ETV Bharat / state

ನಿಯಂತ್ರಣಕ್ಕೆ ಸಿಗದ ಸಿಮೆಂಟ್​​-ಕಬ್ಬಿಣ ದರ... ಸರ್ಕಾರದ ಮಧ್ಯಪ್ರವೇಶ ಅತ್ಯಗತ್ಯ

ಕಚ್ಚಾ ವಸ್ತುಗಳ ಪೂರೈಕೆ ಕೊರತೆ ಹಾಗೂ ಕಬ್ಬಿಣದ ಹೆಚ್ಚಿನ ರಫ್ತಿನ ಕಾರಣಕ್ಕೆ ಸಿಮೆಂಟ್ ಹಾಗೂ ಉಕ್ಕಿನ ಬೆಲೆ ಗಗನಕ್ಕೆ ಏರಿದೆ. ಇದೆಲ್ಲಕ್ಕೂ ಸರ್ಕಾರಗಳು ವಿವೇಚನೆಯಿಂದ ನಿರ್ಧಾರ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕೆಂಬುದು ಬಿಲ್ಡರ್​ಗಳು ಹಾಗೂ ಜನಸಾಮಾನ್ಯರ ಆಶಯವಾಗಿದೆ.

why has the price of the steel increased
ಸಿಮೆಂಟ್​​-ಕಬ್ಬಿಣ ದರ ಏರಿಕೆ
author img

By

Published : Dec 25, 2020, 5:39 PM IST

ಬೆಂಗಳೂರು: ಮಹಾಮಾರಿ ಕೊರೊನಾ ಕಾರಣಕ್ಕೆ ಮಕಾಡೆ ಮಲಗಿರುವ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಳ್ಳುವ ಮುನ್ನವೇ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಕಟ್ಟಡ ನಿರ್ಮಾಣ ವಲಯದಲ್ಲಿ ತುಸು ಚೇತರಿಕೆ ಕಾಣುತ್ತಿದ್ದಂತೆ ಕಬ್ಬಿಣ ಮತ್ತು ಸಿಮೆಂಟ್ ದರ ಹೆಚ್ಚಳವಾಗಿದ್ದು, ಬಿಲ್ಡರ್​ಗಳನ್ನು ಸಂಕಷ್ಟಕ್ಕೆ ದೂಡಿದೆ.

ಲಾಕ್​ಡೌನ್ ಸಡಿಲಿಕೆಯಾದ್ಮೇಲೆ ಇನ್ನಾದರೂ ಎಲ್ಲಾ ವಲಯಗಳು ತುಸು ಚೇತರಿಕೆ ಕಾಣಬಹುದು ಎಂಬ ನಿರೀಕ್ಷೆ ಇತ್ತು. ಸ್ತಬ್ಧವಾಗಿದ್ದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಜನರು ಬಯಸುತ್ತಿದ್ದರು. ಆದರೆ, ಇದೆಲ್ಲಕ್ಕೂ ಕೇಂದ್ರ ಸರ್ಕಾರ ದೊಡ್ಡ ಪೆಟ್ಟು ನೀಡಿದೆ. ಸಿಮೆಂಟ್ ಹಾಗೂ ಕಬ್ಬಿಣದ ದರದಲ್ಲಿ ಏರಿಕೆ ಮಾಡಿ ಕಟ್ಟಡದ ಕನಸು ಕಾಣುತ್ತಿದ್ದವರ ಆಸೆಗೆ ತಣ್ಣೀರು ಎರಚಿದೆ.

ಇದನ್ನೂ ಓದಿ...4 ವರ್ಷಗಳಲ್ಲಿ 70 ಸಾವಿರ ಸೂಪರ್​ ಕ್ಯಾರಿ ವಾಹನ ಮಾರಿದ ಮಾರುತಿ ಸುಜುಕಿ

ಕೊರೊನಾದಿಂದ ಕಬ್ಬಿಣ ಹಾಗೂ ಸಿಮೆಂಟ್​​ಗೆ ಅಗತ್ಯವಿರೋ ಕಚ್ಚಾ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದಾಗಿ ಅಗತ್ಯಕ್ಕೆ ತಕ್ಕಷ್ಟು ಸಿಮೆಂಟ್, ಕಬ್ಬಿಣ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಭಾರತಕ್ಕಿಂತ ಅತಿ ಹೆಚ್ಚು ಚೀನಾದಿಂದಲೇ ಈ ಮೊದಲು ಹೊರ ದೇಶಗಳಿಗೆ ಸಿಮೆಂಟ್ ಹಾಗೂ ಕಬ್ಬಿಣ ರಫ್ತಾಗುತ್ತಿತ್ತು. ಈಗ ಹಲವಾರು ದೇಶಗಳು ಭಾರತದಿಂದ ಕಬ್ಬಿಣ, ಸಿಮೆಂಟ್ ಆಮದು ಮಾಡಿಕೊಳ್ಳುತ್ತಿವೆ. ಇದರಿಂದ ಬೆಲೆ ಏರಿಕೆಯಾಗಿದೆ ಅನ್ನೋದು ಸಿಮೆಂಟ್ ವ್ಯಾಪಾರಿಗಳು ಹೇಳೋ ಮಾತು.

