ETV Bharat / state

ಹೊಸಕೋಟೆ: ಗಂಡನ ತ್ಯಜಿಸಿದ್ದ ಮಹಿಳೆ ಪ್ರಿಯಕರನೊಂದಿಗೆ ಆತ್ಮಹತ್ಯೆ - ಪ್ರಯಾಣಿಕನ ಬಂಧನ

ಗಂಡನನ್ನು ಬಿಟ್ಟು ಓಡಿ ಹೋಗಿದ್ದ ಮಹಿಳೆ ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ ಇಬ್ಬರೂ ವಾಸವಿದ್ದರು.

casual picture
ಸಾಂದರ್ಭಿಕ ಚಿತ್ರ
author img

By

Published : Feb 3, 2023, 6:07 PM IST

Updated : Feb 3, 2023, 7:43 PM IST

ಹೊಸಕೋಟೆ: ಗಂಡನನ್ನು ತ್ಯಜಿಸಿದ್ದ ಮಹಿಳೆಯೊಬ್ಬರು ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ ನಡೆದಿದೆ. ಧಾರವಾಡ ಮೂಲದ ಮಹಿಳೆ ಸುರಯ್ಯ ರಾಜು (28) ಹಾಗೂ ಮೆಹಬೂಬ್ (35) ಮೃತರೆಂದು ತಿಳಿದುಬಂದಿದೆ.

ವಿವರ: ಕಳೆದ ನಾಲ್ಕು ತಿಂಗಳ ಹಿಂದೆ ಗಂಡು ಮಕ್ಕಳನ್ನು ಬಿಟ್ಟು ಸುರಯ್ಯ ರಾಜು ಕೊಕಿಟ್ಕರ್ ಎಂಬಾಕೆ ಪ್ರಿಯಕರ ಮೆಹಬೂಬ್‌ ಜೊತೆಗೆ ಓಡಿ ಹೋಗಿದ್ದಳು. ಗಂಡನ ಮನೆಯವರು ಧಾರವಾಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಇಬ್ಬರನ್ನೂ ಠಾಣೆಗೆ ಕರೆಯಿಸಿದ್ದರು. ಪೊಲೀಸರು ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದರು.

ಈ ಸಂದರ್ಭದಲ್ಲಿ ಸೂರಯ್ಯ ರಾಜು ಕೋಕಿಟ್ಕರ್, ನಾನು ಮೆಹಬೂಬ್ ಜತೆಗಿರ್ತೇನೆ ಎಂದಿದ್ದಳು. ಹೀಗಾಗಿ ಇಬ್ಬರು ಮಕ್ಕಳೊಂದಿಗೆ ಕೊರಳೂರಿನ ಬಾಡಿಗೆ ಮನೆಯಲ್ಲಿ ಪ್ರಿಯಕರನೊಂದಿಗೆ ವಾಸವಿದ್ದಳು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಿನಕಳೆದಂತೆ ಆರ್ಥಿಕ ಸಂಕಷ್ಟ ಎದುರಿಸಲಾಗದೇ ಮನನೊಂದಿದ್ದರಂತೆ. ಅಂತಿಮವಾಗಿ ಇಬ್ಬರು ಮಕ್ಕಳನ್ನು ಹೊರಗಡೆ ಕಳುಹಿಸಿ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ವೈದೇಹಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಅಕ್ರಮ ಚಿನ್ನ ಸಾಗಣೆ: ಜೀನ್ಸ್ ಪ್ಯಾಂಟ್‌ನ ಒಳಪದರದಲ್ಲಿ ಮರೆಮಾಚಿ ಅಕ್ರಮವಾಗಿ ಚಿನ್ನ ಸಾಗಿಸಲು ಪ್ರಯತ್ನಿಸುತ್ತಿದ್ದ ಆರೋಪಿ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. 30 ಲಕ್ಷ ರೂ ಬೆಲೆ ಬಾಳುವ 525 ಗ್ರಾಂ ತೂಕದ ಚಿನ್ನವನ್ನು ಜಪ್ತಿ ಮಾಡಲಾಗಿದೆ.

ಮೊಬೈಲ್ ಹೆಚ್ಚಾಗಿ ಬಳಸಬೇಡ ಎಂದಿದ್ದಕ್ಕೆ ಬಾಲಕಿ ಆತ್ಮಹತ್ಯೆ: ಬೆಂಗಳೂರು ಈಶಾನ್ಯ ವಿಭಾಗದ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಣ್ಣೂರಿನ ರಾಗ ಅಪಾರ್ಟ್​ಮೆಂಟ್​ನಲ್ಲಿ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಮೊಬೈಲ್ ಬಳಕೆ ಕಡಿಮೆ ಮಾಡುವಂತೆ ಎಂದು ಪೋಷಕರು ಬುದ್ಧಿಮಾತು ಹೇಳಿದ್ದಕ್ಕೆ ನೊಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 13 ವರ್ಷದ ಗುರುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಾಲಕಿಯು 7ನೇ ತರಗತಿ ಓದುತ್ತಿದ್ದಳು. ಪೋಷಕರು ಓದಿನ‌ ಕಡೆ ಗಮನ ಕೊಡು, ಮೊಬೈಲ್ ಹೆಚ್ಚಾಗಿ ಬಳಸಬೇಡ ಎಂದಿದ್ದರು. ಬುದ್ಧಿಮಾತು ಹೇಳಿದ 10 ನಿಮಿಷದಲ್ಲೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬಾಗಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬಾಗಲೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂಓದಿ: ಇನ್ಸ್ಟಾಗ್ರಾಮ್​ನಲ್ಲಿ ಉದ್ಯೋಗದ ಆಸೆ ತೋರಿಸಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ; ಟೆಕ್ಕಿ ಅರೆಸ್ಟ್‌

Last Updated : Feb 3, 2023, 7:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.