ETV Bharat / state

ಪತಿ ಸಿಲುಕಿಸಲು ಆತನ ಮೊಬೈಲ್​ನಿಂದಲೇ ಪೊಲೀಸರಿಗೆ ಬಾಂಬ್​ ಬೆದರಿಕೆ ಸಂದೇಶ ಕಳಿಸಿದ ಪತ್ನಿ - ಹುಸಿ ಬಾಂಬ್ ಸ್ಪೋಟ

ಪತ್ನಿಯೊಬ್ಬಳು ತನ್ನ ಪತಿಯ ಮೇಲಿನ ಕೋಪಕ್ಕೆ ಆತನನ್ನು ಸಿಲುಕಿಸಲು ಆತನ ಮೊಬೈಲ್​ನಿಂದಲೇ ಪೊಲೀಸ್ ಹಾಗೂ ಕೇಂದ್ರ ತನಿಖಾ ತಂಡಗಳಿಗೆ ಹುಸಿ ಬಾಂಬ್ ಸ್ಫೋಟದ ಮೆಸೇಜ್ ಕಳುಹಿಸಿ ಪೊಲೀಸರ ಕೈಗೆ ಸೆರೆಯಾಗಿರುವ ಘಟನೆ ನಡೆದಿದೆ.

bomb threat
ಪತಿ ಸಿಲುಕಿಸಲು ಆತನ ಮೊಬೈಲ್​ನಿಂದಲೇ ಪೊಲೀಸರಿಗೆ ಬಾಂಬ್​ ಬೆದರಿಕೆ ಸಂದೇಶ ಕಳಿಸಿದ ಪತ್ನಿ
author img

By ETV Bharat Karnataka Team

Published : Dec 6, 2023, 2:20 PM IST

Updated : Dec 6, 2023, 6:10 PM IST

ಪತಿಯನ್ನು ಸಿಲುಕಿಸಲು ಆತನ ಮೊಬೈಲ್​ನಿಂದಲೇ ಪೊಲೀಸರಿಗೆ ಬಾಂಬ್​ ಬೆದರಿಕೆ ಸಂದೇಶ

ಆನೇಕಲ್: ಮಹಿಳೆಯೊಬ್ಬಳು ತನ್ನ ಪತಿಯ ಮೊಬೈಲ್​ನಿಂದ ಹುಸಿ ಬಾಂಬ್ ಸ್ಫೋಟದ ಮೆಸೇಜ್ ಕಳುಹಿಸಿ ಕೊನೆಗೆ ಸಿಕ್ಕಿಬಿದ್ದಿರುವ ಘಟನೆ ಆನೇಕಲ್​ನಲ್ಲಿ ನಡೆದಿದೆ.

ಪ್ರಕರಣ ಹೀಗಿದೆ: ಆನೇಕಲ್​ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಉತ್ತರ ಕರ್ನಾಟಕ ಮೂಲದ ಕಿರಣ್ ಮತ್ತು ವಿದ್ಯಾರಾಣಿ ಎಂಬ ದಂಪತಿ ವಾಸವಿದ್ದರು. ಮೊಬೈಲ್​ ಆ್ಯಪ್​ ಒಂದರ ಮೂಲಕ ವಿದ್ಯಾರಾಣಿಗೆ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರು ನಿರಂತರ ಚ್ಯಾಟಿಂಗ್ ಮಾಡುತ್ತಿದ್ದರು. ಈ ವಿಚಾರ ಕೆಲ ದಿನಗಳ ಹಿಂದೆ ಗಂಡ ಕಿರಣ್​​ಗೆ​ ಗೊತ್ತಾಗಿದೆ, ಈ ವಿಚಾರ ದಂಪತಿಗಳ ಮಧ್ಯೆ ಗಲಾಟೆಗೆ ಕಾರಣವಾಗಿತ್ತು. ಪರಿಣಾಮ ಪತ್ನಿ ವಿದ್ಯಾರಾಣಿಯ ಮೊಬೈಲ್​ನ್ನು ಕಿರಣ್​ ಒಡೆದು ಹಾಕಿದ್ದ.

