ಬೆಂಗಳೂರು: ಜರ್ಮನಿಯಿಂದ ಬೆಂಗಳೂರಿಗೆ ಡ್ರಗ್ಸ್ (ಎಂಡಿಎಂಎ) ಆಮದು ಮಾಡಿಕೊಂಡಿದ್ದ ಮಹಿಳೆಯನ್ನು ಮಾದಕವಸ್ತು ನಿಗ್ರಹ ದಳ (ಎನ್ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ. ಯೋಗಿತಾ ಎಂಬುವಳು ಬಂಧಿತ ಆರೋಪಿಯಾಗಿದ್ದಾಳೆ.
ಬೆಂಗಳೂರಿನಲ್ಲಿ ಆಫ್ರಿಕನ್ ಪ್ರಜೆಗಳ ಜೊತೆ ಮಾದಕ ವಸ್ತು ಧಂದೆಯಲ್ಲಿ ಸಕ್ರಿಯಳಾಗಿದ್ದ ಆರೋಪಿ, 3 ವರ್ಷದಿಂದ ರೇವ್ ಪಾರ್ಟಿಗಳಿಗೆ ಮಾದಕ ಸರಬರಾಜು ಮಾಡುತ್ತಿದ್ದಳು. ಇತ್ತೀಚೆಗೆ ಯೋಗಿತಾ ಹೆಸರಿಗೆ ಎಲೆಕ್ಟ್ರಾನಿಕ್ ಸಿಟಿ ಅಂಚೆ ಕಚೇರಿ ವಿಳಾಸಕ್ಕೆ ಬಂದಿದ್ದ ಕಾರ್ಟನ್ ಬಾಕ್ಸ್ ಪಾರ್ಸಲ್ನಲ್ಲಿದ್ದ ಸ್ಯಾಂಡ್ ವಿಚ್ ಗ್ರಿಲ್, ಅಲಂಕಾರಿಕ ಸಾಮಗ್ರಿಗಳಲ್ಲಿ ಎಂಡಿಎಂಎ ಇರುವುದನ್ನ ಎನ್ಸಿಬಿ ಅಧಿಕಾರಿಗಳು ದೃಢಪಡಿಸಿಕೊಂಡಿದ್ದರು.
ಬಳಿಕ ಕಾರ್ಯಪ್ರವೃತ್ತರಾದ ಎನ್ಸಿಬಿ ಅಧಿಕಾರಿಗಳು ಇಂದು ಪಾರ್ಸಲ್ ಸ್ವೀಕರಿಸಲು ಬಂದ ಯೋಗಿತಾಳನ್ನ ಬಂಧಿಸಿ 40 ಲಕ್ಷ ಮೌಲ್ಯದ 1 ಕೆ.ಜಿಯಷ್ಟು ಎಂಡಿಎಂಎ ಹರಳುಗಳನ್ನ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಧಿವೇಶನದ ವೇಳೆ ಸಚಿವರು, ಶಾಸಕರು, ಅಧಿಕಾರಿ ವರ್ಗ ಯಾರೂ ರಜೆ ಕೇಳುವಂತಿಲ್ಲ: ಸ್ಪೀಕರ್