ETV Bharat / state

ಯಾರೇ ಗೆದ್ರೂ, ಸೋತ್ರೂ ಅದು ಮಂಡ್ಯ ಜನರ ತೀರ್ಮಾನ: ಚೆಲುವರಾಯಸ್ವಾಮಿ

ಸ್ನೇಹಿತರೊಬ್ಬರು ಊಟಕ್ಕೆ ಕರೆದಾಗ ಹೋಗಿದ್ದೇನೆ. ಅದಕ್ಕೆ ಅಷ್ಟೇನೂ ಮಹತ್ವ ಬೇಕಿಲ್ಲ ಎಂದು ಸುಮಲತಾ ಹಮ್ಮಿಕೊಂಡಿದ್ದರು ಎನ್ನಲಾದ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸಿರುವ ಬಗ್ಗೆ ಮಾಜಿ ಶಾಸಕ ಚೆಲುವರಾಯ ಸ್ವಾಮಿ ಸ್ಪಷ್ಠನೆ ನೀಡಿದರು.

ಡಿನ್ನರ್ ಪಾರ್ಟಿ ಬಗ್ಗೆ ಸ್ಪಷ್ಟಣೆ ನೀಡಿದ ಚಲುವರಾಯಸ್ವಾಮಿ
author img

By

Published : May 3, 2019, 9:27 PM IST

ಬೆಂಗಳೂರು: ಕಾಂಗ್ರೆಸ್‌ ಪಕ್ಷವನ್ನು ದುರುಪಯೋಗ ಮಾಡಿಕೊಳ್ಳುವ ಯಾವ ಕೆಲಸವನ್ನೂ ನಾನು ಮಾಡಿಲ್ಲ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸುಮಲತಾ ಜೊತೆ ಡಿನ್ನರ್ ಪಾರ್ಟಿಯಲ್ಲಿ ಮಂಡ್ಯ ಕಾಂಗ್ರೆಸ್‌ನ ರೆಬೆಲ್‌ ನಾಯಕರು ಭಾಗಿಯಾಗಿದ್ದಾರೆ ಎನ್ನುವ ವಿಚಾರ‌‌ವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದರು. ಡಿನ್ನರ್ ಪಾರ್ಟಿ ಬಗ್ಗೆ ಮಾಹಿತಿ ಕೇಳಿದ್ದರು, ವಾಸ್ತವ ವಿಚಾರದ ಬಗ್ಗೆ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದರು.

ನಾವೆಲ್ಲೂ ಸುಮಲತಾ ಪರ ಕೆಲಸ ‌ಮಾಡಿಲ್ಲ, ಅಂತರ ಕಾಯ್ದುಕೊಂಡಿದ್ದೇವೆ. ಮೈತ್ರಿ ಅಭ್ಯರ್ಥಿ ವಿಚಾರದಲ್ಲೂ ಮೌನವಹಿಸಿದ್ದು ಬಿಟ್ಟರೆ ಅಪಪ್ರಚಾರ ಮಾಡಿಲ್ಲ. ಯಾರೇ ಗೆದ್ದರೂ, ಸೋತರೂ ಅದು ಮಂಡ್ಯ ಜನರ ತೀರ್ಮಾನವಾಗಿರುತ್ತದೆ ಎಂದು ಇದೇ ವೇಳೆ ಅವರು ಹೇಳಿದರು.

ಡಿನ್ನರ್ ಪಾರ್ಟಿ ಬಗ್ಗೆ ಸ್ಪಷ್ಟಣೆ ನೀಡಿದ ಚೆಲುವರಾಯಸ್ವಾಮಿ

ಜೆಡಿಎಸ್ ಶಾಸಕ ಸುರೇಶ್ ಗೌಡ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು 25 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಯಾರ ವಿರುದ್ಧವೂ ಕ್ಷುಲಕವಾಗಿ ಮಾತನಾಡಿಲ್ಲ. ನಾಗಮಂಗಲ ಕ್ಷೇತ್ರದಲ್ಲಿ ಸೋತಿದ್ದೇವೆ, ಗೆದ್ದಿದ್ದೇವೆ, ಅದ್ರೆ ಎಂದೂ ಆ ರೀತಿ ಒಬ್ಬರ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡಿಲ್ಲ. ಅವರು ಮಾತನಾಡಿಕೊಳ್ಳಲಿ ಎಂದು ಸೂಚ್ಯವಾಗಿ ತಿಳಿಸಿದರು.

Intro:CheluvarayaswamyBody:KN_BNG_01_03_CHELUVARAYASWAMY_BYTE_SCRIPT_VENKAT_7201951

