ETV Bharat / state

ಬಾಯ್ ಫ್ರೆಂಡ್ ಫೋನ್‌ನಲ್ಲಿ 13 ಸಾವಿರ ನಗ್ನ ಫೋಟೋಗಳು.. ಪೊಲೀಸ್ ಠಾಣೆ ಮೆಟ್ಟಿಲೇರಿದ‌ ಯುವತಿ - ಸೈಬರ್ ಕ್ರೈಂ

ಪ್ರಿಯತಮನ ಫೋನ್​ನಲ್ಲಿ ತನ್ನ ಹಾಗೂ ವಿವಿಧ ಮಹಿಳೆಯರ 13 ಸಾವಿರಕ್ಕೂ ಹೆಚ್ಚಿನ ನಗ್ನ ಫೋಟೋಗಳನ್ನು ಕಂಡು ಯುವತಿಯೊಬ್ಬರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ವರದಿಯಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By ETV Bharat Karnataka Team

Published : Nov 29, 2023, 8:57 PM IST

Updated : Nov 29, 2023, 9:22 PM IST

ಬೆಂಗಳೂರು: ಬಾಯ್​ಫ್ರೆಂಡ್ ಫೋನ್‌ನಲ್ಲಿ ತನ್ನ ಹಾಗೂ ತನ್ನ ಸಹೋದ್ಯೋಗಿಯೊಬ್ಬರು ಸೇರಿದಂತೆ ವಿವಿಧ ಮಹಿಳೆಯರ 13 ಸಾವಿರ ನಗ್ನ ಫೋಟೋಗಳನ್ನು ಕಂಡ ಯುವತಿಯೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 22 ವರ್ಷದ ಯುವತಿ ಅಚಾನಕ್ಕಾಗಿ ತನ್ನ ಪ್ರಿಯತಮನ ಫೋನ್ ಗ್ಯಾಲರಿಯನ್ನು ತೆರೆದಾಗ ಆಘಾತಕ್ಕೆ ಒಳಗಾಗಿದ್ದು, ಈ ಬಗ್ಗೆ ವೈಟ್ ಫೀಲ್ಡ್ ಸೈಬರ್‌ ಕ್ರೈಂ ಠಾಣೆಗೆ ದೂರು ಕೂಡಾ ನೀಡಲಾಗಿದೆ.

ಸಂತ್ರಸ್ತ ಯುವತಿಯು ಬೆಳ್ಳಂದೂರಿನಲ್ಲಿರುವ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕಳೆದ ನಾಲ್ಕು ತಿಂಗಳುಗಳಿಂದ ಯುವಕನೊಬ್ಬನೊಂದಿಗೆ ಸಂಬಂಧದಲ್ಲಿದ್ದರು. ಆತ ಸಹ ಐದು ತಿಂಗಳುಗಳಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಸಂಬಂಧದಲ್ಲಿದ್ದ ಸಂದರ್ಭದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ತಮ್ಮಿಬ್ಬರ ಕೆಲ ಆತ್ಮೀಯ ಕ್ಷಣಗಳ ವಿಡಿಯೋವನ್ನ ಸಂತ್ರಸ್ತೆ ಡಿಲೀಟ್ ಮಾಡಲು ಮುಂದಾಗಿದ್ದರು. ಪ್ರಿಯತಮನ ಫೋನ್ ಅನ್ನು ಆತನಿಗೆ ತಿಳಿಯದೇ ತೆಗೆದುಕೊಂಡು ಫೋಟೋ ಗ್ಯಾಲರಿ ತೆರೆದಿದ್ದರು.

ಈ ವೇಳೆ ತನ್ನ, ತನ್ನ ಸಹದ್ಯೋಗಿಯೊಬ್ಬಳು ಸೇರಿದಂತೆ ವಿವಿಧ ಮಹಿಳೆಯರ ಸುಮಾರು 13 ಸಾವಿರ ನಗ್ನ ಫೋಟೋಗಳು ಆತನ ಫೋನ್​​ನಲ್ಲಿ ಪತ್ತೆಯಾಗಿವೆ. ಈ ಎಲ್ಲ ಫೋಟೋಗಳನ್ನ ನೋಡಿ ವಿಚಲಿತಳಾದ ಆಕೆ ತಕ್ಷಣ ಆತನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾಳೆ. ಅಲ್ಲದೇ ತಕ್ಷಣವೇ ಕಂಪನಿಯ ಲೀಗಲ್ ಎಕ್ಸಿಕ್ಯುಟಿವ್​ಗೆ ಮಾಹಿತಿ ರವಾನಿಸಿದ್ದಾರೆ.

ಅದರನ್ವಯ‌ ನವೆಂಬರ್ 23ರಂದು‌ ಕಂಪನಿಯ ಪ್ರತಿನಿಧಿಯೊಬ್ಬರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು‌ ಬಂಧಿಸಿದ್ದಾರೆ. ಅನೇಕ ಫೋಟೋಗಳನ್ನು ಮಾರ್ಫಿಂಗ್ ಸಹ ಮಾಡಲಾಗಿದೆ ಎಂದು ಶಂಕಿಸಲಾಗಿದ್ದು, ಕೃತ್ಯಕ್ಕಾಗಿ ಕಂಪನಿಯ ಯಾವುದೇ ಡಿವೈಸ್​​ಗಳನ್ನು ಆರೋಪಿಯು ಬಳಸಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : ಸಿಲಿಕಾನ್​​​ ಸಿಟಿಯಲ್ಲಿ ಸೈಬರ್​​ ಕ್ರೈಂ ಹೆಚ್ಚಳ: ಶೀಘ್ರದಲ್ಲೇ 4 ಠಾಣೆ ಆರಂಭ?

Last Updated : Nov 29, 2023, 9:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.