ETV Bharat / state

ಪರಿಷತ್ ಕದನ: ಸವದಿ, ಲೆಹರ್ ಸಿಂಗ್​ಗೆ ಟಿಕೆಟ್ ಡೌಟ್: ನಾಲ್ಕು ಸ್ಥಾನಕ್ಕೆ ನಡೆಯುತ್ತಾ ಅಚ್ಚರಿ ಆಯ್ಕೆ? - ಕರ್ನಾಟಕ ವಿಧಾನ ಪರಿಷತ್ ಚುನಾವಣೆ

ವಿಧಾನಸಭೆಯಿಂದ ವಿಧಾನ ಪರಿಷತ್​ನ ಏಳು ಸ್ಥಾನಗಳಿಗೆ ನಡೆದಿದ್ದ ದ್ವೈವಾರ್ಷಿಕ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಸದಸ್ಯರ ಅವಧಿ ಜೂನ್ 14ಕ್ಕೆ ಮುಕ್ತಾಯಗೊಳ್ಳಲಿದ್ದು ಆ ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ ನಿಗದಿಯಾಗಿದೆ.

who-will-get-council-election-ticket-in-bjp
ಪರಿಷತ್ ಕದನ: ಸವದಿ, ಲಹರ್ ಸಿಂಗ್​ಗೆ ಟಿಕೆಟ್ ಡೌಟ್: ನಾಲ್ಕು ಸ್ಥಾನಕ್ಕೆ ನಡೆಯುತ್ತಾ ಅಚ್ಚರಿ ಆಯ್ಕೆ
author img

By

Published : May 11, 2022, 10:58 PM IST

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಏಳು ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿಗೆ ನಾಲ್ಕು ಸ್ಥಾನಗಳು ಅನಾಯಾಸವಾಗಿ ಸಿಗಲಿದ್ದು, ಈ ಬಾರಿಯೂ ಅಚ್ಚರಿ ಆಯ್ಕೆ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇಬ್ಬರು ಮುಖಂಡರಿಗೆ, ಮತ್ತಿಬ್ಬರು ಕಾರ್ಯಕರ್ತರಿಗೆ ಟಿಕೆಟ್ ನೀಡಬಹುದು ಎನ್ನಲಾಗುತ್ತಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್​ನ ಏಳು ಸ್ಥಾನಗಳಿಗೆ ನಡೆದಿದ್ದ ದ್ವೈವಾರ್ಷಿಕ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಸದಸ್ಯರ ಅವದಿ ಜೂನ್ 14ಕ್ಕೆ ಮುಕ್ತಾಯಗೊಳ್ಳಲಿದ್ದು ಆ ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ ನಿಗದಿಯಾಗಿದೆ. ಏಳು ಸ್ಥಾನಗಳಲ್ಲಿ ಬಿಜೆಪಿಯ ಎರಡು ಸ್ಥಾನಗಳು ತೆರವಾಗುತ್ತಿದ್ದು, ಲಕ್ಷ್ಮಣ ಸವದಿ ಮತ್ತು ಲೆಹರ್ ಸಿಂಗ್ ಅವಧಿ ಪೂರ್ಣಗೊಳ್ಳುತ್ತಿದೆ. ಆದರೆ ಈ ಇಬ್ಬರು ನಾಯಕರೂ ಪುನರಾಯ್ಕೆಯ ನಿರೀಕ್ಷೆಯಲ್ಲಿಲ್ಲ.

