ಬೆಂಗಳೂರು: ತಾನು ವಾಸವಿದ್ದ ಅಪಾರ್ಟ್ಮೆಂಟ್ನ ಕುಡಿವ ನೀರಿನ ಟ್ಯಾಂಕ್ಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಯಲಹಂಕದ ನ್ಯೂಟೌನ್ 4ನೇ ಹಂತದ ಬಳಿ ಘಟನೆ ನಡೆದಿದೆ.
ಗೌರಿ ನಾಗರಾಜ್ ಮೃತ ಮಹಿಳೆ. ಅಪಾರ್ಟ್ಮೆಂಟ್ನಲ್ಲಿ ಕಳೆದ ಕೆಲ ವರ್ಷಗಳಿಂದ ವಾಸ ಮಾಡುತ್ತಿದ್ದ ಮಹಿಳೆ ಕಳೆದ ಶುಕ್ರವಾರ ಏಕಾ ಏಕಿ ನಾಪತ್ತೆಯಾಗಿದ್ದರು. ಹೀಗಾಗಿ ಮನೆಯವರು ಯಲಹಂಕ ನ್ಯೂಟೌನ್ ಠಾಣೆಗೆ ದೂರು ನೀಡಿದ್ದರು. ಒಂದೆರಡು ದಿನ ಬಿಟ್ಟು ಮನೆಗೆ ಬರಬಹುದು ಎಂದುಕೊಂಡು ನಿನ್ನೆ ಹಾಗೂ ಇವತ್ತು ಮನೆಯವರು ಹುಡುಕಾಟ ನಡೆಸಿದ್ದಾರೆ. ಹುಡುಕಾಟ ಮಾಡುತ್ತಿದ್ದ ವೇಳೆ ಅಪಾರ್ಟ್ಮೆಂಟ್ನಲ್ಲಿರುವ ಸ್ನಾನಕ್ಕೆ ಹಾಗೂ ಕುಡಿಯುವುದಕ್ಕೆ ಬಳಕೆ ಮಾಡುವ ನೀರಿನ ಟ್ಯಾಂಕ್ನಲ್ಲಿ ಮೃತ ದೇಹ ಪತ್ತೆಯಾಗಿದೆ. ಸದ್ಯ ಪೊಲೀಸರಿಗೆ ವಿಚಾರ ತಿಳಿಸಿ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹಾಗೆ ಕೊರೊನಾ ಟೆಸ್ಟ್ಗೆ ಕೂಡ ಒಳಪಡಿಸಲಾಗಿದೆ.
ಸುಮಾರು 60 ಅಧಿಕ ಮಂದಿ ಅಪಾರ್ಟ್ಮೆಂಟ್ನಲ್ಲಿ ವಾಸ ಮಾಡುತ್ತಿದ್ದು, ಕಳೆದ 3 ದಿನಗಳಿಂದ ಎಲ್ಲರೂ ಅದೇ ನೀರನ್ನು ಬಳಕೆ ಮಾಡಿರುವ ಕಾರಣ ವಿಚಲಿತರಾಗಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬಯಲಾಗಿದ್ದು, ಯಲಹಂಕ ನ್ಯೂಟೌನ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.