈಂ ಅರ್ಜಿ ಸಲ್ಲಿಸಿ ಕಳೆದ ವರ್ಷ ಜುಲೈನಲ್ಲಿ 3 ಕೋಟಿ ರೂಪಾಯಿ ಕ್ಲೈಂ ಮಾಡಿಕೊಂಡಿದ್ದರು.

ಸುಪ್ರಿಯಾ ಇನ್ಯೂರೆನ್ಸ್ ಕಂಪನಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಮೃತಪಟ್ಟ ಕೃಷ್ಣಪ್ರಸಾದ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಎಂದು ರವಿ ಎಂಬಾತ ಕಳೆದ ವರ್ಷ ಡಿಸೆಂಬರ್​ನಲ್ಲಿ ಇನ್ಯೂರೆನ್ಸ್ ಕಂಪನಿಗೆ ಮೇಲ್ ಮಾಡಿದ್ದ. ರವಿ ಎಂಬಾತನ ಮೇಲ್ ಅನ್ನು ಇನ್ಯೂರೆನ್ಸ್ ಕಂಪನಿ ಪರಿಶೀಲಿಸಿದಾಗ ಮೃತಪಟ್ಟ ಕೃಷ್ಣಪ್ರಸಾದ್ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ದಾಖಲಾಗಿರುವುದು ಖಚಿತಪಡಿಸಿಕೊಂಡಿದ್ದಾರೆ.

ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ ವಿಚಾರ ಮುಚ್ಚಿಟ್ಟು ವಿಮೆ ಮಾಡಿಸಿರೋದಲ್ಲದೇ, ಹಾರ್ಟ್ ಅಟ್ಯಾಕ್ ನಿಂದ ಮೃತಪಟ್ಟಿರೋದಾಗಿ ಕೃಷ್ಣಪ್ರಸಾದ್ ಪತ್ನಿ ಸುಪ್ರಿಯಾ ಇನ್ಯೂರೆನ್ಸ್ ಕಂಪನಿಗೆ ಸುಳ್ಳು ದಾಖಲೆ ನೀಡಿ 3 ಕೋಟಿ ಹಣ ಕ್ಲೈಂ ಮಾಡಿರೋ ವಿಚಾರ ಗೊತ್ತಾಗಿದೆ.

ಇನ್ಯೂರೆನ್ಸ್ ಕಂಪನಿಗೆ ದೋಖಾ ಮಾಡಿರುವ ಸುಪ್ರಿಯಾ ವಿರುದ್ಧ ಸದ್ಯ ಟಾಟಾ ಎಐಎ ಇನ್ಯೂರೆನ್ಸ್ ಕಂಪನಿಯವರು ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಮೂರು ಕೋಟಿ ಹಣದೊಂದಿಗೆ ಬೆಂಗಳೂರಿನಿಂದ ಎಸ್ಕೇಪ್ ಆಗಿರೋ ಸುಪ್ರಿಯಾಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ : ಬೇರೆ ಏರಿಯಾಗೆ ಬಂದವನ ಫಾಲೋ ಮಾಡಿದ್ದ ಹಂತಕ.. ಗುಟ್ಕಾ ಪ್ಯಾಕೆಟ್ ತೆಗೆಯುವಷ್ಟರಲ್ಲೇ ಕುತ್ತಿಗೆ ಸೀಳಿಬಿಟ್ಟ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.