ಬಿಲ್ಡರ್​ಗಳೂ ಸಂಕಷ್ಟಕ್ಕೆ ಸಿಲುಕಿದ್ದು, ಕಟ್ಟಡಗಳ ನಿರ್ಮಾಣಕ್ಕೆ ಮೊದಲೇ ಅರ್ಧ ಹಣವನ್ನು ಗ್ರಾಹಕರಿಂದ ಪಡೆದುಕೊಂಡಿರ್ತಾರೆ. ಅಪಾರ್ಟ್​​ಮೆಂಟ್​ಗಳ ದರವನ್ನೂ ಈ ಮೊದಲೇ ಫಿಕ್ಸ್ ಮಾಡಿರ್ತಾರೆ. ಆದರೆ ಈಗ ಸಿಮೆಂಟ್ ಹಾಗೂ ಕಬ್ಬಿಣದ ದರ ಹೆಚ್ಚಳವಾಗಿರುವುದರಿಂದ ಅವರಿಗೂ ಸಂಕಷ್ಟ ಎದುರಾಗಿದೆ. ಸಿಮೆಂಟ್ ಹಾಗೂ ಉಕ್ಕು ದರ ಏರಿಕೆಯಿಂದ ಸರ್ಕಾರದ ಕಾಮಗಾರಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಭಿಪ್ರಾಯವಾಗಿದೆ.

ಸಿಮೆಂಟ್​​-ಕಬ್ಬಿಣ ದರ ಏರಿಕೆ

ಇನ್ನು ಉಕ್ಕು ಉತ್ಪಾದನೆಗೆ ಸಂಬಂಧಿಸಿರುವಂತೆ 2020ರ ಆರ್ಥಿಕ ವರ್ಷದಲ್ಲಿ 37.69 ಟನ್​​ ಕಬ್ಬಿಣ ರಫ್ತು ನಡೆದಿದೆ. ಅದರಲ್ಲಿ ಶೇ. 80ರಷ್ಟು ಕಬ್ಬಿಣ ನೆರೆಯ ಚೀನಾಗೆ ರವಾನೆಯಾಗಿದೆ. ಹೀಗಾಗಿ ಉಕ್ಕಿನ ಬೆಲೆ ಜಾಸ್ತಿ ಆಗಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಮಧ್ಯಪ್ರವೇಶ ಮಾಡಿ, ಕಬ್ಬಿಣದ ಕಚ್ಚಾ ವಸ್ತುಗಳ ಆಮದು ಹಾಗೂ ರಫ್ತಿಗೆ ಒತ್ತಡ ಹಾಕಬೇಕು ಅನ್ನೋದು ಕ್ರೇಡಾಯಿ ಅಧ್ಯಕ್ಷರ ಒತ್ತಾಯವಾಗಿದೆ.

ಒಡಿಶಾದಲ್ಲಿರುವ ಕೆಲವು ಗಣಿ ಕಂಪನಿಗಳು ಇನ್ನೂ ಕೆಲಸ ಮಾಡದಿರೋದೇ ಕಬ್ಬಿಣದ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗ್ತಿದೆ. ಒಟ್ಟಿನಲ್ಲಿ ಕಚ್ಚಾ ವಸ್ತುಗಳ ಪೂರೈಕೆ ಕೊರತೆ ಹಾಗೂ ಕಬ್ಬಿಣದ ಹೆಚ್ಚಿನ ರಫ್ತಿನ ಕಾರಣಕ್ಕೆ ಸಿಮೆಂಟ್ ಹಾಗೂ ಉಕ್ಕಿನ ಬೆಲೆ ಗಗನಕ್ಕೆ ಏರಿದೆ. ಇದೆಲ್ಲಕ್ಕೂ ಸರ್ಕಾರಗಳು ವಿವೇಚನೆಯಿಂದ ನಿರ್ಧಾರ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕೆಂಬುದು ಬಿಲ್ಡರ್​ಗಳು ಹಾಗೂ ಜನಸಾಮಾನ್ಯರ ಆಶಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.