ಬೆಂಗಳೂರು: ಈಗಂತೂ ಸಾಮಾಜಿಕ ಜಾಲತಾಣ ಅತ್ಯಂತ ಪರಿಣಾಮಕಾರಿ ಮಾಧ್ಯಮ. ಅದರಲ್ಲಿಯೂ ಸದ್ಯ ರೀಲ್ಸ್, ಶಾರ್ಟ್ ವಿಡಿಯೋ ಮೇಕಿಂಗ್ ಅನ್ನೋದು ಆರರಿಂದ ಅರವತ್ತು ವರ್ಷ ವಯಸ್ಸಿನವರನ್ನೂ ಸೆಳೆಯುತ್ತಿದೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ವ್ಯಕ್ತಿಯನ್ನು ನಂಬಿ ಪತ್ನಿ ಮನೆಬಿಟ್ಟು ಹೋಗಿದ್ದಾಳೆಂದು ಪತಿಯೊಬ್ಬ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. 39 ವರ್ಷದ ವ್ಯಕ್ತಿಯೊಬ್ಬ ಯಶವಂತಪುರ ಠಾಣೆಗೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.
ದೂರುದಾರ ಸಿಸಿಟಿವಿ ಇನ್ಸ್ಟಾಲೇಷನ್ ವೃತ್ತಿ ಮಾಡಿಕೊಂಡಿದ್ದು 9 ವರ್ಷಗಳ ಹಿಂದೆ ಜಾರ್ಖಂಡ್ ಮೂಲದ ಯುವತಿಯೊಂದಿಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಇತ್ತೀಚೆಗೆ ಆನ್‌ಲೈನ್ ಆ್ಯಪ್ಗಳಲ್ಲಿ ಹಾಡು ಹಾಡುವುದು, ರೀಲ್ಸ್ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದ ದೂರುದಾರನ ಪತ್ನಿಗೆ ದೆಹಲಿ ಮೂಲದ ದೀಪಕ್ ಮೆಹ್ರಾ ಎಂಬಾತನ ಪರಿಚಯವಾಗಿತ್ತಂತೆ.
ನಿತ್ಯ ವಿಡಿಯೋ ಕರೆಯಲ್ಲಿ ಮಾತನಾಡುವುದು, ಇತ್ತೀಚೆಗೆ ಬೆಂಗಳೂರಿಗೆ ಬಂದು ತನ್ನ ಪತ್ನಿಯನ್ನು ಭೇಟಿಯಾಗಿರುವುದನ್ನು ಗಮನಿಸಿದ್ದ ದೂರುದಾರ ಪತ್ನಿಗೆ ಬೈದು ಬುದ್ಧಿವಾದ ಹೇಳಿದ್ದನಂತೆ. ಆದರೆ ಜನವರಿ 26ರಂದು ಸಂಜೆ ಪತಿ ಮಲಗಿದ್ದಾಗ ಇಬ್ಬರು ಮಕ್ಕಳಲ್ಲಿ ಒಬ್ಬ ಮಗನನ್ನು ಕರೆದುಕೊಂಡು ಪತ್ನಿ ಮನೆಬಿಟ್ಟು ಹೋಗಿದ್ದಾಳೆ ಮತ್ತು ಹೋಗುವಾಗ ನಮ್ಮಿಬ್ಬರ ಮೊಬೈಲ್ ಫೋನ್‌ಗಳನ್ನು ನೀರಿನಲ್ಲಿ ಎಸೆದು ಹೋಗಿದ್ದಾಳೆ ಎಂದು ಪತಿಯು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ರಾಯಚೂರು; ಕಾಲೇಜು ವಿದ್ಯಾರ್ಥಿನಿ ಶವವಾಗಿ ಪತ್ತೆ, ಪ್ರಾಚಾರ್ಯರ ಮೇಲೆ ಅತ್ಯಾಚಾರ, ಕೊಲೆ ಆರೋಪ