ETV Bharat / state

ತನ್ನೊಂದಿಗೆ ಲೈಂಗಿಕತೆಯಿಂದ ದೂರವಿದ್ದ ಪತಿ ಮತ್ತೋರ್ವನ ತೆಕ್ಕೆಯಲ್ಲಿ.. ಬೆಂಗಳೂರಲ್ಲಿ ಗಂಡನ ವಿರುದ್ಧ ಪತ್ನಿ ದೂರು

author img

By

Published : Aug 17, 2023, 7:06 AM IST

ತನ್ನ ಜೊತೆ ಲೈಂಗಿಕ ಆಸಕ್ತಿ ಹೊಂದಿರದ ಪತಿ ವಿರುದ್ಧ ಪತ್ನಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

wife-complaint-against-her-husband-in-bengaluru
ಬೆಂಗಳೂರಲ್ಲಿ ಗಂಡನ ವಿರುದ್ಧ ಪತ್ನಿ ದೂರು

ಬೆಂಗಳೂರು:‌ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ ಲೈಂಗಿಕತೆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳದ ಗಂಡನನ್ನು ಅನುಮಾನಿಸಿದ ಪತ್ನಿಗೆ ಆತನ ಮೊಬೈಲ್​​ ಪರಿಶೀಲಿಸಿದಾಗ ತನ್ನ ಪತಿ ಸಲಿಂಗಕಾಮಿ ಎಂಬುದು ಬೆಳಕಿಗೆ ಬಂದಿದೆ.‌ ಗಂಡನು ಈ ವಿಚಾರ ಬಚ್ಚಿಟ್ಟು ಮೋಸ ಮಾಡಿರುವುದಾಗಿ ಪತ್ನಿಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿ ವಿರುದ್ಧ ಪತ್ನಿ ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಯುವಕನೊಬ್ಬನ ಜೊತೆ ಮದುವೆಯಾಗಿದ್ದ ದೂರುದಾರೆಯು ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ‌ ಮಾಡುತ್ತಿದ್ದರು. ವರದಕ್ಷಿಣೆ ನೀಡಿ ಸಂಪ್ರದಾಯದಂತೆ ವಿವಾಹವಾಗಿದ್ದ ಅವರ ಜೊತೆ ಲೈಂಗಿಕ ಸಂಪರ್ಕ ಬೆಳೆಸಲು ಪತಿಯು ನಿರಾಕರಿಸುತ್ತಿದ್ದನಂತೆ. ಹಲವು ವರ್ಷಗಳು ಕಳೆದರೂ ಈ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ. ಪತಿಯ ಸಹೋದರನಿಗೆ ಮದುವೆಯಾಗಿ ಮಗುವೂ ಆಗಿದೆ. ಹೀಗಾಗಿ ತಾವೂ ಕೂಡ ಮಕ್ಕಳನ್ನು ಮಾಡಿಕೊಳ್ಳುವುದರ ಬಗ್ಗೆ ಹಲವು ಸಲ ಚರ್ಚೆ ನಡೆಸಿದರೂ ಪಲಾಯನದ ಉತ್ತರ ನೀಡುತ್ತಿದ್ದ‌ ಎಂದು ಪತ್ನಿ ದೂರಿದ್ದಾರೆ.

ಇದರಿಂದ ಗಂಡನ ವ್ಯಕ್ತಿತ್ವದ ಬಗ್ಗೆ ಅನುಮಾನಗೊಂಡ ಪತ್ನಿ, ಆತನ ಮೊಬೈಲ್​ನಲ್ಲಿರುವ ಮೇಸೆಂಜರ್ ಚೆಕ್​ ಮಾಡಿದ್ದು, ನೋಡಿದಾಕ್ಷಣ ಶಾಕ್ ಆಗಿದ್ದಾರೆ. ತಾನು ಇರಬೇಕಾದ ಜಾಗದಲ್ಲಿ ಪರ ಪುರುಷನೊಬ್ಬ ಇರುವುದನ್ನು ಕಂಡು ದಿಗ್ಬ್ರಮೆಗೊಂಡಿದ್ದಾರೆ. ಪತಿ ಹಾಗೂ ಮತ್ತೋರ್ವ ಪರಸ್ಪರ ತಬ್ಬಿಕೊಂಡಿರುವ ಹಾಗೂ ಲೈಂಗಿಕತೆಗೆ ಸಂಬಂಧಪಟ್ಟಂತಹ ಫೊಟೋಗಳನ್ನು ಮೊಬೈಲ್​ನಲ್ಲಿ ನೋಡಿ ದಂಗಾಗಿದ್ದಾರೆ.

ಈ ಬಗ್ಗೆ ಪ್ರಶ್ನೆ ಮಾಡಿದರೆ ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗಂಡ ಬೆದರಿಕೆ ಹಾಕಿದ್ದಾನೆ. ಪತಿಯ ಪೋಷಕರಿಗೆ ಹೇಳಿದರೆ ಅನುಸರಿಸಿಕೊಂಡು ಹೋಗಿ ಎಂದು ಕೈತೊಳೆದುಕೊಂಡು ಸುಮ್ಮನಾಗಿದ್ದರು. ಮಗನ ವಿಚಾರ ಗೊತ್ತಿದ್ದರೂ ವಿವಾಹ ಮಾಡಿಸಿದ್ದ ಪೋಷಕರು 160 ಗ್ರಾಂ ಚಿನ್ನಾಭರಣ ಹಾಗೂ ನಗದು ಹಣ ಪಡೆದು ಮದುವೆ ಮಾಡಿಸಿದ್ದಾರೆ. ಮಗ ಸಲಿಂಗಕಾಮಿ ಎಂಬುದನ್ನು ಬಚ್ಚಿಟ್ಟು ಮದುವೆ ಮಾಡಿಸಿದ್ದಾರೆ ಎಂದು ಆತನ ಪೋಷಕರ ವಿರುದ್ಧ ಮಹಿಳೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಪತಿ 'ಆ ವಿಷಯದಲ್ಲಿ' ಅಶಕ್ತ.. ವರದಕ್ಷಿಣೆ ಪಡೆದು ಮದುವೆ ಮಾಡಿಸಿ ವಂಚನೆ: ಮಹಿಳೆಯಿಂದ ಪೊಲೀಸರಿಗೆ ದೂರು

ಪ್ರತ್ಯೇಕ ಪ್ರಕರಣ- ಪತಿ ವಿರುದ್ಧ ಪತ್ನಿ ದೂರು: ಇಂತಹದ್ದೇ ಪ್ರಕರಣವೊಂದು ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿತ್ತು. ಮಹಿಳೆಯೊಬ್ಬರು ತನ್ನ ಪತಿಯು ದೈಹಿಕ ಸಂಬಂಧದಿಂದ ದೂರವಿದ್ದಾರೆ. ಮದುವೆಯಾಗಿ 6 ತಿಂಗಳು ಕಳೆದರೂ ತನ್ನ ದೌರ್ಬಲ್ಯ ಮುಚ್ಚಿಟ್ಟಿದ್ದರು. ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರೂ, ಆತ ಸಿದ್ಧನಿಲ್ಲ. ಹೀಗಾಗಿ ತನಗೆ ವಂಚನೆ ಆಗಿದೆ ಎಂದು ಲಖನೌದ ಕೃಷ್ಣನಗರ ಕೊತ್ವಾಲಿ ಪ್ರದೇಶದ ಮಹಿಳೆಯೊಬ್ಬರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.