ಯಾರೇ ಗೆದ್ರು, ಸೋತ್ರೂ ಅದು ಮಂಡ್ಯ ಜನರ ತೀರ್ಮಾನ ಆಗಿರುತ್ತೆ ಅಷ್ಟೇ: ಚಲುವರಾಯಸ್ವಾಮಿ

ಬೆಂಗಳೂರು: ಕಾಂಗ್ರೆಸ್ ನ್ನು ದುರುಪಯೋಗ ಪಡಿಸಿಕೊಳ್ಳುವ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮಂಡ್ಯ ರೆಬೆಲ್ಸ್ ನಾಯಕರಿಂದ ಸುಮಲತಾ ಜತೆ ಡಿನ್ನರ್ ವಿಚಾರ‌‌ವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಡಿನ್ನರ್ ಪಾರ್ಟಿ ಬಗ್ಗೆ ಮಾಹಿತಿ ಕೇಳಿದ್ದರು. ವಾಸ್ತವ ವಿಚಾರದ ಬಗ್ಗೆ ಅಧ್ಯಕ್ಷರಿಗೆ ತಿಳಿಸಿದ್ದೇನೆ. ನಾವೆಲ್ಲರೂ ಈ ಚುನಾವಣೆಯಲ್ಲಿ ಯಾರಿಗೂ ಬೆಂಬಲ ನೀಡಿರಲಿಲ್ಲ. ಈ ಚುನಾವಣೆ ಮಂಡ್ಯ ಜನತೆಗೆ ಬಿಟ್ಟಿದ್ದು. ಮೈಸೂರು, ಮಂಡ್ಯ ಚುನಾವಣೆ ಬೇರೆ ಜಿಲ್ಲೆ ರೀತಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ನಾವು ಸುಮಲತಾ ಪರ ಕೆಲಸ ‌ಮಾಡಿಲ್ಲ. ಅಂತರ ಕಾಯ್ದುಕೊಂಡಿದ್ದೇವೆ. ಮೈತ್ರಿ ಅಭ್ಯರ್ಥಿ ವಿಚಾರದಲ್ಲೂ ಮೌನವಹಿಸಿದ್ವಿ ಬಿಟ್ರೆ ನಾವೆಲ್ಲೂ ಅಪಪ್ರಚಾರ ಮಾಡಿಲ್ಲ. ಯಾರೇ ಗೆದ್ರು ಸೋತ್ರೂ ಮಂಡ್ಯ ಜನರ ತೀರ್ಮಾನ ಆಗಿರುತ್ತೆ ಅಷ್ಟೇ. ಒಬ್ಬ ಸ್ನೇಹಿತರು ಊಟಕ್ಕೆ ಕರೆದಾಗ ಹೋಗಿದ್ದೇನೆ. ಅದಕ್ಕೆ ಅಷ್ಟೇನು ಮಹತ್ವ ಇಲ್ಲ ಎಂದು ತಿಳಿಸಿದರು.

ನಾವು ಯಾರನ್ನೂ ಸೋಲಿಸುವ, ಗೆಲ್ಲಿಸುವ ಶಕ್ತಿ ಹೊಂದಿಲ್ಲ. ನಾವೇ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ. ಬೇರೆಯವರನ್ನು ಗೆಲ್ಲಿಸಲು ಹೇಗೆ ಸಾಧ್ಯ?. ಜನರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ವಿಡಿಯೋ ರಿಲೀಸ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಅಧ್ಯಕ್ಷರ ಜತೆ ಚರ್ಚೆ ಆಗಿದೆ. ಏನು ಮಾಹಿತಿ ಹೇಳಬೇಕೋ ಅದನ್ನ ಅವರಿಗೆ ತಿಳಿಸಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ. ಏನು ಮಾಡಬೇಕು ಅನ್ನೋದು ಅವರೇ ತೀರ್ಮಾನ ಮಾಡ್ತಾರೆ. ಈಗ್ಯಾಕೆ ವಿಡಿಯೋ ಬಿಡುಗಡೆ ಆಗಿದೆ ಅನ್ನೋದು ಗೊತ್ತಿಲ್ಲ. ಪೊಲೀಸರಿಗೆ ಯಾರು ಒತ್ತಡ ಹಾಕಿದ್ರೋ,ಪೊಲೀಸರು ಹೋಟೆಲ್ ಅವರ ಮೇಲೆ ಏನು ಒತ್ತಡ ಹಾಕಿದ್ರೋ ಅನ್ನೋದು ಗೊತ್ತಿಲ್ಲ. ಅದರಲ್ಲಿ ಊಟ ಮಾಡಿರುವುದಕ್ಕೆ ಇಷ್ಟೇಕೆ ಮಹತ್ವ ಬಂತು ಅನ್ನೋದು ತಿಳಿಯುತ್ತಿಲ್ಲ ಎಂದು ವಿವರಿಸಿದರು.

ಚುನಾವಣೆ ಗೂ ಮೊದಲೇ ಇಂತಹ ವಿಡಿಯೋ ಬಿಡುಗಡೆ ಮಾಡಿದ್ರೆ ಚುನಾವಣೆ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಇದೇ ವೇಳೆ‌ ತಿಳಿಸಿದರು.

ಜೆಡಿಎಸ್ ಶಾಸಕ ಸುರೇಶ್ ಗೌಡ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ೨೫ ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಯಾರ ವಿರುದ್ಧವೂ ನಾನು ಕ್ಷುಲಕವಾಗಿ ಮಾತನಾಡಲ್ಲ. ನಾಗಮಂಗಲ ಕ್ಷೇತ್ರದಲ್ಲಿ ಸೋತಿದ್ದೇವೆ, ಗೆದ್ದಿದ್ದೇವೆ. ನಾನು ಎಂದೂ ಆ ರೀತಿ ಒಬ್ಬರ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡಿಲ್ಲ. ಅವರು ಮಾತನಾಡಿಕೊಳ್ಳಲಿ ಎಂದು ಸೂಚ್ಯವಾಗಿ ತಿಳಿಸಿದರು.Conclusion:Venkat
ETV Bharat Logo

Copyright © 2024 Ushodaya Enterprises Pvt. Ltd., All Rights Reserved.