2023ಕ್ಕೆ ನಡೆಯುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸುವ ಲೆಕ್ಕಾಚಾರದಲ್ಲಿರುವ ಸವದಿ ಈಗ ಮತ್ತೆ ಪರಿಷತ್ ಸದಸ್ವತ್ವ ಪಡೆದುಕೊಳ್ಳುವ ಆಸಕ್ತಿ ತೋರುತ್ತಿಲ್ಲ, ಮತ್ತೆ ಪರಿಷತ್ ಸದಸ್ಯರಾದಲ್ಲಿ ವಿಧಾನಸಭೆ ಟಿಕೆಟ್ ಕಷ್ಟವಾಗಬಹುದು ಎನ್ನುವುದು ಅವರ ಲೆಕ್ಕಾಚಾರವಾಗಿದೆ ಹಾಗಾಗಿ ಆಕಾಂಕ್ಷಿಗಳ ಪಟ್ಟಿಯಿಂದ ಲಕ್ಷ್ಮಣ ಸವದಿ ದೂರ ಸರಿದಿದ್ದಾರೆ. ಕಳೆದ ಬಾರಿ ಅಥಣಿ ಕ್ಷೇತ್ರದಿಂದ ಪರಾಜಿತಗೊಂಡರೂ ಪರಿಷತ್ ಸದಸ್ಯತ್ವ ನೀಡಿ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದಿದ್ದ ಮಹೇಶ್ ಕುಮಟಳ್ಳಿಗೆ ಉಪ ಚುನಾವಣಾ ಟಿಕೆಟ್‌ ನೀಡಲಾಗಿತ್ತು. ಈಗ ಮತ್ತೆ ಕುಮಟಳ್ಳಿಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಇದ್ದು, ಅಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಸವದಿ ಎಂಎಲ್​ಸಿ ಸ್ಥಾನದಿಂದ ದೂರ ಉಳಿಯುವ ಚಿಂತನೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಲೆಹರ್ ಸಿಂಗ್ ಕೂಡ ಪುನರಾಯ್ಕೆಯ ಅಪೇಕ್ಷೆ ಹೊಂದಿಲ್ಲ, ಬಜೆಟ್ ಅಧಿವೇಶನದಲ್ಲೇ ಸದನದಲ್ಲಿ ವಿದಾಯದ ಭಾಷಣ ಮಾಡಿದ್ದ ಲೆಹರ್ ಸಿಂಗ್ ಎರಡು ಬಾರಿ ಬಿಜೆಪಿ ಅವಕಾಶ ನೀಡಿದ್ದು‌, 12 ವರ್ಷ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದ್ದರು. ಮತ್ತೊಮ್ಮೆ ಅವಕಾಶ ಕೋರುವುದು ಸರಿಯಲ್ಲ, ಯುವಕರಿಗೆ, ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಾಗಾಗಿ ಅವರೂ ಕೂಡ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಿಂದ ದೂರವಿದ್ದಾರೆ.

ಇಬ್ಬರು ಹಾಲಿ ಸದಸ್ಯರು ರೇಸ್ ನಲ್ಲಿ ಇರದ ಕಾರಣ ನಾಲ್ವರು ಹೊಸಬರಿಗೆ ಬಿಜೆಪಿ ಟಿಕೆಟ್ ನೀಡಲಿದೆ. ಇದರಲ್ಲಿ ಎರಡು ಟಿಕೆಟ್ ಪಕ್ಷದ ನಾಯಕರಿಗೆ, ಮತ್ತೆರಡು ಟಿಕೆಟ್ ನಿಷ್ಠಾವಂತ ಕಾರ್ಯಕರ್ತರಿಗೆ ಅಚ್ಚರಿ ಆಯ್ಕೆಯಾಗಿ ನೀಡುವ ಚಿಂತನೆ ಇದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಕವಟಗಿಮಠ ಮೇಲೆ ಅನುಕಂಪ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಬೆಳಗಾವಿ ದ್ವಿಸದಸ್ಯ ಕ್ಷೇತ್ರದಿಂದ ಅನಾಯಾಸವಾಗಿ ಗೆಲ್ಲುವ ಅವಕಾಶವಿದ್ದರೂ ಸ್ವಪಕ್ಷೀಯರೇ ಕೈಕೊಟ್ಟ ಕಾರಣದಿಂದ ಸೋಲಿನ ರುಚಿ ನೋಡಿರುವ ಮಹಾಂತೇಶ ಕವಟಗಿಮಠ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ರಾಜ್ಯ ನಾಯಕರ ಅನುಕಂಪವೂ ಕವಟಗಿಮಠ ಅವರ ಮೇಲಿರುವ ಕಾರಣ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.‌ ಸಂಘಟನೆ ಹಿನ್ನಲೆ ಗುರುತಿಸಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರನ್ನು ಎಂಎಲ್​ಸಿ ಮಾಡಿದಂತೆ ತಮಗೂ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಎಂಎಲ್​ಸಿ ಅಶ್ವತ್ಥನಾರಾಯಣ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿ ಪಕ್ಷ ನಿಷ್ಟೆ ಮೆರೆಯುತ್ತಾ ಬಂದಿರುವ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೂಚನೆಯಂತೆ ಡಿಕೆ ಸುರೇಶ್ ವಿರುದ್ಧ ಕಣಕ್ಕಿಳಿದು ಪ್ರಬಲ ಪೈಪೋಟಿ ನೀಡಿದ್ದರು. ಅವರು ಈಗ ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಜಗದೀಶ್ ಹಿರೇಮನಿ ಟಿಕೆಟ್ ಆಕಾಂಕ್ಷಿ: ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಟಿಕೆಟ್ ಗೆ ಯತ್ನಿಸಿ ವಿಫಲರಾಗಿದ್ದ ನಾರಾಯಣಸ್ವಾಮಿ ಈಗ ಪರಿಷತ್ ಪ್ರವೇಶಕ್ಕೆ ಯತ್ನಿಸುತ್ತಿದ್ದಾರೆ. ಇವರೊಂದಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಈಗಾಗಲೇ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಸ್ಥಾನ ನೀಡಿ ನಂತರ ರಾಷ್ಟ್ರೀಯ ಆಯೋಗದ ಸದಸ್ಯ ಸ್ಥಾನ ಕಲ್ಪಿಸಿರುವುದರಿಂದ ಇವರಿಗೆ ಟಿಕೆಟ್ ಅವಕಾಶ ಕಡಿಮೆ ಎನ್ನಲಾಗುತ್ತಿದೆ.

