ETV Bharat / state

ಆರ್.ಆರ್.ನಗರ ಕ್ಷೇತ್ರದ ಮೇಲೆ ಇಷ್ಟೊಂದು ದ್ವೇಷವೇಕೆ?: ಬಿಜೆಪಿ ಶಾಸಕ ಮುನಿರತ್ನ

author img

By

Published : Jul 13, 2023, 6:48 AM IST

ರಾಜರಾಜೇಶ್ವರಿ ನಗರ ಕ್ಷೇತ್ರವನ್ನೇ ಗುರಿಯಾಗಿಸಿಕೊಂಡು ಏಕೆ ತನಿಖೆ ಮಾಡಲಾಗುತ್ತಿದೆ?. ಇಡೀ ಬೆಂಗಳೂರಲ್ಲಿ ಏಕೆ ತನಿಖೆ ಮಾಡುತ್ತಿಲ್ಲ?. ಒಂದು ಕ್ಷೇತ್ರದ ಮೇಲೆ ಯಾಕೆ ಇಷ್ಟೊಂದು ದ್ವೇಷ ಎಂದು ಬುಧವಾರ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಸರ್ಕಾರವನ್ನು ಪ್ರಶ್ನಿಸಿದರು.

munirathna
ಮುನಿರತ್ನ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರವನ್ನೇ ಗುರಿಯಾಗಿಸಿ ಏಕೆ ತನಿಖೆ ಮಾಡಲಾಗುತ್ತಿದೆ. ಒಂದೇ ಒಂದು ಕ್ಷೇತ್ರದ ಮೇಲೆ ಇಷ್ಟೊಂದು ದ್ವೇಷವೇಕೆ ಎಂದು ಮುನಿರತ್ನ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ, "ಆರ್.ಆರ್.ನಗರ ಕ್ಷೇತ್ರದಲ್ಲಿ ಅಮಾನತು ಮಾಡುವ ಕಾರ್ಯಕ್ರಮ ಶುರುವಾಗಿದೆ. ಜೂನ್ 5ರಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜೂ.14ರಲ್ಲಿ ಎಂಟು ಅಧಿಕಾರಿಗಳನ್ನು,‌ ಜು.1ರಲ್ಲಿ ಇಬ್ಬರನ್ನು ಮತ್ತೆ ಜು.7ಕ್ಕೆ ಇಬ್ಬರನ್ನು ಅಮಾನತುಗೊಂಡಿದ್ದಾರೆ. ಇದರ ಜೊತೆಗೆ ಮೂವರನ್ನು ಅಮಾನತು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಸುಮಾರು 118 ಕೋಟಿ ರೂ ಅವ್ಯವಹಾರವಾಗಿದೆ ಎಂದು ಆರೋಪಿಸಲಾಗಿದೆ. ಒಂದು ಕ್ಷೇತ್ರದಲ್ಲಿ 118 ಕೋಟಿ ರೂ. ಅಕ್ರಮ ಆಗಿದ್ದರೆ, ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಸುಮಾರು 3,000 ಕೋಟಿ ರೂ. ಅವ್ಯವಹಾರ ಆಗಿರಬೇಕಲ್ಲವೇ?. ಒಂದು ಕ್ಷೇತ್ರದಲ್ಲಿ 15 ಅಧಿಕಾರಿಗಳನ್ನು ಅಮಾನತು ಮಾಡಿದ್ದರೆ, 28 ಕ್ಷೇತ್ರಗಳಲ್ಲಿ 400 ಮಂದಿ ಅಧಿಕಾರಿಗಳು ಅಮಾನತಾಗಬೇಕು ಎಂದರು.

ಈ ಅಕ್ರಮ ನಡೆದಿರುವುದು 2019-20ರಲ್ಲಿ. ಆಗ ನಮ್ಮ ಸರ್ಕಾರವೇ ಇತ್ತು. ರಕ್ಷಣೆ ಮಾಡುವುದಾದರೆ ಆಗಲೇ ಮಾಡಬಹುದಿತ್ತಲ್ಲ?. ನಾವು ಆ ಕೆಲಸ ಮಾಡಿಲ್ಲ. ಪ್ರಕರಣದಲ್ಲಿ ರಾಜಕಾರಣಿಗಳು ಶಾಮೀಲಾಗಿದ್ದಾರೆಂದು ಉತ್ತರ ನೀಡಲಾಗಿದೆ. ಯಾರು ಆ ರಾಜಕಾರಣಿ ಅಂತ ಹೇಳಿಲ್ಲ. ಅದನ್ನು ಹೇಳಬೇಕಲ್ವಾ?. ಆ ಸಂದರ್ಭದಲ್ಲಿ ನಾನು ಶಾಸಕನೇ ಅಲ್ಲ. ಮತ್ತೆ ಇನ್ಯಾವ ರಾಜಕಾರಣಿ?. ಡಿಸಿಎಂ ಇರುವ ಸಂದರ್ಭದಲ್ಲೇ ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

