ETV Bharat / state

ಲಾಕ್​​ಡೌನ್ ಮಧ್ಯೆ ಬಡವರ ಪಾಲಿಗೆ ಅನ್ನದಾತರಾದ ಕರವೇ ಯುವಪಡೆ

ಎಲ್ಲೆಡೆ ಹಬ್ಬಿರುವ ಕೊರೊನಾ ತಡೆಗೆ ಲಾಕ್​ಡೌನ್​​ ವಿಸ್ತರಣೆಯಾಗಿದೆ. ಈ ಮಧ್ಯೆ ಹಸಿವಿನಿಂದ ಬಳಲುತ್ತಿರುವ ಕೆಲವರಿಗೆ ಬೆಂಗಳೂರಲ್ಲಿ ಕೆಲವರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅಂತಹ ಸಹೃದಯಿಗಳಲ್ಲಿ ಕರವೇ ಮಲ್ಲೇಶ್ವರಂ ಘಟಕದ ಅಧ್ಯಕ್ಷ ಚೌದರಿ ಅವರು ಬಡಪಾಯಿಗಳ ಹಸಿವು ನೀಗಿಸುತ್ತಿದ್ದಾರೆ.

who will feed the food for poor ?
ಲಾಕ್​​ಡೌನ್​​: ಬಡವರ ಹಸಿವು ನೀಗಿಸೋರು ಯಾರು‌?
author img

By

Published : Apr 17, 2020, 11:09 AM IST

ಬೆಂಗಳೂರು: ಕೊರೊನಾ ಸೋಂಕು ಸಂಪೂರ್ಣವಾಗಿ ತೊಲಗಲಿ, ಜನ ಸುರಕ್ಷಿತವಾಗಿರಲಿ ಎಂದು ಕೇಂದ್ರ ಸರ್ಕಾರ ಲಾಕ್​​ಡೌನ್ ಅವಧಿಯನ್ನು ಮೇ. 3 ರವರೆಗೆ ವಿಸ್ತರಿಸಿದೆ. ಆದ್ರೆ, ಕೂಲಿ ಕಾರ್ಮಿಕರ ಹಸಿವು ನೀಗಿಸೋ ಕೆಲಸ ಮಾಡ್ತಿದ್ದಾರೆ ಮಲ್ಲೇಶ್ವರಂ ಕರವೇ ಘಟಕದ ಮುಖಂಡರು.

ಕಳೆದ ಇಪ್ಪತ್ತೊಂದು ದಿನದ ಲಾಕ್​​ಡೌನ್​​ನಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ದಾನಿಗಳು ಮುಂದೆ ಬಂದು ಆಹಾರ ಸಾಮಗ್ರಿಗಳ ಕಿಟ್ ಒದಗಿಸಿದ್ದರು. ಸರ್ಕಾರ ಉಚಿತವಾಗಿಯೇ 2 ತಿಂಗಳ ಪಡಿತರ ವಿತರಿಸುತ್ತಿದೆಯಾದರೂ, ಉತ್ತರ ಭಾರತದಿಂದ ಬಂದಿರುವ ಕಾರ್ಮಿಕರು, ಉತ್ತರ ಕರ್ನಾಟಕದ ಜನರು ಪಡಿತರ ಚೀಟಿ ಇಲ್ಲದೆ, ಕೈಗೆ ಕೆಲಸವೂ ಇಲ್ಲದೆ ನಗರದ ಹೊರವಲಯಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ.