ಈ ಸಂಗತಿಯನ್ನು ಬೇರೆ ನಂಬರ್ ಮೂಲಕ ವಿದ್ಯಾರಾಣಿ ತನ್ನ ಸ್ನೇಹಿತನಿಗೆ ತಿಳಿಸಿದ್ದಳು. ಬಳಿಕ ಇಬ್ಬರು ಸೇರಿ ಕಿರಣ್​ರನ್ನು ಸಿಲುಕಿಸುವ ಸಂಚು ರೂಪಿಸಿದ್ದರು. ಇದಕ್ಕಾಗಿ ವಿದ್ಯಾರಾಣಿಯ ಸ್ನೇಹಿತ ಹಾಗೂ ಆತನ ಸ್ನೇಹಿತರು ವಿದ್ಯಾರಾಣಿಗೆ ಕೆಲವು ಸಂದೇಶಗಳನ್ನು ಕಳುಹಿಸುತ್ತಿದ್ದರು. ಕಳುಹಿಸಿದ ಈ ಮೆಸೇಜ್​ಗಳನ್ನು ವಿದ್ಯಾರಾಣಿ ತನ್ನ ಗಂಡನ ಮೊಬೈಲ್​ಗೆ ಕಳುಹಿಸಿಕೊಂಡಿದ್ದಾಳೆ. ಬಳಿಕ ಆ ಮೊಬೈಲ್​ನಿಂದಲೇ 'ಡಿಸೆಂಬರ್ 5ರಂದು ಆರ್​ಡಿಎಕ್ಸ್​ ಬಾಂಬ್’ ಸ್ಫೋಟಿಸುವ ಬೆದರಿಕೆ ಮೆಸೇಜ್​ಗಳನ್ನು ಪೊಲೀಸ್ ಹಾಗೂ ಕೇಂದ್ರ ತನಿಖಾ ತಂಡಗಳಿಗೆ ಖುದ್ದು ಕಳುಹಿಸಿದ್ದಳು. ಅನಂತರ ಅವುಗಳನ್ನು ತನ್ನ ಪತಿಯ ಮೊಬೈಲ್​ನಲ್ಲಿ ಡಿಲೀಟ್ ಮಾಡಿದ್ದಳು.

ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಮೆಸೇಜ್ ಬಂದಿದ್ದ ಫೋನ್​ ನಂಬರ್​ ಮೂಲ ಹುಡುಕಿಕೊಂಡು ಹೊರಟಿದ್ದಾರೆ. ಮಾಹಿತಿ ದೊರಕಿದಂತೆ ಸೀದಾ ಕಿರಣ್ ಮನೆಗೆ ಬಂದು ಪೊಲೀಸರು ದಂಪತಿಯನ್ನು ವಿಚಾರಣೆಗೊಳಪಡಿಸಿದ್ದು, ಆಗ ಸತ್ಯ ಬಯಲಾಗಿದೆ. ಈ ಸಂಬಂಧ ಆನೇಕಲ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿದ್ಯಾರಾಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಮಾಸ್ಟರ್ ಮೈಂಡ್ ಆಕೆಯ ಸ್ನೇಹಿತನಿಗಾಗಿ ಬಲೆ ಬೀಸಿದ್ದು ವಿಚಾರಣೆ ಮುಂದುವರೆದಿದೆ.

ಇದನ್ನೂ ಓದಿ: ಪದೆ ಪದೇ ವಿಳಾಸ ಬದಲಿಸಿಕೊಂಡು 21 ವರ್ಷದಿಂದ ಎಸ್ಕೇಪ್​: ಕೊನೆಗೂ ಪೊಲೀಸರ ಬಲೆಗೆ ಬಿದ್ದ ಆರೋಪಿ

ಎಸ್​ಪಿ ಪ್ರತಿಕ್ರಿಯೆ: ''ಬೆದರಿಕೆ ಸಂದೇಶ ಪ್ರಕರಣ ಸಂಬಂಧ ಆರೋಪಿ ಮಹಿಳೆಯ ಪತಿ ಕಿರಣ್​ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರಾಣಿ ಜೊತೆ ಸಂಪರ್ಕದಲ್ಲಿದ್ದ ರಾಮ್​ ಪ್ರಸಾದ್​ ಎಂಬ ವ್ಯಕ್ತಿಯ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಹಿಳೆಯು ಆ್ಯಪ್​ ಮೂಲಕ ವ್ಯಕ್ತಿಯ ಜೊತೆ ಪರಿಚಯವಾಗಿ ಬಳಿಕ ಪರಸ್ಪರ ಚಾಟ್​ ಮಾಡುತ್ತಿದ್ದರು. ಇದು ಕಳೆದ 6 ತಿಂಗಳಿಂದಲೂ ನಡೆದಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಬಳಿಕ ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಎಲ್ಲ ವಿಚಾರದ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ'' ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

Last Updated : Dec 6, 2023, 6:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.