ETV Bharat / state

ಪ್ರೀತಿಸಿ ಮದುವೆಯಾಗಿ 15 ವರ್ಷ ದಾಂಪತ್ಯ: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು

ಬೆಂಗಳೂರು ಉತ್ತರ ತಾಲೂಕಿನ ಸಿಂಗನಾಯಕನ ಹಳ್ಳಿಯಲ್ಲಿ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಆದರೆ ಅವರ ಪತಿ ಕೊಲೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಪೋಷಕರು ಆರೋಪ ಮಾಡಿದ್ದಾರೆ.

author img

By

Published : Oct 8, 2022, 12:55 PM IST

Woman commits suicide at Bengaluru
ಆರತಿ ನೇಣಿಗೆ ಶರಣಾದ ಮಹಿಳೆ

ಯಲಹಂಕ(ಬೆಂಗಳೂರು): ಈ ಜೋಡಿ ಪ್ರೀತಿಸಿ ಮದುವೆಯಾಗಿ 15 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಆದರೆ ಹೆಂಡತಿ ನೇಣಿಗೆ ಶರಣಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬೆಂಗಳೂರು ಉತ್ತರ ತಾಲೂಕಿನ ಸಿಂಗನಾಯಕನ ಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ. ಆರತಿ (34) ನೇಣಿಗೆ ಶರಣಾದವರು.

ಆರತಿ ಮತ್ತು ಚೇತನ್ 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಅಂತರ್ಜಾತಿ ವಿವಾಹವಾಗಿದ್ದರಿಂದ ಇಬ್ಬರು ಸಿಂಗನಾಯಕನ ಹಳ್ಳಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಇವರಿಬ್ಬರ ದಾಂಪತ್ಯಕ್ಕೆ 11 ವರ್ಷದ ಗಂಡು ಮಗು ಇದೆ. ಆದರೆ ನಿನ್ನೆ ಆರತಿ ವಾಸವಾಗಿದ್ದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

Chetan
ಚೇತನ್- ಮೃತ ಮಹಿಳೆಯ ಪತಿ

ಕೊಲೆ ಆರೋಪ: ಚೇತನ್ ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಆರೋಪ ಮಾಡಿದ್ದಾರೆ. ಚೇತನ್ ಬಂಧಿಸುವಂತೆ ಒತ್ತಾಯಿಸಿ ಮೃತದೇಹವನ್ನು ಮನೆಯಿಂದ ಹೊರಗೆ ತೆಗೆಯದಂತೆ ಪಟ್ಟು ಹಿಡಿದಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ನದಿಯಲ್ಲಿ ತೇಲಿಬಂದ 'ಗಂಗೆ'.. ಜನರಿಂದ 15 ದಿನದ ಹೆಣ್ಣು ಮಗುವಿನ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.