ಲಾಕ್​​ಡೌನ್​​ ಬಡವರ ಹಸಿವು ನೀಗಿಸುತ್ತಿರುವ ಕರವೇ ಮುಖಂಡರು

ಪ್ರತಿ ದಿನ 1400 ಬಡ ಜನರಿಗೆ ಒಂದು ಹೊತ್ತಿನ ಊಟ ನೀಡುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ಮಲ್ಲೇಶ್ವರಂ ಕ್ಷೇತ್ರದ ಅಧ್ಯಕ್ಷ ಜಿ.ಎಸ್ ಚೌದರಿ ಈಟಿವಿ ಭಾರತನೊಂದಿಗೆ ಮಾತನಾಡಿ, ಇಂದಿರಾ ಕ್ಯಾಂಟೀನ್ ಆಹಾರವೂ ಎಲ್ಲಾ ಕಡೆ ಸಿಗುತ್ತಿಲ್ಲ. ರೇಷನ್ ಕೂಡಾ ಕೂಲಿ ಕಾರ್ಮಿಕರಿಗೆ ಲಭ್ಯವಾಗೋದಿಲ್ಲ. ಎಷ್ಟೋ ಕಡೆ ಕಾರ್ಪೊರೇಟರ್ ಗಳು ಕೂಡಾ ಸಹಾಯಕ್ಕೆ ಮುಂದಾಗುತ್ತಿಲ್ಲ ಎಂದು ತಿಳಿಸಿದರು. ತಮ್ಮ ತಂಡದ ಹದಿನೈದು ಜನ ಅಡುಗೆ ತಯಾರಿಸಿ ಕಳೆದ ಕಳೆದ 21 ದಿನದಿಂದಲೂ ಅಬ್ಬಿಗೆರೆಯ 600 ಜನಕ್ಕೆ, ಪೀಣ್ಯಾ ಇಂಡಸ್ಟ್ರಿಯಲ್ ಏರಿಯಾದಲ್ಲಿ 160 ಜನರಿಗೆ, ನೆಲಗೆದ್ದನಹಳ್ಳಿಯ 500 ಜನ, ಸುವರ್ಣ ನಗರ, ಶಿವಪುರಂಗಳಲ್ಲಿ ಆಹಾರ ಹಂಚುತ್ತಿದ್ದೇವೆ. ಇಷ್ಟು ಕೊಟ್ಟರೂ ಅನೇಕರಿಗೆ ಇನ್ನೂ ಊಟ ಸಿಗುತ್ತಿಲ್ಲ. ಪ್ರತಿದಿನ ಹೆಚ್ಚು ಅಡುಗೆ ತಯಾರಿಸುತ್ತಲೇ ಇದ್ದೇವೆ, ಸಹಾಯವಾಣಿಯಿಂದ ಬಂದ ಕರೆಗೆ ಸ್ಪಂದಿಸಿ ಆಹಾರ ಹಂಚುತ್ತಿದ್ದೇವೆ ಎಂದು ತಿಳಿಸಿದರು.

ಈಗಾಗಲೇ ಊಟ, ರೇಷನ್ ಕಿಟ್ ನೀಡುತ್ತಿದ್ದ ನಮ್ಮ ಬೆಂಗಳೂರು ಫೌಂಡೇಶನ್, ತಯಾರಿಸಿದ ಆಹಾರ ಕೊಡುವುದು ಕಡಿಮೆ ಆಗಬಹುದು. ಆದ್ರೆ ಸ್ಲಂ ಗಳಲ್ಲಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವುದು ಮುಂದುವರಿಯುತ್ತದೆ ಎಂದು ಸಂಸ್ಥೆಯವರಾದ ಹರೀಶ್ ತಿಳಿಸಿದ್ದಾರೆ.

ಇನ್,ನು ಇಸ್ಕಾನ್ ಸಂಸ್ಥೆಯೂ 21 ದಿನಕ್ಕೆ ಬೇಕಾಗುವಷ್ಟು ಮಾತ್ರ ಆಹಾರ ಸಾಮಗ್ರಿಯ 40 ಸಾವಿರ ಕಿಟ್ ವಿತರಿಸಿತ್ತು. ಒಟ್ಟಿನಲ್ಲಿ ಬಿಬಿಎಂಪಿ, ರಾಜ್ಯ ಸರ್ಕಾರ ಮುಂದುವರಿದ ಲಾಕ್​ಡೌನ್ ಅವಧಿಯಲ್ಲಿ ಬಡಜನ, ಕೂಲಿಕಾರ್ಮಿಕರ ಆಹಾರಕ್ಕೆ ಯಾವ ವ್ಯವಸ್ಥೆ ಮಾಡಲಿದೆ ಎಂದು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.