ETV Bharat / state

ಸಿಬಿಐ ದಾಳಿ ಖಂಡಿಸುವ ಕೆಪಿಸಿಸಿ ಡಿಕೆಶಿ ಅಕ್ರಮವನ್ನು ಯಾಕೆ ಖಂಡಿಸುವುದಿಲ್ಲ: ನಳೀನ್​ ಕುಮಾರ್​ ಕಟೀಲ್

ಸಿಬಿಐ ದಾಳಿಯನ್ನು ಖಂಡಿಸುವ ಕೆಪಿಸಿಸಿ ಡಿ. ಕೆ. ಶಿವಕುಮಾರ್ ಅವರ ಅಕ್ರಮಗಳನ್ನು ಯಾಕೆ ಖಂಡಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಪ್ರಶ್ನಿಸಿದ್ದಾರೆ.

Nalin Kumar Kateel
ನಳೀನ್​ ಕುಮಾರ್​ ಕಟೀಲ್
author img

By

Published : Oct 5, 2020, 5:01 PM IST

ಬೆಂಗಳೂರು: ತನಿಖಾ ಸಂಸ್ಥೆಗಳು ಸ್ವಾಯತ್ತವಾಗಿರುತ್ತವೆ ಎಂಬುದು ಲೋಕಸತ್ಯ. ಸಿಬಿಐ ದಾಳಿಯನ್ನು ಖಂಡಿಸುವ ಕೆಪಿಸಿಸಿಯು ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಅಕ್ರಮಗಳನ್ನು ಯಾಕೆ ಖಂಡಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಕಾಂಗ್ರೆಸ್​ಗೆ ಪ್ರಶ್ನಿಸಿದ್ದಾರೆ.

  • ಡಿಕೆಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಮೇಲೆ ಈಡಿ, ಐಟಿ ಸ್ವಾಯತ್ತ ಸಂಸ್ಥೆಗಳು ಈಗಾಗಲೇ ತನಿಖೆ ಮಾಡುತ್ತಿದ್ದು, ಅದು ವಿವಿಧ ಹಂತಗಳಲ್ಲಿ ವಿಚಾರಣೆಯಲ್ಲಿದೆ.

    ಹೀಗಿರುವಾಗ ಸಿಬಿಐ ತನ್ನ ಕೆಲಸ ಮಾಡುತ್ತಿದ್ದು, ಅದಕ್ಕೆ ಸಹಕಾರ ನೀಡುವ ಬದಲು ಸಿಬಿಐ ಅಧಿಕಾರಿಗಳ ವಾಹನಗಳ ಮೇಲೆ ಬೆಂಬಲಿಗರನ್ನು ಬಿಟ್ಟು ದಾಳಿ ಮಾಡಿದ್ದು ಸರಿಯಾ?

    — Nalinkumar Kateel (@nalinkateel) October 5, 2020 " class="align-text-top noRightClick twitterSection" data=" ">

ಡಿ.ಕೆ. ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಮೇಲೆ ಇಡಿ, ಐಟಿ ಸ್ವಾಯತ್ತ ಸಂಸ್ಥೆಗಳು ಈಗಾಗಲೇ ತನಿಖೆ ಮಾಡುತ್ತಿದ್ದು, ಅದು ವಿವಿಧ ಹಂತಗಳಲ್ಲಿ ವಿಚಾರಣೆಯಲ್ಲಿದೆ. ಹೀಗಿರುವಾಗ ಸಿಬಿಐ ತನ್ನ ಕೆಲಸ ಮಾಡುತ್ತಿದ್ದು, ಅದಕ್ಕೆ ಸಹಕಾರ ನೀಡುವ ಬದಲು ಸಿಬಿಐ ಅಧಿಕಾರಿಗಳ ವಾಹನಗಳ ಮೇಲೆ ಬೆಂಬಲಿಗರನ್ನು ಬಿಟ್ಟು ದಾಳಿ ಮಾಡಿದ್ದು ಸರಿಯಾ? ಇದಕ್ಕೆ ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರು ಕುಮ್ಮಕ್ಕು ನೀಡುತ್ತಿದ್ದಾರೆ, ಅವರು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆಗೆ ಬೆಂಬಲ ಇದೆಯೆಂದು ಸಾಬೀತು ಪಡಿಸಿದಂತಾಗಿದೆ. ಡಿಕೆಶಿ ಅಕ್ರಮ ಹಣ ಗಳಿಕೆಯಲ್ಲಿ ಕಾಂಗ್ರೆಸ್ ನಾಯಕರಿಗೂ ಪಾಲು ಇರುವುದನ್ನು ತೋರಿಸಿದಂತೆ ಆಗಿದೆ ಎಂದು ಕಟೀಲ್​ ಆರೋಪಿಸಿದ್ದಾರೆ.

ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವೇ? ಅಕ್ರಮಗಳ ಸರದಾರನನ್ನು ಜೈಲಿನಿಂದ ಮೆರವಣಿಗೆ ಮಾಡಿಕೊಂಡು ಬಂದು ಪಟ್ಟ ನೀಡುವಾಗಲೇ ಯೋಚಿಸಬೇಕಿತ್ತು ಎಂದು ಕಾಂಗ್ರೆಸ್​ಗೆ ನಳೀನ್​ ಕುಮಾರ್​ ಟಾಂಗ್​ ಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.