ETV Bharat / state

ಬೊಮ್ಮಾಯಿ ಭ್ರಷ್ಟರು, ಸಂಘ ಪರಿವಾರದ ಕೈಲಾಡುವ ಪಪ್ಪೆಟ್ ಸಿಎಂ: ಕಾಂಗ್ರೆಸ್‌ ಟೀಕೆ - ಪ್ರಧಾನಿಗಳು ಈಗ ಮೌನವ್ರತ

ಬೊಮ್ಮಾಯಿ ಅವರೇ, ತಾವು ಕೇವಲ ಭ್ರಷ್ಟರ ಹಾಗೂ ಸಂಘ ಪರಿವಾರದ ಕೈಲಾಡುವ ಪಪ್ಪೆಟ್ ಸಿಎಂ ಮಾತ್ರವೇ? ಎಂದು ಕಾಂಗ್ರೆಸ್​ ಟೀಕಿಸಿದೆ.

who-is-the-unknown-cm-congress-question-to-bommai-in-twitter
ನಿಮಗೂ ಮೀರಿ ಆಳುತ್ತಿರುವ ಅಜ್ಞಾತ ಸಿಎಂ ಯಾರು: ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ
author img

By

Published : Aug 25, 2022, 3:25 PM IST

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್​ ಟ್ವೀಟಾಸ್ತ್ರ ಮುಂದುವರೆಸಿದೆ. ನಿಮಗೂ ಮೀರಿ ಆಳುತ್ತಿರುವ ಅಜ್ಞಾತ ಸಿಎಂ ಯಾರು ಎಂದು ಇಂದು ಖಾರವಾಗಿ ಪ್ರಶ್ನಿಸಿ ಟ್ವೀಟ್ ಮಾಡಿದೆ.

ಸಿಎಂ ಮಾತಿಗೇ ಗೌರವವಿಲ್ಲ, ಸಿಎಂ ಮಾತನ್ನು ಯಾರೂ ಕೇಳ್ತಿಲ್ಲ. ಬೊಮ್ಮಾಯಿ ಅವರೇ, ತಾವು ಕೇವಲ ಭ್ರಷ್ಟರ ಹಾಗೂ ಸಂಘ ಪರಿವಾರದ ಕೈಲಾಡುವ ಪಪ್ಪೆಟ್ ಸಿಎಂ ಮಾತ್ರವೇ?. ಅಧಿಕಾರಿಗಳು ನಿಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ ಎಂದಾದರೆ ಸರ್ಕಾರ ಯಾರ ಹಿಡಿತದಲ್ಲಿದೆ ಎಂದೂ ಕಾಂಗ್ರೆಸ್ ಕೇಳಿದೆ.

ಇದನ್ನೂ ಓದಿ: ಭ್ರಷ್ಟಾಚಾರದ ರಾಜಧಾನಿಯಾಗಿದೆ ಕರ್ನಾಟಕ.. ಫುಡ್‌ ಮೆನುವಿನಂತೆ ಲೇವಡಿ ಮಾಡಿದ ಡಿಕೆಶಿ

ಸಚಿವ 'ಮನಿ'ರತ್ನ ಅವರ ವಿರುದ್ಧ ಹಣ ವಸೂಲಿಯ ಆರೋಪ ಇದು ಮೊದಲೇನಲ್ಲ. ತೋಟಗಾರಿಕಾ ಇಲಾಖೆಯಲ್ಲೂ ಹಣ ವಸೂಲಿ ಮಾಡಿದ ಆರೋಪದ ಬಗ್ಗೆ ಪ್ರಧಾನಿಗೆ ಪತ್ರ ಹೋಗಿತ್ತು. ಹಿಂದೆ ಇದೇ ಮುನಿರತ್ನರ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದ ಪ್ರಧಾನಿಗಳು ಈಗ ಮೌನವ್ರತ ಪಾಲಿಸುತ್ತಿರುವುದೇಕೆ?. ಪತ್ರಕ್ಕೆ ಪ್ರತಿಕ್ರಿಯೆ ಇಲ್ಲವೇಕೆ ಎಂದು ಟ್ವೀಟಿಸಿದೆ.

ಇದನ್ನೂ ಓದಿ: ಕೆಂಪಣ್ಣರನ್ನು ಮೆಂಟಲ್ ಆಸ್ಪತ್ರೆಗೆ ಕಳುಹಿಸಿ.. ಕೃಷಿ ಸಚಿವ ಬಿಸಿ ಪಾಟೀಲ್ ಗರಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.