ಈಗಾಗಲೇ ಭಾರತಿ ಶೆಟ್ಟಿ, ತೇಜಸ್ವಿನಿಗೌಡ ಪರಿಷತ್ ಸದಸ್ಯರಾಗಿದ್ದು, ಮತ್ತೊಬ್ಬರಿಗೆ ಅವಕಾಶ ನೀಡುವುದಾದರೆ ತಮಗೆ ಸಿಗಲಿ ಎನ್ನುವ ನಿರೀಕ್ಷೆಯಲ್ಲಿ ರಾಜ್ಯ ಕಾರ್ಯದರ್ಶಿ ಭಾರತಿ ಮುಗ್ದುಂ ಇದ್ದಾರೆ. ಈ ಕುರಿತು ಭಾರತಿ ಶೆಟ್ಟಿ ಮೂಲಕ ಯಡಿಯೂರಪ್ಪ ಅವರಿಂದ ಶಿಫಾರಸು ಮಾಡಿಸಲು ಹೊರಟಿದ್ದಾರೆ. ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಗಿರೀಶ್ ಪಟೇಲ್, ರಾಜ್ಯ ಉಪಾಧ್ಯಕ್ಷ ಎಂ.ಬಿ ನಂದೀಶ್ ಕೂಡ ಪರಿಷತ್ ಟಿಕೆಟ್ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ತಿಳಿಸುಬಂದಿದೆ.

ಸದ್ಯ ಪರಿಷತ್ ಟಿಕೆಟ್ ವಿಚಾರದಲ್ಲಿ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಮುಂದಿನ ವಾರ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಿ ಹೈಕಮಾಂಡ್​ಗೆ ಕಳುಹಿಸಿಕೊಡಲಾಗುತ್ತದೆ. ರಾಜ್ಯ ಸಮಿತಿ ಪಟ್ಟಿ ಕಳುಹಿಸಿದರೂ ಅಂತಿಮವಾಗಿ ಹೈಕಮಾಂಡ್ ತನ್ನದೇ ಆದ ನಿರ್ಧಾರ ಕೈಗೊಂಡು ಪಟ್ಟಿ ಪ್ರಕಟಿಸಲಿದೆ. ಈ ಹಿಂದೆ ಪರಿಷತ್, ರಾಜ್ಯಸಭೆ ಟಿಕೆಟ್ ವೇಳೆ ಅಚ್ಚರಿ ಆಯ್ಕೆ ಮಾಡಿದ್ದ ಬಿಜೆಪಿ ವರಿಷ್ಠರು ಈ ಬಾರಿಯೂ ಸರ್​ಪ್ರೈಸ್​ ಸೆಲೆಕ್ಷನ್ ಮಾಡಿದರೂ ಅಚ್ಚರಿಯಿಲ್ಲ.

ಇದನ್ನೂ ಓದಿ: ಡಿಕೆಶಿ ಹೇಳಿಕೆಗೆ ರಮ್ಯಾ ಭಿನ್ನರಾಗ; ಬಂಡೆಗೆ ಸೆಡ್ಡು ಹೊಡೆದ್ರಾ ಪದ್ಮಾವತಿ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.