'ಅಧಿಕಾರಿಗಳ ಪರ ವಹಿಸಿ ಮಾತನಾಡಬೇಡಿ' : ಡಿಸಿಎಂ ಡಿಕೆಶಿ ಪರವಾಗಿ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, "ಕಾಮಗಾರಿ ಆಗದೆ ಬಿಲ್ ಮಾಡಲಾಗಿದೆ ಎಂದು ಲೋಕಾಯುಕ್ತದಲ್ಲಿ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಯುತ್ತಿದೆ. ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲೂ ತನಿಖೆ ಆಗುತ್ತಿದೆ. 150 ಕೋಟಿ ರೂ. ಹೆಚ್ಚುವರಿ ಕಾಮಗಾರಿ ಮಾಡದೇ ಬಿಲ್ ಮಾಡಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಸಂದರ್ಭ ಸಾಕ್ಷಿ ನಾಶ, ಬೇರೆ ದಾಖಲೆಗಳನ್ನು ಸೃಷ್ಟಿ ಮಾಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇದರಲ್ಲಿ ಯಾವುದೇ ರೀತಿಯ ದ್ವೇಷದ ರಾಜಕಾರಣ ನಡೆಯುತ್ತಿಲ್ಲ ಎಂದು ತಿಳಿಸಿದರು.

ಸರ್ಕಾರ ಚರ್ಚೆಗೆ ಸಿದ್ಧವಿದೆ. ಲೋಕಾಯುಕ್ತದಲ್ಲಿ ದೂರು ಇದೆ. ಅದಕ್ಕೆ ಅನುಗುಣವಾಗಿ ತನಿಖೆ ನಡೆಯುತ್ತಿದೆ.‌ ಏನೂ ಆಗಿಲ್ಲಾಂದ್ರೆ ಭಯವೇಕೆ?. ತನಿಖೆ ನಡೆಯಲಿ. ಇದು ಕೇವಲ ಆರ್.ಆರ್. ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಶಾಸಕರೇ ದೂರು ಕೊಡಲಿ ಆಗಲೂ ಅಧಿಕಾರಿಗಳನ್ನು ಅಮಾನತು ಮಾಡುತ್ತೇವೆ. ನೀವು ಅಧಿಕಾರಿಗಳ ಪರವಾಗಿ ಏಕೆ ಅಷ್ಟು ಮಾತನಾಡುತ್ತೀರಾ. ಜನರ ಪರವಾಗಿ ಮಾತನಾಡಿ. ಯಾರು ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸಲಿ ಎಂದರು.

ಇದನ್ನೂ ಓದಿ : ಅನುದಾನಿತ ಶಾಲೆಗಳ ಫಲಿತಾಂಶ ಇಳಿಕೆ ಗಂಭೀರವಾಗಿ ಪರಿಗಣನೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಇದಕ್ಕೆ ಪ್ರತಿಕ್ರಿಯಿಸಿದ ಮುನಿರತ್ನ, ನಾನು ಅಧಿಕಾರಿಗಳನ್ನು ಅಮಾನತು ಮಾಡಿರುವ ಬಗ್ಗೆ ಹೇಳುತ್ತಿಲ್ಲ. ಅಕ್ರಮಗಳು ಒಂದೇ ಕ್ಷೇತ್ರದಲ್ಲಿ ಆಗುತ್ತಿದೆಯೇ?. ನಾನು ಯಾರನ್ನೂ ರಕ್ಷಣೆ ಮಾಡಿ ಅಂತ ಕೇಳುತ್ತಿಲ್ಲ.‌ ಇಡೀ ಬೆಂಗಳೂರಲ್ಲಿ ಏಕೆ ತನಿಖೆ ಮಾಡುತ್ತಿಲ್ಲ. ಎಲ್ಲರಿಗೂ ಏಕೆ ಅನ್ವಯಿಸಲ್ಲ. ಇದರ ದೂರುದಾರ ಬೇರೆ ಯಾರೂ ಅಲ್ಲ ಆ ಕ್ಷೇತ್ರದ ವ್ಯಾಪ್ತಿಗೆ ಬರುವ ಸಂಸದರು. ಡಿಸಿಎಂ ಇದ್ದಿದ್ದರೆ ಅರ್ಧ ಗಂಟೆ ಅಲ್ಲ ಎರಡು ಗಂಟೆ ಚರ್ಚೆಗೆ ಸಿದ್ಧ ಎನ್ನುತ್ತಿದ್ದರು. ನನ್ನಂಥ ನೂರು ಜನ ನಿಂತರೂ ಅವರಿಗೆ ಉತ್ತರ ಹೇಳುವ ಶಕ್ತಿ ಇದೆ. ಅರ್ಧ ತಾಸು ಚರ್ಚೆಗೆ ಅವಕಾಶ ಮಾಡಿ ಕೊಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಇದಕ್ಕೆ ಮಾಜಿ ಸಚಿವ ಅಶ್ವತ್ಥ ನಾರಾಯಣ್ ಕೂಡ ಧ್ವನಿಗೂಡಿಸಿ ಮತ್ತೆ ಅರ್ಧ ತಾಸಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಮತ್ತೊಂದು ಅರ್ಜಿ ಕೊಡಿ ಚರ್ಚೆಗೆ ಅವಕಾಶ ಮಾಡಿ ಕೊಡುತ್ತೇನೆ ಎಂದು ಸ್ಪೀಕರ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.